More

    VIDEO: ಲಾಕ್​ಡೌನ್​ ನಾಮಕರಣ: ಮೂರು ಕರೊನಾ ಹಾಟ್​ಸ್ಫಾಟ್​ ಜಿಲ್ಲೆಗಳಲ್ಲಿರುವ ಕುಟುಂಬಸ್ಥರು ಸೇರಿ ಮಗುವಿಗೆ ಚೆಂದನೆಯ ಹೆಸರಿಟ್ಟಿದ್ದು ಹೇಗೆ ಗೊತ್ತಾ?

    ಬಾಗಲಕೋಟೆ: ಲಾಕ್​ಡೌನ್​ ಇದ್ದುದರಿಂದ ಮಗುವಿನ ನಾಮಕರಣವನ್ನು ವಿಡಿಯೋ ಕಾಲ್​ ಮೂಲಕ ನಡೆಸಿದ ಘಟನೆ ನಡೆದಿದೆ.
    ಅದ್ದೂರಿಯಾಗಿ ಸಮಾರಂಭ ಹಮ್ಮಿಕೊಳ್ಳದೆ, ಅತಿಥಿಗಳೆಲ್ಲ ಒಂದೇ ಮನೆಯಲ್ಲಿ ಗುಂಪು ಸೇರದೆ ವಿಡಿಯೋ ಕಾಲ್ ಮೂಲಕವೇ ಮೂರು ಜಿಲ್ಲೆಗಳಲ್ಲಿರುವ ಕುಟುಂಬಸ್ಥರು ನಾಮಕರಣದಲ್ಲಿ ಪಾಲ್ಗೊಂಡಿದ್ದರು.

    ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದ ಸಾಗರ ಹಂಜಿ ಅವರ ಪುತ್ರಿಯ ನಾಮಕರಣ ಕಾರ್ಯಕ್ರಮ ಇದಾಗಿತ್ತು. ಸಮಾರಂಭ ನಡೆದಿದ್ದು ಸಾಗರ್​ ಪತ್ನಿ ಸಂಗೀತಾ ಅವರ ತವರುಮನೆ ಶಹಾಪುರ ಪಟ್ಟಣದಲ್ಲಿ. ನಾಮಕರಣ ಮಾಡಬೇಕಾಗಿದ್ದ ಮಗುವಿನ ಸೋದರತ್ತೆ ಬೆಳಗಾವಿ ಜಿಲ್ಲೆಯವರು.

    ಲಾಕ್​ಡೌನ್​ ಇರುವುದರಿಂದ ಒಂದು ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಪ್ರಯಾಣ ಸಾಧ್ಯವೇ ಇಲ್ಲ. ಆದರೆ ಈ ಮೂರು ಕುಟುಂಬದವರು ಸೇರಿ ವಿಡಿಯೋ ಕಾಲ್​ ಮೂಲಕವೇ ಶಾಸ್ತ್ರೋಕ್ತವಾಗಿ ಮಗುವಿಗೆ ಬನಶಂಕರಿ ಎಂದು ಹೆಸರಿಟ್ಟರು. ನಾಮಕರಣದ ಹಾಡನ್ನೂ ಹಾಡಿದರು.

    ಬಾಗಲಕೋಟೆ, ಬೆಳಗಾವಿ ಮತ್ತು ಕಲಬುರಗಿ ಮೂರು ಜಿಲ್ಲೆಗಳೂ ಕರೊನಾ ವೈರಸ್​ ಹಾಟ್​ಸ್ಫಾಟ್​ಗಳಾಗಿವೆ. ಅಲ್ಲಿ ಹೆಚ್ಚಿನ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

    ಭಾರತದ COVID19 ತಡೆ ಹೋರಾಟಕ್ಕೆ ಧರ್ಮದ ಬಣ್ಣ ಹಚ್ಚುವುದನ್ನು ಕೂಡಲೇ ನಿಲ್ಲಿಸಿ :ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಕಮಿಷನ್​ಗೆ ಭಾರತದ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts