More

    ದೇಶದಲ್ಲಿ 3 ಸಾವಿರ ಗಡಿ ದಾಟಿದ ಕರೊನಾ ಸೋಂಕಿತರ ಸಂಖ್ಯೆ: 24 ಗಂಟೆಯಲ್ಲಿ 13 ಸಾವು, 525 ಹೊಸ ಪ್ರಕರಣ

    ನವದೆಹಲಿ: ಮಹಾಮಾರಿ ಕರೊನಾ ವೈರಸ್​ ಸೋಂಕಿಗೆ ರಾಷ್ಟ್ರದಲ್ಲಿ ಬಲಿಯಾದವರ ಸಂಖ್ಯೆ 75ಕ್ಕೇರಿದೆ ಎಂದು ಆರೋಗ್ಯ ಸಚಿವಾಲಯ ಶನಿವಾರ ಮಾಹಿತಿ ನೀಡಿದೆ.

    ಕಳೆದ 24 ಗಂಟೆಗಳಲ್ಲಿ 13 ಸಾವು ಹಾಗೂ 525 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಮೂಲಕ ದೇಶದಲ್ಲಿನ ಕರೊನಾ ಸೋಂಕಿತರ ಸಂಖ್ಯೆ ಮೂರು ಸಾವಿರ ಗಡಿಯನ್ನು ದಾಟಿದ್ದು, ಒಟ್ಟು 3072 ಪ್ರಕರಣಗಳು ವರದಿಯಾಗಿವೆ. ಸೋಂಕಿತರ ಹೆಚ್ಚುವರಿ ಪ್ರಕರಣಗಳಿಗೂ ಕಳೆದ ತಿಂಗಳು ದೆಹಲಿಯಲ್ಲಿ ನಡೆದ ತಬ್ಲಿಘಿ ಜಮಾತ್ ಧಾರ್ಮಿಕ ಕಾರ್ಯಕ್ರಮಕ್ಕೂ ನಂಟಿದೆ. ದೇಶದ 30 ರಷ್ಟು ಪ್ರಕರಣಗಳು ವಿವಾದಾತ್ಮಕ ಕಾರ್ಯಕ್ರಮಕ್ಕೆ ಸಂಬಂಧಿಸಿವೆ ಎಂದು ಹೇಳಲಾಗುತ್ತಿದೆ.

    ಇನ್ನು ವಿಶ್ವದಾದ್ಯಂತ 1 ಮಿಲಿಯನ್​(10 ಲಕ್ಷ)ಗಿಂತಲೂ ಹೆಚ್ಚು ಮಂದಿ ಕರೊನಾ ಸೋಂಕಿಗೆ ಒಳಗಾಗಿದ್ದಾರೆ. 50 ಸಾವಿರಕ್ಕೂ ಹೆಚ್ಚು ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ.

    ದೇಶದ 3072 ಪ್ರಕರಣಗಳಲ್ಲಿ 1023 ಪ್ರಕರಣಗಳಿಗೆ ತಬ್ಲಿಘಿ ಜಮಾತ್​ ನಂಟಿದೆ. ಈ ಪ್ರಕರಣಗಳು ಕೇಂದ್ರಾಡಲಿ ಪ್ರದೇಶಗಳು ಸೇರಿದಂತೆ 17 ರಾಜ್ಯಗಳಿಗೆ ಹರಡಿದೆ. ಈ ಧಾರ್ಮಿಕ ಕಾರ್ಯಕ್ರಮವು ದಕ್ಷಿಣ ದೆಹಲಿಯಲ್ಲಿರುವ 100 ವರ್ಷ ಹಳೆಯದಾದ ಮಸೀದಿಯಲ್ಲಿ ನಡೆದಿದೆ. ಇದನ್ನು ಕರೊನಾ ವೈರಸ್​ ಹಾಟ್​ಸ್ಟಾಟ್​ ಎಂತಲೂ ಸರ್ಕಾರ ಕರೆದಿದೆ. ಕಾರ್ಯಕ್ರಮಕ್ಕೆ ಸಂಬಂಧಿಸಿದ 22 ಸಾವಿರ ಮಂದಿಯನ್ನು ಕ್ವಾರಂಟೈನ್​ನಲ್ಲಿ ಇಡಲಾಗಿದೆ.

    ತಬ್ಲಿಘಿ ಜಮಾತ್​ ಪ್ರಕರಣಗಳ ನಂಟು ತಮಿಳುನಾಡು, ದೆಹಲಿ, ಆಂಧ್ರ ಪ್ರದೇಶ, ತೆಲಂಗಾಣ, ಉತ್ತರ ಪ್ರದೇಶ, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ, ಕರ್ನಾಟಕ, ಅಂಡಮಾನ್​ ಮತ್ತು ನಿಕೋಬಾರ್​, ಉತ್ತರಖಂಡ, ಹರಿಯಾಣ, ಮಹಾರಾಷ್ಟ್ರ, ಹಿಮಾಚಲ ಪ್ರದೇಶ, ಕೇರಳ, ಅರುಣಾಚಲ ಪ್ರದೇಶ ಮತ್ತು ಜಾರ್ಖಂಡ್​ಗಳಲ್ಲಿ ವರದಿಯಾಗಿವೆ. (ಏಜೆನ್ಸೀಸ್​)

    ಯುವ ಸಮೂಹವೇ ಎಚ್ಚರ… ಬೇಡವೇ ಬೇಡ ಕರೊನಾದೆಡೆಗಿನ ತಾತ್ಸಾರ: ಸ್ಪೋಟಕ ಮಾಹಿತಿ ನೀಡಿದ ಕೇಂದ್ರ ಸರ್ಕಾರ!

    ಕೋವಿಡ್​ 19 ಲಾಕ್​ಡೌನ್​ ಕೃಪೆ, ಜಾಲಂಧರ್​ನಿಂದಲೇ ಹಿಮಚ್ಛಾದಿತ ಹಿಮಾಲಯ ಪರ್ವತಶ್ರೇಣಿಯ ದರ್ಶನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts