More

    ಸ್ವತಃ ಬೀದಿಗಿಳಿದ ಬೆಂಗಳೂರು ಪೊಲೀಸ್ ಕಮಿಷನರ್: ಖುದ್ದು ವಾಹನ ತಪಾಸಣೆ, ಕಾರ್ಮಿಕರ ಯೋಗಕ್ಷೇಮ ವಿಚಾರಣೆ

    ಬೆಂಗಳೂರು: ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಶುಕ್ರವಾರ ತಲಘಟ್ಟಪುರದಲ್ಲಿ ನೆಲೆಸಿರುವ ಕಟ್ಟಡ ಕಾರ್ಮಿಕರ ಯೋಗಕ್ಷೇಮ ವಿಚಾರಿಸಿದರು.

    ತಲಘಟ್ಟಪುರ ಠಾಣಾ ವ್ಯಾಪ್ತಿಯ ಜ್ಯುಡಿಷಿಯಲ್ ಲೇಔಟ್‌ನಲ್ಲಿ ವಾಸಿಸುತ್ತಿರುವ ಉತ್ತರ ಭಾರತ ಮೂಲದ ಕಾರ್ಮಿಕರನ್ನು ಭಾಸ್ಕರ್ ರಾವ್ ಭೇಟಿಯಾದರು.

    ಜಾರ್ಖಂಡ್, ಉತ್ತರ ಪ್ರದೇಶ ಸೇರಿ ಉತ್ತರ ಭಾರತದ 700ಕ್ಕೂ ಅಧಿಕ ಕಟ್ಟಡ ಕಾರ್ಮಿಕರನ್ನು ಸಾಮಾಜಿಕ ಅಂತರದಲ್ಲಿ ನಿಲ್ಲಿಸಿ, ಏನಾದರೂ ಸಮಸ್ಯೆಗಳಾಗುತ್ತಿವೆಯೇ ಎಂದು ವಿಚಾರಿಸಿ, ಧೈರ್ಯ ತುಂಬಿದರು. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಮನೆಯೊಳಗೆ ಇರುವಂತೆ ಸಲಹೆ ನೀಡಿದರು.

    ಇದಾದ ಬಳಿಕ, ತಲಘಟ್ಟಪುರ ನೈಸ್ ರಸ್ತೆ ಭಾಗದಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ಪರಿಶೀಲನೆ ನಡೆಸಿದರು. ಚೆಕ್‌ಪೋಸ್ಟ್‌ಗಳಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ನಿಲ್ಲಿಸಿ ವಿಚಾರಿಸಿದರು.

    ಮಹಿಳಾ ಪಿ.ಜಿ.ಗೆ ಭೇಟಿ:
    ನಂತರ ಆಗ್ನೇಯ ವಿಭಾಗದ ಮೈಕೋ ಲೇಔಟ್‌ನಲ್ಲಿರುವ ಮಹಿಳಾ ಪಿ.ಜಿ.ಗೆ ಭೇಟಿ ನೀಡಿದ ಭಾಸ್ಕರ್ ರಾವ್, ಮೂಲಸೌಲಭ್ಯ ಪೂರೈಕೆ ಕುರಿತು ಮಾಹಿತಿ ಕಲೆ ಹಾಕಿದರು. ಅಲ್ಲದೆ, ಏನಾದರೂ ಸಮಸ್ಯೆಯಾದರೆ ತಿಳಿಸುವಂತೆ ಸೂಚಿಸಿದರು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಎಲ್ಲರೂ ಕಾನೂನನ್ನು ಸೂಕ್ತ ರೀತಿಯಲ್ಲಿ ಪಾಲಿಸುವಂತೆ ಸೂಚಿಸಿದರು. ಆಗ್ನೇಯ ವಿಭಾಗದ ಚೆಕ್‌ಪೋಸ್ಟ್‌ಗಳಿಗೆ ಭೇಟಿ ನೀಡಿ ಪೊಲೀಸ್ ಸಿಬ್ಬಂದಿ ಬಳಿ ತಪಾಸಣೆ ಬಗ್ಗೆ ಮಾಹಿತಿ ಕಲೆ ಹಾಕಿದರು.

    ನೀರು, ಆಹಾರವಿಲ್ಲದೇ ಪಕ್ಷಿಗಳ ಒದ್ದಾಟ: ಹಸಿವಿನಿಂದ ನಿತ್ರಾಣವಾಗಿ ಬಿದ್ದ ಹದ್ದಿಗೆ ಸಂಚಾರ ಪೊಲೀಸರ ಆರೈಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts