More

    ವಿಮಾನ ಪ್ರಯಾಣದಲ್ಲೇ ಮೃತಪಟ್ಟ ತಾಯಿಯ ಮೃತದೇಹ ವಾಪಸ್​ ಪಡೆಯಲು ಹೆಣಗಾಡುತ್ತಿರುವ ಮುಂಬೈನ ವೈದ್ಯ ಕುಟುಂಬ!

    ಮುಂಬೈ: ಇದೊಂದು ಹೃದಯವಿದ್ರಾವಕ ಘಟನೆ. ಇಲ್ಲಿನ ದಂತ ವೈದ್ಯರೊಬ್ಬರು ತನ್ನ ತಾಯಿ ಪಾರ್ಥಿವ ಶರೀರಕ್ಕಾಗಿ ಕಾಯುವ ಸ್ಥಿತಿ ಬಂದೊದಗಿದೆ.

    ಮುಂಬೈ ಮೂಲದ ದಂತ ವೈದ್ಯ ಪುನೀತ್​ ಮೆಹ್ರಾ, ಆಸ್ಟ್ರೇಲಿಯಾದಿಂದ ತಾಯಿ ರೀಟಾ ಮೆಹ್ರಾ ಅವರೊಡನೆ ಮುಂಬೈಗೆ ಮರಳುತ್ತಿದ್ದರು. ಆಗ ವಿಮಾನದಲ್ಲೇ ತಾಯಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದರು.

    ತಕ್ಷಣ ವಿಮಾನವನ್ನು ಚೀನಾದ ಝೆಂಗ್​ಝೌ ವಿಮಾನನಿಲ್ದಾಣದಲ್ಲಿ ಇಳಿಸಲಾಗಿತ್ತು. ನಂತರ ತಾಯಿ ಶವವನ್ನು ಅಲ್ಲಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಆದರೆ ಇದಾಗಿ ಮೂರು ವಾರ ಕಳೆದರೂ ತಾಯಿ ಶವ ವಾಪಸ್​ ಬರುವುದು ಖಾತ್ರಿಯಾಗಿಲ್ಲ. ಹೀಗಾಗಿ ಕುಟುಂಬ ಚಿಂತೆಯಲ್ಲಿದೆ.

    “ಏನಾಗಿದೆ ಅಂತ ತಿಳಿದಿಲ್ಲ, ನಾನು ಪ್ರಧಾನಿ, ರಾಷ್ಟ್ರಪತಿ ಅವರಿಗೆ ಪತ್ರ ಬರೆದಿದ್ದೇನೆ. ಆದರೂ ಈ ಬಗ್ಗೆ ಯಾವ ಕ್ರಮವೂ ಕೈಗೊಂಡಿಲ್ಲ. ನನ್ನ ತಾಯಿ ಮೃತದೇಹ ಯಾವಾಗ ವಾಪಸ್​ ಬರುತ್ತದೋ ತಿಳಿಯುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು ಡಾ. ಮೆಹ್ರಾ.

    ಮುಂದಿನ ವಾರಗಳಲ್ಲಿ ವಿಶೇಷ ವಿಮಾನವೊಂದು ಚೀನಾಗೆ ತೆರಳಲಿದೆ. ಹಾಗಾಗಿ ತಾಯಿ ಶವ ವಾಪಸ್​ ತರಿಸಿಕೊಡಿ ಎಂದು ಪುನೀತ್​ ಮೆಹ್ರಾ ಸಂಬಂಧ ಪಟ್ಟ ಇಲಾಖೆಗೆ ದುಂಬಾಲು ಬಿದ್ದಿದ್ದಾರೆ.

    ನಾವು ಪ್ರಧಾನಿಗೆ ಮತ್ತು ವಿದೇಶಾಂಗ ಸಚಿವಾಲಯಕ್ಕೂ ಮನವಿ ಮಾಡುತ್ತೇವೆ. ಅವರಿಂದ ಸಹಾಯವಾಗುತ್ತದೆ ಎಂಬ ನಂಬಿಕೆ ನಮ್ಮದು. ಹೆಂಡತಿ ಕಳೇಬರ ತರದೇ ಅಂತಿಮ ಸಂಸ್ಕಾರದ ವಿಧಿವಿಧಾನಗಳನ್ನು ಪೂರೈಸುವುದು ಹೇಗೆ ಎಂದು ಪ್ರಶ್ನಿಸುತ್ತಾರೆ ಪುನೀತ್​ ತಂದೆ ಡಾ. ರಾಜೇಂದ್ರ ಮೆಹ್ರಾ.

    ಕೊರೊನಾ ವೈರಸ್​ನ ಭಯದಿಂದಾಗಿ ಶವ ಹೊರ ತರುವ ಕೆಲಸ ಸುಲಭವಾಗಿ ಆಗುತ್ತಿಲ್ಲ. ಹಾಗಾಗಿ ಸಮಯ ಹಿಡಿಯುತ್ತಿದೆ. ಇದು ಚೀನಾದಲ್ಲಿ ಕಠಿಣ ಸಮಯ. ಅಲ್ಲಿ ಶವ ಮತ್ತು ವಾಹನಗಳನ್ನು ಹೊರ ತೆಗೆಯಲು ಕಷ್ಟವಾಗುತ್ತಿದೆ. ಅಷ್ಟೊಂದು ಕಠಿಣ ನಿಯಮಗಳನ್ನು ಅನುಸರಿಸಲಾಗುತ್ತಿದೆ. ಆದರೂ ನಾವು ಪ್ರಯತ್ನ ಪಡುತ್ತಿದ್ದೇವೆ ಎಂದು ಚೀನಾದಲ್ಲಿ ಭಾರತದ ರಾಯಭಾರ ಕಚೇರಿ ಈ ಕುಟುಂಬಕ್ಕೆ ರವಾನಿಸಿದ ಪತ್ರದಲ್ಲಿ ತಿಳಿಸಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts