More

    ವೈದ್ಯಕೀಯ ತಪಾಸಣೆಗಾಗಿ ಬಂದು ನಾಪತ್ತೆಯಾಗಿದ್ದ ಸಂಸದ ಶವವಾಗಿ ಪತ್ತೆ; ಮೂವರ ಬಂಧನ

    ಕೋಲ್ಕತ್ತಾ : ಬಾಂಗ್ಲಾದೇಶದ ಆಡಳಿತಾರೂಢ ಅವಾಮಿ ಲೀಗ್‌ನ ಸಂಸದ ಅನ್ವರುಲ್ ಅಜೀಮ್ ಅನಾರ್ ಅವರು ಮೇ 13 ರಿಂದ ನಾಪತ್ತೆಯಾಗಿದ್ದರು. ಆದರೆ ಇದೀಗ ಕೋಲ್ಕತ್ತಾದಲ್ಲಿ ಇವರ ಶವ ಪತ್ತೆಯಾಗಿದೆ.

    ಕೊನೆಯದಾಗಿ ಮೇ 13 ರಂದು ಮಧ್ಯಾಹ್ನ ಅವರು ವೈದ್ಯಕೀಯ ತಪಾಸಣೆಗಾಗಿ ಕೋಲ್ಕತ್ತಾ ಬಳಿಯ ಬಿಧಾನನಗರದ ಮನೆಗೆ ಸ್ನೇಹಿತರ ಜೊತೆ ಹೋದಾಗ ಕೊನೆಯದಾಗಿ ಕಾಣಿಸಿಕೊಂಡರು. ಕೋಲ್ಕತ್ತಾದ ಬಿಧಾನನಗರದಲ್ಲಿರುವ ಕುಟುಂಬದ ಸ್ನೇಹಿತರೊಬ್ಬರ ಪ್ರಕಾರ,  ದೆಹಲಿಗೆ ಪ್ರಯಾಣಿಸುವುದಾಗಿ ತಿಳಿಸಿದ್ದಾರೆ, ಆದರೆ ಮೇ 13 ರಿಂದ ಅವರೊಂದಿಗೆ ಯಾವುದೇ ದೈಹಿಕ ಉಪಸ್ಥಿತಿ ಅಥವಾ ನೇರ ಸಂಪರ್ಕವಿಲ್ಲ. ಮೇ 12ರಂದು ವೈದ್ಯಕೀಯ ತಪಾಸಣೆಗಾಗಿ ಸಂಸದರು ಭಾರತಕ್ಕೆ ಬಂದಿದ್ದರು. ಆದರೆ ಮರುದಿನದಿಂದ ಅವರು ಕಾಣೆಯಾಗಿದ್ದರು. ಈ ಸಂಬಂಧ ಅವರ ಮನೆಯವರು ದೂರು ದಾಖಲಿಸಿದ್ದರು. ಹೀಗಾಗಿ ಪೊಲೀಸರು ಸಂಸದರ ಹುಡುಕಾಟ ನಡೆಸುತ್ತಿದ್ದರು. ಇಂದು ಬೆಳಗ್ಗೆ ಕೋಲ್ಕತ್ತಾದ ನ್ಯೂ ಟೌನ್ ಪ್ರದೇಶದಲ್ಲಿ ಸಂಸದರ ಶವ ಪತ್ತೆಯಾಗಿದೆ.

    ನ್ಯೂ ಟೌನ್ ಕಟ್ಟಡದಲ್ಲಿ ಹಲವಾರು ರಕ್ತದ ಕಲೆಗಳು ಕಂಡುಬಂದಿವೆ. ಅಲ್ಲಿ ಅನ್ವರುಲ್ ಅಜೀಂನನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ.

    ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲಾ ಹಂತಕರು ಬಾಂಗ್ಲಾದೇಶೀಯರು ಎಂಬುದಾಗಿ ತಿಳಿದುಬಂದಿದೆ. ಇದೊಂದು ಯೋಜಿತ ಕೊಲೆ ಎಂದು ಬಾಂಗ್ಲಾದೇಶದ ಗೃಹ ಸಚಿವ ಅಸಾದುಝಮಾನ್ ಖಾನ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts