More

    ಮದ್ಯಪ್ರಿಯರಿಗೆ ಶಾಕಿಂಗ್​ ನ್ಯೂಸ್​: ಕುಡುಕರ ಆಸೆ ಈಡೇರಿಸಿ ಜೇಬಿಗೆ ಕತ್ತರಿ ಹಾಕಿದ ಸರ್ಕಾರ

    ಬೆಂಗಳೂರು: ಕರೊನಾ ಲಾಕ್​ಡೌನ್​ನಿಂದದಾಗಿ ಬರೋಬ್ಬರಿ ಒಂದೂವರೆ ತಿಂಗಳು ಮದ್ಯವಿಲ್ಲದೇ ಕೆಂಗೆಟ್ಟಿದ್ದ ಮದ್ಯ ಪ್ರಿಯರು ಕೊನೆಗೂ ಕೇಂದ್ರ ಸರ್ಕಾರದ ನಿರ್ಧಾರದಿಂದ ನಿರಾಳರಾಗಿದ್ದಾರೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಮದ್ಯವ್ಯಸನಿಗಳಿಗೆ ಶಾಕ್​ ನೀಡಿದೆ.

    ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕರೊನಾ ವಿಶೇಷ ಪ್ಯಾಕೇಜ್​ ಘೋಷಿಸಿದ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅದೇ ವೇಳೆ ಅಬಕಾರಿ ಸುಂಕ ಹೆಚ್ಚಳ ಮಾಡುವ ಮೂಲಕ ಎಣ್ಣೆ ಪ್ರಿಯರಿಗೆ ಆಘಾತ ನೀಡಿದರು.

    ಇದನ್ನೂ ಓದಿ: VIDEO| ನಾವೇನು ಪಾಕಿಸ್ತಾನದವ್ರ?: ಸರ್ಕಾರ, ಊರಿನವರ ವಿರುದ್ಧ ಮುಂಬೈ ಕನ್ನಡತಿ ಅಸಮಾಧಾನ

    ಕಳೆದ ಆಯವ್ಯಯದಲ್ಲಿ ಅಬಕಾರಿ ಸುಂಕವನ್ನು ಶೇ. 6 ರಷ್ಟು ಹೆಚ್ಚಿಸಲಾಗಿತ್ತು. ಇದೀಗ ಮತ್ತೆ ಶೇ.11 ರಷ್ಟು ಹೆಚ್ಚಳ ಮಾಡಿದ್ದು, ಒಟ್ಟು ಅಬಕಾರಿ ಸುಂಕ 17ಕ್ಕೇರಿದೆ. ಇದರಿಂದ ಕುಡುಕರ ಜೇಬಿಗೆ ಮತ್ತಷ್ಟು ಹೊರೆಯಾಗುವ ಸಾಧ್ಯತೆ ಇದ್ದು, ಸರ್ಕಾರದ ಖಜಾನೆ ತುಂಬುವ ನಿರೀಕ್ಷೆ ಇದೆ.

    ಇನ್ನು ಕರೊನಾ ಲಾಕ್​ಡೌನ್​ನಿಂದ ಕಳೆದ ಒಂದೂವರೆ ತಿಂಗಳಿಂದ ದೂರವಾಗಿದ್ದ ಮದ್ಯ ಇದೀಗ ಮತ್ತೆ ಕುಡುಕರ ಬಳಿ ಸೇರಿದೆ. ಅಂದರೆ ಕಳೆದ ಸೋಮವಾರದಿಂದ ಕರೊನಾ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕೆಲವು ಷರತ್ತುಗಳನ್ನು ವಿಧಿಸಿ ಮದ್ಯ ಮಾರಾಟಕ್ಕೆ ಸರ್ಕಾರ ಅನುಮತಿ ಮಾಡಿಕೊಟ್ಟಿದೆ. ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ಭರ್ಜರಿ ಮದ್ಯ ಮಾರಾಟವಾಗಿದೆ. ಅಲ್ಲದೆ, ಕುಡುಕರ ಉಪಟಳವೂ ಕೂಡ ಅಲ್ಲಲ್ಲಿ ವರದಿಯಾಗಿವೆ.

    ಇದನ್ನೂ ಓದಿ: VIDEO| ಹೆದ್ದಾರಿಯಲ್ಲಿ ಕಾರು ಚಲಾಯಿಸುವಾಗ ಸಿಕ್ಕಿಬಿದ್ದ 5 ವರ್ಷದ ಬಾಲಕನ ಹೇಳಿಕೆ ಕೇಳಿ ದಂಗಾದ ಪೊಲೀಸರು!

    ಲಾಕ್​ಡೌನ್​ ಸಂಕಷ್ಟ- 1610 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಿದ ಸಿಎಂ; ಕ್ಷೌರಿಕರು, ನೇಕಾರರಿಗೆ ಬಂಪರ್​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts