More

    ಕರೊನಾ ಸೋಂಕಿತ ಮಹಿಳೆಗೆ ಗಂಡು ಮಗು ಜನನ: ವೈದ್ಯಕೀಯ ಸಿಬ್ಬಂದಿಗೆ ಅಭಿನಂದನೆಗಳ ಮಹಾಪೂರ

    ಮೈಸೂರು: ಮಹಾಮಾರಿ ಕರೊನಾ ವೈರಸ್​ ಜಾಗತಿಕವಾಗಿ ಆರೋಗ್ಯ ಬಿಕ್ಕಟ್ಟು ಸೃಷ್ಟಿಸಿರುವ ಕಠಿಣ ಸಂದರ್ಭದಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕರೊನಾ ಸೋಂಕಿತ ಮಹಿಳೆಗೆ ಯಶಸ್ವಿ ಹೆರಿಗೆಯಾಗುವ ಮೂಲಕ ಎಲ್ಲರ ಅಚ್ಚರಿಗೆ ಕಾರಣವಾಗಿದೆ.

    ತಾಯಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ್ದು, ವಿ.ವಿ.ಪುರಂ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಸರ್ಜನ್ ಡಾ. ಸುಚಿತ್ರಾ, ಡಾ. ಅಯೇಷಾ, ಡಾ. ಪೂನಂ, ಡಾ. ಪಲ್ಲವಿ, ಡಾ. ರಚನಾ, ಡಾ. ಸುಶ್ರುತಾ ಹಾಗೂ ಸ್ಟ್ಯಾಫ್ ನರ್ಸ್‌ಗಳಾದ ಮೀರಾ, ಆಶೀಕ್ ಮತ್ತು ಗ್ರೂಪ್ ಡಿ ಸಿಬ್ಬಂದಿ ಅನ್ನಪೂರ್ಣ ಅವರಿಂದ ಹೆರಿಗೆ ನಡೆದಿದ್ದು, ಅವರ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ: ಅಪ್ಪನೆಂಬ ಅದ್ಭುತ| ಫೇಲಾದಾಗ್ಲೂ ಸ್ವೀಟ್ ಹಂಚಿದ್ದ!

    ಮಗು 2.7 ಕೆ.ಜಿ. ತೂಕದೊಂದಿಗೆ ಆರೋಗ್ಯವಾಗಿದ್ದು, ಕರೊನಾ ಸೋಂಕಿತ ತಾಯಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ವೈದ್ಯಕೀಯ ಸಿಬ್ಬಂದಿಗೆ ಎಲ್ಲೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. (ದಿಗ್ವಿಜಯ ನ್ಯೂಸ್​)

    ಯುವತಿಯರೇ ಹುಷಾರ್​ ಇಂಥವರು ಇರ್ತಾರೆ: ಈತನ ಖತರ್ನಾಕ್​ ಬುದ್ಧಿ ಗೊತ್ತಾದ್ರೆ ಬೆರಗಾಗ್ತೀರಾ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts