More

    ಮುಖ್ಯಮಂತ್ರಿ ಯಡಿಯೂರಪ್ಪನವರ ಭೇಟಿ ಈಗ ಮೊದಲಿನಷ್ಟು ಸುಲಭವಲ್ಲ…ಸಿಎಂ ಕಚೇರಿಯ ಕಟ್ಟುನಿಟ್ಟಿನ ಸೂಚನೆಗಳಿವು…

    ಬೆಂಗಳೂರು: ರಾಜ್ಯಾದ್ಯಂತ ಕರೊನಾ ಭೀತಿ ಹೆಚ್ಚಾಗಿದೆ. ಯಾವುದೇ ಸಾರ್ವಜನಿಕ ಸಭೆ, ಸಮಾರಂಭಗಳು ನಡೆಯುತ್ತಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪನವರೂ ಕೂಡ ಹೆಚ್ಚಿನ ಜಾಗೃತಿ ವಹಿಸುತ್ತಿದ್ದಾರೆ. ಇಂದು ವಿಧಾನ ಪರಿಷತ್​ ಮುಖ್ಯ ಸಚೇತಕ ಮಹಾಂತೇಶ ಕವಟಗಿ ಅವರ ಪುತ್ರಿಯ ಸರಳ ವಿವಾಹಕ್ಕೆ ಭೇಟಿ ನೀಡಿದ್ದ ಅವರು, ಕೈಗೆ ಸ್ಯಾನಿಟೈಸರ್ ಹಾಕಿಕೊಂಡೇ ವಧು-ವರರಿಗೆ ಶುಭಕೋರಿದರು.

    ಹಾಗೇ ಸದ್ಯದ ಮಟ್ಟಿಗೆ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿಯಾಗಲು ಅವರ ನಿವಾಸಕ್ಕೆ ತೆರಳುವವರು ಮತ್ತು ಅಲ್ಲಿ ಕೆಲಸ ಮಾಡುತ್ತಿರುವವರು ಹೇಗೆ ಇರಬೇಕು. ಕರೊನಾ ಮುನ್ನೆಚ್ಚರಿಕೆ ಕ್ರಮವನ್ನು ಹೇಗೆ ತೆಗೆದುಕೊಳ್ಳಬೇಕು ಎಂಬುದನ್ನು ಸಿಎಂ ಕಚೇರಿ ತಿಳಿಸಿದೆ.

    ಯಡಿಯೂರಪ್ಪನವರನ್ನು ಭೇಟಿಯಾಗಲು ತೆರಳುವವರ ಮೇಲೆ ಸಿಎಂ ಕಚೇರಿಯಲ್ಲಿ ಇರುವವರು ನಿಗಾ ಇಡಲಿದ್ದಾರೆ. ಹಾಗೇ ಅಲ್ಲಿನ ಸಿಬ್ಬಂದಿಯೂ ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಿದ್ದಾರೆ. ಮುಖ್ಯಮಂತ್ರಿಯರವನ್ನು ಭೇಟಿಯಾಗಲು ಬರುವವರಿಗೆ ಹಾಗೂ ಅಲ್ಲಿ ಕೆಲಸ ಮಾಡುತ್ತಿರುವರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಿಎಂ ಕಚೇರಿ ನೀಡಿದ ಸೂಚನೆಗಳು ಹೀಗಿವೆ:

    • ಯಾವುದೇ ವ್ಯಕ್ತಿ ಇರಲಿ, ಅವರು ಯಾವ ಪಕ್ಷದ ರಾಜಕಾರಣಿಯಾಗಿರಲಿ, ಕಾರ್ಯಕರ್ತರಾಗಿರಲಿ ಅಥವಾ ಮುಖಂಡರಾಗಿರಲಿ, ಹಿರಿಯ ನಾಗರಿಕರು ಇರಲಿ ತಂಡಿ, ಶೀತ, ಜ್ವರ, ಕೆಮ್ಮು, ಉಸಿರಾಟದ ತೊಂದರೆ ಇದ್ದರೆ ಅಂಥವರಿಗೆ ಮುಖ್ಯಮಂತ್ರಿಯವರನ್ನು ಭೇಟಿಯಾಗಲು ಅವಕಾಶ ಇಲ್ಲ.
    • ಸಿಎಂ ನಿವಾಸದಲ್ಲಿ ಇರುವವರಿಗೆ ಯಾರಿಗೇ ಆದರೂ ಶೀತ, ಜ್ವರ, ಕೆಮ್ಮುಗಳಂತಹ ರೋಗಲಕ್ಷಣಗಳು ಕಂಡು ಬಂದರೆ ಅವರನ್ನು ಕೂಡಲೇ ರಜೆಯ ಮೇಲೆ ಕಳಿಸಲಾಗುವುದು. ಹಾಗೂ ಅವರ ಜಾಗಕ್ಕೆ ಬೇರೆ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಲಾಗುವುದು.
    • ಮನೆಯ ಪ್ರವೇಶ ದ್ವಾರ, ನಿರೀಕ್ಷಣಾ ಕೊಠಡಿ, ಮನೆಯ ಒಳಗೆ ಹ್ಯಾಂಡ್​ ಸ್ಯಾನಿಟೈಸರ್​​ಗಳನ್ನು ಇಡಲಾಗುವುದು. ಹಾಗೇ ಭೇಟಿಗೆ ಬರುವವರು ಅದನ್ನು ಬಳಸಲು ನಿವಾಸದಲ್ಲಿ ಕೆಲಸ ಮಾಡುತ್ತಿರುವವರು ತಿಳಿಸಬೇಕು.
      ಮನೆಯೊಳಗೆ ಹೆಚ್ಚಿನ ಜನಸಂದಣಿ ಆಗದಂತೆ ನೋಡಿಕೊಳ್ಳಬೇಕು. ಯಾರಾದರೂ ಸಿಎಂ ಭೇಟಿ ಆಗಲೇಬೇಕು ಎಂದು ಕೇಳಿಕೊಂಡು ಬಂದರೆ ಒಬ್ಬೊಬ್ಬರಾಗಿ ಭೇಟಿ ಮಾಡಿಸಬೇಕು.
    • ಮನೆಯ ಫ್ಲೋರ್​ಗಳನ್ನು ಪದೇಪದೆ ಡಿಟರ್ಜಂಟ್​ಗಳಿಂದ ಸ್ವಚ್ಛಗೊಳಿಸಬೇಕು. ಯಾರಾದರೂ ಬಂದು ಹೋದ ಬಳಿಕ ಮನೆಯ ಪೀಠೋಪಕರಣಗಳನ್ನು ಆಗಾಗ ಶೇ.1ರಷ್ಟು ಸೋಡಿಯಂ ಕ್ಲೋರೈಡ್​ನಿಂದ ಶುಚಿಗೊಳಿಸಬೇಕು
      ವಿದೇಶಗಳಿಂದ ಯಾರಾದರೂ ಬಂದರೆ ಅವರಿಗೆ ಕಡ್ಡಾಯವಾಗಿ ಮಾಸ್ಕ್​ ಧರಿಸಲು ಸೂಚಿಸಬೇಕು. ಮಾಸ್ಕ್ ಧರಿಸಿದ ಬಳಿಕವಷ್ಟೇ ಸಿಎಂ ಭೇಟಿಗೆ ಅವಕಾಶ ಇರುತ್ತದೆ.
    • ಮನೆಯಲ್ಲಿ ಕೆಲಸಕ್ಕೆಇರುವವರು ಮತ್ತು ಹೊರಗಿನವರು ಬಂದಾಗ ಯಾರಿಗೆ ಸೀನು, ಕೆಮ್ಮು ಬಂದರೂ ಮೂಗು, ಬಾಯಿಗಳನ್ನು ಟಿಷ್ಯೂ ಪೇಪರ್​, ಕರವಸ್ತ್ರಗಳಿಂದ ಮುಚ್ಚಿಕೊಳ್ಳಬೇಕು.

    ಬೇರೆಯವರ ಕೈ ದಾನ ಪಡೆದು ದೇಹಕ್ಕೆ ಜೋಡಿಸಿಕೊಂಡ ಯುವತಿಯ ಕೈಗಳಲ್ಲಿ ಪವಾಡ! ಶಾಕ್​ ಆದ ವೈದ್ಯರು

    ಕರೊನಾ ಭೀತಿ: ಸ್ಯಾನಿಟೈಸರ್ ಹಾಕಿಕೊಂಡು ನವ ವಧು-ವರರಿಗೆ ಸಿಎಂ ಬಿಎಸ್​​ವೈ ಶುಭಹಾರೈಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts