More

    ‘ಒಮ್ಮೆ ಹೀಗಾದರೆ…ಕರೊನಾದಿಂದ ದೇಶಕ್ಕೊಂದು ಅನುಗ್ರಹ ಸಿಕ್ಕಂತಾಗುತ್ತದೆ’: ಆರೋಗ್ಯ ಸಚಿವ ಹರ್ಷವರ್ಧನ್​

    ನವದೆಹಲಿ: ದೇಶಕ್ಕೆ ಕರೊನಾ ಸಂಕಷ್ಟ ಎದುರಾಗಿದೆ ಈ ಸಮಯದಲ್ಲಿ ನಮ್ಮ ಸರ್ಕಾರ ಜನರ ಆರೋಗ್ಯ ಸುರಕ್ಷತೆ ಮತ್ತು ಆರ್ಥಿಕ ಅಭಿವೃದ್ಧಿಗಳೆರಡರ ಬಗ್ಗೆಯೂ ಗಮನವಹಿಸಿ, ಸಮತೋಲನ ಮಾಡುತ್ತಿದೆ ಎಂದು ಆರೋಗ್ಯ ಸಚಿವ ಹರ್ಷವರ್ಧನ್​ ಅವರು ಹೇಳಿದ್ದಾರೆ.

    ಹಾಗೇ, ನಮ್ಮ ದೇಶದಲ್ಲಿ ಕೊವಿಡ್​-19 ಸಮುದಾಯ ಪ್ರಸರಣದ ಹಂತಕ್ಕೆ ತಲುಪಿಲ್ಲ. ಈ ವಿಚಾರದಲ್ಲಿ ನಾವು ಸುರಕ್ಷಿತವಾಗಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

    ಇದನ್ನೂ ಓದಿ: ಯುವ ಪತ್ರಕರ್ತೆ ಆತ್ಮಹತ್ಯೆ…ರಾಜಕೀಯ ಮುಖಂಡ ಅರೆಸ್ಟ್​..

    ಈಗ ಕರೊನಾ ವೈರಸ್​​ನಿಂದ ರಕ್ಷಣೆ ಪಡೆಯಲು ಅನುಸರಿಸುತ್ತಿರುವ ಸ್ವಚ್ಛತಾ ಕ್ರಮಗಳನ್ನು, ಕೊವಿಡ್​-19 ನಿರ್ನಾಮದ ಬಳಿಕವೂ ಮುಂದುವರಿಸಿಕೊಂಡು ಹೋಗಬೇಕು. ಆಗಾಗ ಕೈ ತೊಳೆಯುವುದು, ಮಾಸ್ಕ್​ ಹಾಕುವುದು, ಕಂಡಕಂಡಲ್ಲಿ ಉಗುಳದೆ ಇರುವುದು, ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಸೇರಿ ಎಲ್ಲ ರೀತಿಯ ಸ್ವಚ್ಛತಾ ಕ್ರಮಗಳನ್ನು ಕರೊನಾ ನಂತರವೂ ಅಳವಡಿಸಿಕೊಳ್ಳಬೇಕು. ಒಂದೊಮ್ಮೆ ಹಾಗಾದರೆ, ಈ ಕರೊನಾ ಸಂಕಷ್ಟದ ಕಾಲ ಸದಾ ನೆನಪಿರುತ್ತದೆ. ಕರೊನಾದಿಂದಲೂ ದೇಶಕ್ಕೆ ಒಂದು ಅನುಗ್ರಹ ಸಿಕ್ಕಂತಾಗುತ್ತದೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.

    ದೇಶದ ಜನರು ಸಾಮಾಜಿಕ ಅಂತರ ನಿಯಮವನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಕೈಗಳನ್ನು ಆಗಾಗ ತೊಳೆದುಕೊಳ್ಳಬೇಕು. ನಮ್ಮ ನಿತ್ಯದ ನಡವಳಿಕೆಯಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಳ್ಳಬೇಕು ಹಾಗೂ ಅದನ್ನು ಕೊವಿಡ್​ ನಂತರದ ಜೀವನದಲ್ಲೂ ಅಳವಿಡಿಸಿಕೊಳ್ಳಬೇಕು ಎಂಬುದನ್ನು ಹರ್ಷವರ್ಧನ್ ಅವರು ಒತ್ತಿ ಹೇಳಿದ್ದಾರೆ. (ಏಜೆನ್ಸೀಸ್)

    ಇದನ್ನೂ ಓದಿ: ಹಾಲಿ ಮತ್ತು ಮಾಜಿ ಯೋಧರಿಗೆ ಕರೊನಾ ಸೋಂಕು; ದೆಹಲಿಯಲ್ಲಿ ಚಿಕಿತ್ಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts