More

    ಕರೊನಾದಿಂದ ಎರಡು ಸಾವಾದರೂ ಎಚ್ಚೆತ್ತುಕೊಳ್ಳದ ಮಂದಿ; ಉಚಿತ ಅಕ್ಕಿಗಾಗಿ ಸರ್ಕಾರಿ ಶಾಲೆ ಎದುರು ನೂಕುನುಗ್ಗಲು

    ಕಲಬುರಗಿ: ಜಿಲ್ಲೆಯಲ್ಲಿ ಕರೊನಾದಿಂದ ಇಬ್ಬರು ಮೃತಪಟ್ಟಿದ್ದರೂ ಅಲ್ಲಿನ ಜನ ಮಾತ್ರ ಎಚ್ಚೆತ್ತುಕೊಂಡಿಲ್ಲ ಎನಿಸುತ್ತದೆ.
    ಸದ್ಯ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಬೇಸಿಗೆ ರಜಾದ ಅಕ್ಕಿ ವಿತರಣೆ ಮಾಡಲಾಗುತ್ತಿದ್ದು, ಪಾಲಕರು ಮಕ್ಕಳನ್ನೂ ಕರೆದುಕೊಂಡು ಗುಂಪಾಗಿ ಅಕ್ಕಿ ಪಡೆಯಲು ಮುನ್ನುಗ್ಗುತ್ತಿದ್ದಾರೆ.

    ಕರೊನಾ ವೈರಸ್​ ಹರಡುತ್ತಿರುವ ಹಿನ್ನೆಲೆಯಲ್ಲಿ ಲಾಕ್​ಡೌನ್​ ಇದೆ. ಯಾರೂ ಗುಂಪಾಗಬೇಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸರ್ಕಾರ ಅದೆಷ್ಟೋ ಸಲ ಹೇಳಿದರೂ ಜನರು ಮಾತ್ರ ಕಿವಿಗೊಡುತ್ತಿಲ್ಲ.

    ಬೇಸಿಗೆ ರಜೆ ಪ್ರಯುಕ್ತ ಮಕ್ಕಳಿಗೆ ಉಚಿತ ಅಕ್ಕಿ ವಿತರಣೆ ಮಾಡುತ್ತಿರುವ ಅಫ್ಜಲಪುರ ತಾಲೂಕಿನ ಕರ್ಜಗಿ ಗ್ರಾಮದ ಸರ್ಕಾರಿ ಶಾಲೆ, ಎಲ್ಲ ಮಕ್ಕಳನ್ನೂ ಒಟ್ಟಿಗೆ ಕರೆಸಿದೆ. ಅವರ ಜತೆಗೆ ಪಾಲಕರೂ ಆಗಮಿಸಿದ್ದಾರೆ. ಒಂದೆಡೆ ಮಕ್ಕಳ ಗುಂಪು, ಮತ್ತೊಂದೆಡೆ ಪಾಲಕರ ಗುಂಪು. ಒಟ್ಟಾರೆ ಶಾಲೆಯ ಎದುರು ಸಾವಿರಾರು ಜನರ ಸೇರಿದ್ದಾರೆ. ಅಕ್ಕಿಗಾಗಿ ನೂಕಾಟ, ತಳ್ಳಾಟವೂ ನಡೆಯುತ್ತಿದೆ.

    ಇವರೆಲ್ಲ ಮಾಸ್ಕ್​ ಧರಿಸಿಲ್ಲ. ಪರಸ್ಪರ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವುದು ಆತಂಕಕ್ಕೆ ಕಾರಣವಾಗಿದೆ. ಜೀವಕ್ಕಿಂತ ಅಕ್ಕಿಯೇ ಜಾಸ್ತಿಯಾಯ್ತಾ ಎಂಬ ಪ್ರಶ್ನೆ ಉದ್ಭವ ಆಗಿದೆ. (ದಿಗ್ವಿಜಯ ನ್ಯೂಸ್​)

    ಪುಣಜನೂರು: ತರಕಾರಿ ಹೆಸರಿನಲ್ಲಿ ಲಕ್ಷಾಂತರ ರೂ. ಮೌಲ್ಯದ ಸಿಗರೇಟ್ ಸಾಗಾಣಿಕೆ, ಆರೋಪಿಗಳು ವಶಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts