More

    1,279 ಎಸ್‌ಡಿಎ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಏ.9 ಕೊನೆಯ ದಿನ: ಅವಧಿ ವಿಸ್ತರಿಸುತ್ತಾ ಕೆಪಿಎಸ್​ಸಿ?

    ದೇಶಾದ್ಯಂತ ಲಾಕ್​ಡೌನ್ ಹಿನ್ನೆಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳು ಬಹುತೇಕ ಸ್ಥಗಿತಗೊಂಡಿದ್ದರೆ, ಪರೀಕ್ಷೆಗಳನ್ನು ಮುಂದೂಡಲಾಗಿದೆ. ಅದರಂತೆ, ಯುಪಿಎಸ್​ಸಿ ಸೇರಿ ಪ್ರಮುಖ ನೇಮಕಾತಿ ಆಯೋಗಗಳೆಲ್ಲ ಪರೀಕ್ಷೆ ದಿನಾಂಕ ಹಾಗೂ ಅಧಿಸೂಚನೆ ಹೊರಡಿಸುವುದನ್ನು ಮುಂದೂಡಿವೆ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಿಸಿವೆ.

    ಅಂತೆಯೇ, ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್​ಸಿ) ಮಾರ್ಚ್​ 9ರಿಂದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 1,279 ಕಿರಿಯ ಸಹಾಯಕ ಹಾಗೂ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು, ಏಪ್ರಿಲ್​ 9 ಕೊನೆಯ ದಿನಾಂಕವಾಗಿದೆ. ಶುಲ್ಕಪಾವತಿಗೆ ಏಪ್ರಿಲ್​ 13ರವರೆಗೆ ಅವಕಾಶ ನೀಡಿದೆ.

    ಈಗಾಗಲೇ ಕೆಪಿಎಸ್​ಸಿ ಕೆಲ ಪರೀಕ್ಷೆ ಹಾಗೂ ದಾಖಲಾತಿ ಪರಿಶೀಲನೆ ಸಂದರ್ಶನ ಪ್ರಕ್ರಿಯೆಯನ್ನು ಮುಂದೂಡಿದೆ. ಆದರೆ, ಎಸ್​ಡಿಎ ಆಕಾಂಕ್ಷಿಗಳಿಗೆ ಅರ್ಜಿ ಸಲ್ಲಿಸಲು ಇನ್ನಷ್ಟು ಕಾಲಾವಕಾಶ ಕಲ್ಪಿಸಲಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆಯಾಗದಿದ್ದಲ್ಲಿ ಸಾವಿರಾರು ಆಕಾಂಕ್ಷಿಗಳಿಗೆ ನಿರಾಶೆಯಾಗುವುದಂತೂ ಖಾತ್ರಿ. ಏಕೆಂದರೆ ಏರಡೂ ದಿನಾಂಕಗಳು ಲಾಕ್​ಡೌನ್​ ಅವಧಿಯೊಳಗೆ ಇವೆ.

    ಇದರ ಹೊರತಾಗಿಯೂ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಲು ಅವಕಾಶ ಇರುವವರು ಕೊನೆಯ ದಿನಾಂಕಕ್ಕೂ ಮುನ್ನವೇ ಅರ್ಜಿ ಸಲ್ಲಿಸುವುದು ಒಳಿತು.

    ಯಾರೆಲ್ಲ ಅರ್ಜಿ ಸಲ್ಲಿಸಬಹುದು?
    ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆ ಪಾಸಾದವರು ಅರ್ಜಿ ಸಲ್ಲಿಸಬಹುದು. ಕನಿಷ್ಠ 18 ವರ್ಷ ಹಾಗೂ ಗರಿಷ್ಠ ವಯೋಮಿತಿ: ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ, ಪ್ರವರ್ಗ2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ -38 ವರ್ಷ, ಎಸ್‌ಸಿ, ಎಸ್‌ಟಿ ಹಾಗೂ ಪ್ರವರ್ಗ-1 ರ ಅಭ್ಯರ್ಥಿಗಳಿಗೆ 40 ವರ್ಷ.
    ವೇತನ ಶ್ರೇಣಿ: 21,400 ರೂ. ದಿಂದ 42,000 ರೂ. ಇರುತ್ತದೆ.

    ಸ್ಪರ್ಧಾತ್ಮಕ ಪರೀಕ್ಷೆ ಸ್ವರೂಪ:
    ಪತ್ರಿಕೆ 1-ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯಾಗಿದೆ. ಇದು ವಿವರಣಾತ್ಮಕವಾಗಿದ್ದು, 150 ಅಂಕಗಳದ್ದಾಗಿರುತ್ತದೆ. ಪತ್ರಿಕೆ 2-ಸಾಮಾನ್ಯ ಕನ್ನಡ/ಸಾಮಾನ್ಯ ಇಂಗ್ಲಿಷ್ ವಸ್ತುನಿಷ್ಠ ಬಹುಆಯ್ಕೆ ಮಾದರಿಯದ್ದಾಗಿದ್ದು, 100 ಅಂಕಗಳದ್ದಾಗಿರುತ್ತದೆ. ಪತ್ರಿಕೆ 3 ಸಾಮಾನ್ಯ ಜ್ಞಾನ, ವಸ್ತುನಿಷ್ಠ ಬಹು ಆಯ್ಕೆ ಮಾದರಿಯ 100 ಅಂಕಗಳ ಪತ್ರಿಕೆಯಾಗಿದೆ. ಪ್ರತಿ ಪತ್ರಿಕೆಗೂ ಪರೀಕ್ಷಾ ಅವಧಿ ಪ್ರತ್ಯೇಕ 1 ಗಂಟೆ 30 ನಿಮಿಷ.

    ಪರೀಕ್ಷಾ ದಿನಾಂಕ: ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ- ಜೂನ್ 6
    ಸ್ಪರ್ಧಾತ್ಮಕ ಪರೀಕ್ಷೆ: ಜೂನ್ 7
    ವಿವರಗಳಿಗೆ : http://kpsc.kar.nic.in/ ಸಂಪರ್ಕಿಸಬಹುದು.

    ಇಎಂಐ ಪಾವತಿ ಗೊಂದಲ ಬೇಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts