More

    VIDEO| ಜನರೇ ಎಚ್ಚರ… ಆರೋಗ್ಯ ಇಲಾಖೆ ಸಮೀಕ್ಷೆಯಲ್ಲಿದೆ ಬೆಚ್ಚಿಬೀಳಿಸುವ ಸಂಗತಿ

    ಬೆಂಗಳೂರು: ಮಹಾಮಾರಿ ಕರೊನಾ ವೈರಸ್​ ಕುರಿತು ಆರೋಗ್ಯ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಆಘಾತಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ.

    ಆರೋಗ್ಯ ಇಲಾಖೆ ಮನೆ ಮನೆ ಸಮೀಕ್ಷೆ ನಡೆಸಿದ್ದು, ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟ 61 ಲಕ್ಷ ಹಿರಿಯರಿದ್ದಾರೆ ಎಂಬುದು ತಿಳಿದುಬಂದಿದ್ದು, ಹಿರಿಯರಿಗೆ ಕರೊನಾ ವೈರಸ್​ ಹೆಚ್ಚು ಅಪಾಯಕಾರಿಯಾಗಿದೆ. ಬಹು ಬೇಗ ಹಿರಿಯರನ್ನು ಕರೊನಾ ಅಪಾಯಕ್ಕೆ ದೂಡಲಿದೆ ಎಂಬುದು ಸಮೀಕ್ಷೆಯಲ್ಲಿ ಗೊತ್ತಾಗಿದೆ.

    ಇದನ್ನೂ ಓದಿ: ಶೇ.83 ಅಂಕಗಳ ಖುಷಿಯಲ್ಲಿದ್ದಾಕೆ ಆತ್ಮಹತ್ಯೆ ಮಾಡಿಕೊಂಡ ಕಾರಣ ನಿಜಕ್ಕೂ ಶಾಕ್‌

    ಶೇ. 80 ರಷ್ಟು ವಯೋವೃದ್ಧರು ಕರೊನಾದಿಂದಲೇ ಸಾವಿಗೀಡಾಗಿದ್ದಾರೆ. ರಾಜ್ಯದಲ್ಲಿ ಕರೊನಾಗೆ ಬಲಿಯಾದವರ 246 ಮಂದಿ ಪೈಕಿ 170 ಮಂದಿ ವೃದ್ಧರಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 7 ಲಕ್ಷಕ್ಕೂ ಹೆಚ್ಚು ವಯೋವೃದ್ಧರಿದ್ದಾರೆ. ಹೀಗಾಗಿ ಕರೊನಾ ಹಿರಿಯರಿಗೆ ಅತಿ ಬೇಗ ದಾಳಿ ಮಾಡುತ್ತದೆ ಎಂಬುದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಅಪಾಯಕಾರಿಯೆಂದರೆ ಹಿರಿಯರಲ್ಲಿ ಗುಣಮುಖ ಪ್ರಮಾಣವು ಸಹ ತುಂಬಾ ಕಡಿಮೆಯಾಗಿದೆ.

    ಹೀಗಾಗಿ ವಯಸ್ಸಾದವರನ್ನು ಮನೆಯಿಂದ ಹೊರಗೆ ಕಳುಹಿಸಬೇಡಿ ಎಂದು ಆರೋಗ್ಯ ಇಲಾಖೆ ಮನವಿ ಮಾಡಿಕೊಂಡಿದೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿರುವವರು ಕರೊನಾ ಸೋಂಕಿಗೆ ಒಳಗಾದರೆ ಬಹುತೇಕ ಬದುಕುವುದು ವಿರಳ. ಯುವ ವಯಸ್ಕರಲ್ಲಿ ಕರೊನಾ ಪ್ರಭಾವ ತುಂಬಾ ಕಡಿಮೆ ಇದೆ. ಹೀಗಾಗಿ ಹಿರಿಯರು ಇನ್ನಷ್ಟು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಕುಟುಂಬದವರು ಸಹ ತಮ್ಮ ಹಿರಿಯರ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಅವಶ್ಯಕವಾಗಿದೆ. (ದಿಗ್ವಿಜಯ ನ್ಯೂಸ್​)

    ಇದನ್ನೂ ಓದಿ: ಮನೆ ಖಾಲಿ ಮಾಡಮ್ಮ ರೆಹನಾ! ಮಕ್ಕಳ ಮುಂದೆ ಅರೆಬೆತ್ತಲೆಯಾದವಳಿಗೆ ಸಂಕಷ್ಟದ ಮೇಲೆ ಸಂಕಷ್ಟ!

    ಮಾರುಕಟ್ಟೆಯಲ್ಲಿ ಶೀಘ್ರವೇ ಲಭ್ಯವಾಗಲಿದೆ ಪತಂಜಲಿಯ ‘ಕರೊನಿಲ್’​: ಬಾಬಾ ರಾಮ್​ದೇವ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts