More

    ಔಷಧ ಸಿಂಪಡಣೆ ಹೆಸರಲ್ಲಿ ಹಫ್ತಾ ವಸೂಲಿ; ವ್ಯಾಪಾರಿಗಳಿಂದ ಹಣ ಸುಲಿಗೆ ಮಾಡುತ್ತಿದ್ದವನ ಬಂಧನ

    ಬೆಂಗಳೂರು: ವ್ಯಾಪಾರ ಮಾಡುವ ಜಾಗದಲ್ಲಿ ಬಿಬಿಎಂಪಿಯಿಂದ ಔಷಧ ಸಿಂಪಡಣೆ ಮಾಡಿಸುವುದಾಗಿ ಹಫ್ತಾ ವಸೂಲಿ ಮಾಡುತ್ತಿದ್ದ ಆರೋಪಿಯನ್ನು ಕಲಾಸಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

    ಕಲಾಸಿಪಾಳ್ಯ ನಿವಾಸಿ ರಮೇಶ್ (28) ಬಂಧಿತ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಲಾಸಿಪಾಳ್ಯದಲ್ಲಿ ಅಗತ್ಯ ವಸ್ತುಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಿಬಿಎಂಪಿ ಅನುಮತಿ ಪಡೆದು ಹಲವರು ಔಷಧ ಮಳಿಗೆ, ತರಕಾರಿ ಮತ್ತು ಹಣ್ಣಿನ ವ್ಯಾಪಾರ ಮಾಡಿಕೊಂಡಿದ್ದಾರೆ.

    ಏ.14ರಂದು ಸಂಜೆ 7 ಗಂಟೆಯಲ್ಲಿ ವ್ಯಾಪಾರಿಗಳ ಬಳಿ ಹೋಗಿದ್ದ ರಮೇಶ್, ‘‘ಎಲ್ಲೆಡೆ ಕರೊನಾ ಹರಡುತ್ತಿದೆ. ನೀವು ವ್ಯಾಪಾರ ಮಾಡುವ ಸ್ಥಳದಲ್ಲಿ ಶುಚಿತ್ವ ಕಾಪಾಡಲು ಬಿಬಿಎಂಪಿಯಿಂದ ಔಷಧ ಸಿಂಪಡಣೆ ಮಾಡಿಸುತ್ತೇನೆ. ಅಲ್ಲದೆ, ನೈರ್ಮಲ್ಯಕ ಮತ್ತು ಮುಖಗವಸು ಕೊಡಿಸುತ್ತೇನೆ’’ ಎಂದು ಹೇಳಿ ವ್ಯಾಪಾರಿಗಳಿಂದ ಹಣ ವಸೂಲಿ ಮಾಡಿದ್ದಾನೆ.

    ವ್ಯಾಪಾರಿ ಸೈಯ್ಯದ್ ರಿಯಾಜ್ ಹಫ್ತಾ ಕೊಡಲು ನಿರಾಕರಿಸಿದಾಗ ಅವರಿಗೆ ‘‘ಅಂಗಡಿಯನ್ನು ಖಾಲಿ ಮಾಡಿಸುತ್ತೇನೆ. ವ್ಯಾಪಾರ ಮಾಡಲು ಬಿಡುವುದಿಲ್ಲ’’ ಎಂದು ಧಮ್ಕಿ ಹಾಕಿದ್ದ. ಈ ಕುರಿತು ಸೈಯ್ಯದ್ ಕೊಟ್ಟ ದೂರಿನ ಅನ್ವಯ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಊರಿಗೆ ಬಿಡುತ್ತೇನೆ ಎಂದು ವೃದ್ಧೆಯನ್ನು ತಿರುಪತಿಯಿಂದ ಲಾರಿಯಲ್ಲಿ ಕರೆತಂದ ಚಾಲಕ ಮಾಡಿದ್ದೇನು…?

    ರಸ್ತೆಯಲ್ಲಿದ್ದ ಹಣ ತಗೊಂಡವರಿಗೂ ಕ್ವಾರಂಟೈನ್! ಮಾರ್ಗ ಮಧ್ಯೆ ಕಂಡು ಬಂದಿದ್ದ ಸಾವಿರಾರು ರೂ. ನಗದು ಹಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts