More

    ದೇಶದಲ್ಲಿ ಇನ್ನೂ ಸಮುದಾಯಕ್ಕೆ ಹರಡಿಲ್ಲ ಕರೊನಾ: ಕೇಂದ್ರ ಸರ್ಕಾರದ ಅಭಯ; ಆರೋಗ್ಯ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆದರೆ ಕಠಿಣ ಕ್ರಮ

    ನವದೆಹಲಿ: ಭಾರತದಲ್ಲಿ ಈವರೆಗೆ ಕರೊನಾ ಸೋಂಕು ಸಮುದಾಯಕ್ಕೆ ಹರಡಿಲ್ಲ. ಈ ಬಗ್ಗೆ ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯ ಅಧಿಕಾರಿಗಳು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.

    ಕರೊನಾ ನಿಯಂತ್ರಣದ ಬಗ್ಗೆ ಎಲ್ಲ ರಾಜ್ಯಗಳು ಕಟ್ಟೆಚ್ಚರ ವಹಿಸಿವೆ. ಲಾಕ್‌ಡೌನ್ ಜಾರಿಗೊಳಿಸುವ ಮೂಲಕ ಸಮುದಾಯಕ್ಕೆ ಹರಡುವುದನ್ನು ತಪ್ಪಿಸುವ ಪ್ರಯತ್ನವನ್ನು ಎಲ್ಲ ರಾಜ್ಯಗಳೂ ತತ್ಪರತೆಯಿಂದ ಮಾಡುತ್ತಿವೆ. ಸೋಂಕಿನ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ 15 ಸಾವಿರ ಕೋಟಿ ರೂ. ಪ್ಯಾಕೇಜ್ ಬಿಡುಗಡೆ ಮಾಡಿದೆ. ಈ ಹಣವನ್ನು ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ವಿದೇಶಗಳಿಗೆ ರಫ್ತು ಮಾಡುತ್ತಿದ್ದರೂ ನಮ್ಮ ದೇಶದಲ್ಲಿ ಮಲೇರಿಯಾ ನಿರೋಧಕ ಔಷಧ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯ ಕೊರತೆ ಇಲ್ಲ. ಈಗಲೂ ನಮ್ಮಲ್ಲಿ 3 ಕೋಟಿಗಿಂತ ಹೆಚ್ಚು ಮಾತ್ರೆಗಳು ಲಭ್ಯವಿವೆ. ಏಪ್ರಿಲ್ ಅಂತ್ಯದವರೆಗೆ ಸುಮಾರು 1 ಕೋಟಿ ಮಾತ್ರೆಗಳ ಅಗತ್ಯ ಮಾತ್ರ ಇದೆ. ನಮ್ಮಲ್ಲಿ ಸಾಕಷ್ಟು ಪ್ರಮಾಣದಲ್ಲಿ ಔಷಧ ಲಭ್ಯವಿರುವ ಕಾರಣ ಅಗತ್ಯವಿರುವ ದೇಶಗಳಿಗೆ ಔಷಧ ರಪ್ತು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

    ಕರೊನಾ ವಿರುದ್ದ ಹೋರಾಡುತ್ತಿರುವ ವೈದ್ಯಕೀಯ, ಅರೆ ವೈದ್ಯಕೀಯ ಹಾಗೂ ಅಗತ್ಯ ಸೇವಾ ಸಿಬ್ಬಂದಿ ವಿರುದ್ದ ದೇಶದ ಎಲ್ಲೇ ದೌರ್ಜನ್ಯ ನಡೆದರೂ ಕೇಂದ್ರ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ಜರುಗಿಸಲಿದೆ ಎಂದು ಎಚ್ಚರಿಸಿದ್ದಾರೆ.

    ವಿಡಿಯೋ ಕಾಲ್‌ನಲ್ಲೇ ತಾಯಿಯ ಅಂತಿಮ ದರ್ಶನ: ಜೀವನದ ಅತ್ಯಂತ ನೋವಿನ ಸಂಗತಿ ಎಂದ ನರ್ಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts