More

    ‘ಟೆಸ್ಟ್ ಕ್ರಿಕೆಟ್‌ನ ದ್ವಿತೀಯ ಇನಿಂಗ್ಸ್‌ನಂತಿದೆ ಕರೊನಾ’ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ

    ಬೆಂಗಳೂರು: ವಿಶ್ವವನ್ನೇ ಕಾಡುತ್ತಿರುವ ಮಹಾಮಾರಿಯ ಅಬ್ಬರದಿಂದಾಗಿ ಸದ್ಯದ ಪರಿಸ್ಥಿತಿ ಟೆಸ್ಟ್ ಕ್ರಿಕೆಟ್‌ನ ದ್ವಿತೀಯ ಇನಿಂಗ್ಸ್‌ನಂತಿದೆ ಎಂದು ಭಾರತದ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ವ್ಯಾಖ್ಯಾನಿಸಿದ್ದಾರೆ. ಇತ್ತೀಚೆಗಷ್ಟೆ ಮಾಜಿ ನಾಯಕ, ಬಿಸಿಸಿಐ ಅಧ್ಯಕ್ಷರೂ ಆದ ಸೌರವ್ ಗಂಗೂಲಿ ಪ್ರಸಕ್ತ ಸ್ಥಿತಿಯನ್ನು ಕಠಿಣ ಪಿಚ್‌ನಲ್ಲಿ ಟೆಸ್ಟ್ ಆಡಿದಂತೆ ಎಂದಿದ್ದರು. ‘ನಾವು ಕರೊನಾ ವೈರಸ್ ವಿರುದ್ಧ ಹೋರಾಡಬೇಕೆಂದರೆ ಒಗ್ಗಟಾಗಿ ಹೋರಾಡಬೇಕು. ಇದು ಟೆಸ್ಟ್ ಪಂದ್ಯ ಇದ್ದಂತೆ. ಟೆಸ್ಟ್ ಪಂದ್ಯ ಐದು ದಿನ ಇರುತ್ತದೆ. ಅಂದರೆ ಪಂದ್ಯ ಗೆಲ್ಲಲು ಸಾಕಷ್ಟು ದೂರ ಕ್ರಮಿಸಬೇಕಾಗುತ್ತದೆ’ ಎಂದು ಭಾರತ ತಂಡದ ಮಾಜಿ ನಾಯಕನೂ ಆದ ಕುಂಬ್ಳೆ ಹೇಳಿದ್ದಾರೆ. ಟೆಸ್ಟ್‌ನಲ್ಲಿ ಕೇವಲ 2 ಇನಿಂಗ್ಸ್ ಇರುವುದು, ಆದರೆ ಇಲ್ಲಿ ಸಾಕಷ್ಟು ಇನಿಂಗ್ಸ್ ಕಾಣಬಹುದು. ಮೊದಲ ಇನಿಂಗ್ಸ್‌ನಲ್ಲಿ ಸಿಕ್ಕಿರುವ ಕೂದಲೆಳೆ ಅಂತರದ ಮುನ್ನಡೆಯಿಂದ ಸಂತೃಪ್ತರಾಗದೆ, ಕಠಿಣವಾದ 2ನೇ ಇನಿಂಗ್ಸ್‌ನಲ್ಲಿ ಹೋರಾಡಬೇಕಿದೆ ಎಂದಿದ್ದಾರೆ. ನಾವು ಈ ಹೋರಾಟದಲ್ಲಿ ಜಯ ದಾಖಲಿಸಲೇಬೇಕು. ಕೇವಲ ಇನಿಂಗ್ಸ್ ಮುನ್ನಡೆಯಿಂದ ತೃಪ್ತಿಪಡುವ ಬದಲಿಗೆ ಪಂದ್ಯವನ್ನೇ ಜಯಿಸೋಣ ಎಂದು ಕರೆನೀಡಿದ್ದಾರೆ. ಕರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಸ್ವಯಂ ಸೇವಕರು, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ದುಡಿಯುತ್ತಿರುವ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.

    ನೀವು ವೈದ್ಯಕೀಯ ಶಿಕ್ಷಣ ಪೂರೈಸಿದ್ದರೆ ಇಲ್ಲಿದೆ ನೋಡಿ ಉದ್ಯೋಗಾವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts