More

    ‘ಖಾಸಗಿ ಆಸ್ಪತ್ರೆಗಳಲ್ಲಿ 250 ರೂಪಾಯಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಫ್ರೀ’ ಲಸಿಕಾ ಕೇಂದ್ರದ ಆಯ್ಕೆ ನಿಮ್ಮದು ಎಂದು ಆರೋಗ್ಯ ಇಲಾಖೆ

    ನವದೆಹಲಿ: 60 ವರ್ಷ ಮೇಲ್ಪಟ್ಟವರು ಮತ್ತು ಇತರ ದೀರ್ಘಾವದಿ ಕಾಯಿಲೆಗಳಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟವರಿಗೆ ಮಾರ್ಚ್​ 1ರಿಂದ ಕರೊನಾ ಲಸಿಕೆ ಲಭ್ಯವಾಗಲಿದ್ದು, ಅದರ ದರವನ್ನು ಕೇಂದ್ರ ಆರೋಗ್ಯ ಸಚಿವಾಲಯ ನಿಗದಿ ಮಾಡಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಡೋಸೇಜ್​ಗೆ 250 ರೂಪಾಯಿಯಂತೆ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ವಿತರಿಸಲು ನಿರ್ಧರಿಸಲಾಗಿದೆ.

    ದೇಶದಲ್ಲಿನ ಸರ್ಕಾರಿ ಆಸ್ಪತ್ರೆಗಳನ್ನು ಹೊರೆತುಪಡಿಸಿ 10 ಸಾವಿರ ಖಾಸಗಿ ಆಸ್ಪತ್ರೆಗಳಲ್ಲೂ ಲಸಿಕೆ ವಿತರಣೆ ಮಾಡಲಾಗುವುದು. ಅಲ್ಲಿ ಪ್ರತಿ ಡೋಸೇಜ್​ ಲಸಿಕೆಗೆ 250 ರೂಪಾಯಿ ಶುಲ್ಕ ಪಡೆಯಲಾಗುವುದು. ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಸಂಪೂರ್ಣ ಉಚಿತವಾಗಿರಲಿದೆ. ಲಸಿಕೆ ಪಡೆಯುವವರು ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಯಲ್ಲಿ ಲಸಿಕೆ ಪಡೆಯುವ ಆಯ್ಕೆ ಮಾಡಿಕೊಳ್ಳಬಹುದು ಎಂದು ಸಚಿವಾಲಯ ತಿಳಿಸಿದೆ.

    60 ವರ್ಷ ಮೇಲ್ಪಟ್ಟವರು ವಯಸ್ಸಿಗೆ ದೃಢೀಕರಣವಾಗುವಂತಹ ದಾಖಲಾತಿಯನ್ನು ಸಲ್ಲಿಸಿ ಲಸಿಕೆ ಪಡೆಯಬಹುದು ಹಾಗೆಯೇ 45 ವರ್ಷ ಮೇಲ್ಪಟ್ಟಿದ್ದು, ದೀರ್ಘಾವದಿ ಕಾಯಿಲೆಯಿಂದ ಬಳಲುತ್ತಿರುವವರು ವೈದ್ಯರಿಂದ ಕಾಯಿಲೆಯ ಬಗ್ಗೆ ದೃಢೀಕರಣ ಪತ್ರ ತಂದು ತೋರಿಸಿ ಲಸಿಕೆ ಪಡೆಯಬಹುದು ಎನ್ನಲಾಗಿದೆ. (ಏಜೆನ್ಸೀಸ್​)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಲಾಕ್​ಡೌನ್​ ವಿಸ್ತರಣೆ; ಮಾರ್ಚ್​ 8ರವರೆಗೆ ಮನೆಯಲ್ಲೇ ಇರಿ ಎಂದ ಸರ್ಕಾರ

    ಚಿನ್ನ, ಬೆಳ್ಳಿ ದರದಲ್ಲಿ ಭಾರೀ ಇಳಿಕೆ! ಚಿನ್ನಾಭರಣ ಪ್ರಿಯರು ಫುಲ್​ ಖುಷ್​!

    ಪಿಸ್ತೂಲು ಹೇಗೆ ವರ್ಕ್​ ಆಗುತ್ತದೆಯೆಂದು ನೋಡಲು ಸೋದರಳಿಯನಿಗೇ ಗುಂಡಿಟ್ಟ ಮಾವ! ವಿಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts