More

    ಅಗತ್ಯ ವಸ್ತು ಖರೀದಿಗೆ ಹೋಗ್ತೀರಾದರೆ ಈ ಬಗ್ಗೆ ಗಮನಿಸಿ…

    ಬೆಂಗಳೂರು: ಮಾರಕ ಕರೊನಾ ವೈರಸ್​ ಕಟ್ಟಿಹಾಕಲು ಜಾಗತಿಕವಾಗಿ ಹಲವೆಡೆ ಲಾಕ್​ಡೌನ್​ ಹೇರಲಾಗಿದ್ದು, ಭಾರತವೂ ಹೊರತಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್​ 14ರವರೆಗೆ ಸೋಂಕು ಹರಡದಂತೆ ರಾಷ್ಟ್ರಕ್ಕೆ ದಿಗ್ಬಂಧನ ಹೇರಿದ್ದಾರೆ.

    ಸಂದಿಗ್ಧ ಪರಿಸ್ಥಿತಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಎಲ್ಲರೂ ಮನೆಯಲ್ಲೇ ಉಳಿಯುವ ಅವಶ್ಯಕತೆ ಇದೆ. ಆದರೂ ಜೀವನ ಸಾಗಿಸಲು ಅಗತ್ಯ ವಸ್ತುಗಳಾದ ಆಹಾರ ಪದಾರ್ಥಗಳನ್ನು ಖರೀದಿಸಲು ಮನೆಯಿಂದ ಹೊರಹೋಗಬೇಕಾದ ಅನಿವಾರ್ಯತೆಯು ಎದುರಾಗಿದೆ. ಹೀಗಿರುವಾಗ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಮನೆಯಿಂದ ಹೊರಹೋಗಿ ಖರೀದಿ ಮಾಡುವಾಗ ಈ ಕೆಳಗಿನ ಸಲಹೆಗಳನ್ನು ಪಾಲಿಸಿದರೆ ಒಳಿತು.

    ಮೊದಲನೆಯದಾಗಿ ನಿಮ್ಮದೇ ಸ್ವಂತ ಕ್ಯಾರಿ ಬ್ಯಾಗ್​ಗಳನ್ನು ತೆಗದುಕೊಂಡು ಹೋಗಿ. ಅದರಲ್ಲೂ ವಿಶೇಷವಾಗಿ ಬಟ್ಟೆ ಬ್ಯಾಗ್​ಗಳನ್ನು ಕೊಂಡೊಯ್ಯಿರಿ. ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್​ ಅಥವಾ ಪೇಪರ್​ ಬ್ಯಾಗ್​ಗಳನ್ನು ತೆಗೆದುಕೊಂಡು ಹೋಗಬೇಡಿ.

    ಎರಡನೆಯದಾಗಿ ಖರೀದಿಸಿ ಬಂದ ಬಳಿಕ ಬ್ಯಾಗ್​ ಅನ್ನು ಸಂಪೂರ್ಣವಾಗಿ ಬಿಸಿ ನೀರಿನಿಂದ ಶುಚಿಗೊಳಿಸಿರಿ. ಮುಖ್ಯವಾಗಿ ನಿಮ್ಮ ಕೈಗಳನ್ನು ಸೋಪಿನಿಂದ ಚೆನ್ನಾಗಿ ತೊಳೆದುಕೊಳ್ಳಿ.

    ಮೂರನೆಯದಾಗಿ ಪ್ರಮುಖವಾಗಿ ಕೊಂಡುತಂದಂತಹ ಆಹಾರ ಪದಾರ್ಥಗಳನ್ನು ನೀರಿನಲ್ಲಿ ಶುಚಿಗೊಳಿಸಿ ಉಪಯೋಗಿಸುವುದನ್ನು ಮರೆಯಲೇಬೇಡಿ.

    ಬೆಕ್ಕಿಗೂ ಬಂತೂ ಕಿಲ್ಲರ್​ ಕರೊನಾ!

    ಕರೊನಾದಿಂದ ವಿಶ್ವದೆದುರು ಚೀನಾ ವಿಲನ್:​ ಜಾಲತಾಣಗಳಲ್ಲಿ ಚೀನಾ ವಿರುದ್ಧ ಸಮರ ಸಾರಿದ ಪ್ರಸಿದ್ಧ ಹ್ಯಾಷ್​ಟ್ಯಾಗ್​ಗಳಿವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts