More

    ಕೋವಿಡ್ ಲಸಿಕೆಯಿಂದ ಅಲರ್ಜಿ ಆಗುತ್ತಂತೆ!: ತಜ್ಞರ ಈ ಎಚ್ಚರಿಕೆ ನಿಮ್ಮ ಗಮನದಲ್ಲಿರಲಿ…

    ನವದೆಹಲಿ: ಕೋವಿಡ್ ಲಸಿಕೆ ತೆಗೆದುಕೊಳ್ಳುವ ತರಾತುರಿಯಲ್ಲಿ ಅಲರ್ಜಿ ಸಮಸ್ಯೆಯನ್ನು ಕಡೆಗಣಿಸಬಾರದಾಗಿ ಅಮೆರಿಕದ ವೈದ್ಯರ ತಂಡವೊಂದು ಸಾರ್ವಜನಿಕರಿಗೆ ಕಿವಿಮಾತು ಹೇಳಿದೆ. ವಿಶೇಷವಾಗಿ ಚುಚ್ಚುಮದ್ದಿನ ಮೂಲಕ ಕೊಡುವ ಔಷಧಿಗೆ ಅಥವಾ ಪಾಲಿಇಥಲೀನ್ ಗ್ಲೈಕಾಲ್ ಅಥವಾ ಪಾಲಿಸಾರ್ಬೇಟ್ ಲಸಿಕೆಗಳಿಗೆ ಗಂಭೀರ ಅಲರ್ಜಿಯ (ಅನಫಿಲಾಕ್ಸಿಸ್) ಇತಿಹಾಸ ಹೊಂದಿರುವ ವ್ಯಕ್ತಿಗಳು ಮುಂಚಿತವಾಗಿ ಅಲರ್ಜಿ ತಜ್ಞವೈದ್ಯರ ಸಲಹೆ ಪಡೆದೇ ಲಸಿಕೆ ಪಡೆಯಬೇಕು ಎಂದು ಈ ತಂಡ ಎಚ್ಚರಿಸಿದೆ.

    ಇದನ್ನೂ ಓದಿ: ಚುನಾವಣೆಯಲ್ಲಿ ಗೆದ್ದರೂ ಹೆಂಡತಿಯನ್ನೇ ಕಳೆದುಕೊಂಡ ಅಭ್ಯರ್ಥಿ; ಗಂಡನ ಮೇಲಿನ ಸಿಟ್ಟಿಗೆ ಹೀಗಾ ಮಾಡೋದು?!

    ಈ ಬಗ್ಗೆ `ಜರ್ನಲ್ ಆಫ್ ಅಲರ್ಜಿ ಅಂಡ್ ಕ್ಲಿನಿಕಲ್ ಇಮ್ಯುನಾಲಜಿ: ಇನ್ ಪ್ರಾಕ್ಟೀಸ್’ನಲ್ಲಿ ಸಂಶೋಧನಾ ವರದಿಯೊಂದು ಪ್ರಕಟವಾಗಿದೆ. ಕೋವಿಡ್-19 ವಿರುದ್ಧ ತಯಾರಿಸಲಾಗಿರುವಂತಹ ಲಸಿಕೆಗಳಿಂದ ಉಂಟಾಗಬಲ್ಲ ಅಲರ್ಜಿಗಳ ಬಗ್ಗೆ ಪರಾಮರ್ಶೆ ಮಾಡಿರುವ ಅಮೆರಿಕದ ಮೆಸಾಚುಸೆಟ್ಸ್ ಜನರಲ್ ಹಾಸ್ಪಿಟಲ್​ನ ಅಲರ್ಜಿ ತಜ್ಞರ ತಂಡವೊಂದು ಈ ಸಂಶೋಧನಾ ವರದಿಯನ್ನು ನೀಡಿದೆ.

    ಅಮೆರಿಕದಲ್ಲಿ ಫೈಜರ್-ಬಯೋಎನ್​ಟೆಕ್ ಮತ್ತು ಮಾಡರ್ನ ತಯಾರಿಸಿದ ಕೋವಿಡ್ ಲಸಿಕೆ ನೀಡಿದಾಗ ಅಲರ್ಜಿ ಉಂಟಾದ ಪ್ರಸಂಗಗಳನ್ನು ಗಮನದಲ್ಲಿಟ್ಟುಕೊಂಡು ಈ ಸಂಶೋಧನೆ ನಡೆದಿದೆ. ಮೊದಲನೇ ಡೋಸ್ ಪಡೆದಾಗ ಅಲರ್ಜಿಯ ಗುಣಲಕ್ಷಣಗಳನ್ನು ತೋರಿದ ವ್ಯಕ್ತಿಗಳಿಗೆ ಲಸಿಕೆಯ ಎರಡನೇ ಡೋಸ್ಅನ್ನು ಸುರಕ್ಷಿತವಾಗಿ ನೀಡುವಾಗ ಅನುಸರಿಸಬೇಕಾದ ಕ್ರಮಗಳನ್ನೂ ತಜ್ಞರು ತಿಳಿಸಿದ್ದಾರೆ.

    ಈ ಅಧ್ಯಯನದಲ್ಲಿ ಬೇರೆಬೇರೆ ಅಲರ್ಜಿ ಇತಿಹಾಸವನ್ನು ಹೊಂದಿರುವ ಜನರು ಸುರಕ್ಷಿತವಾಗಿ ಕೋವಿಡ್ ಲಸಿಕೆ ಪಡೆಯಲು ವಿವರವಾದ ಮಾರ್ಗದರ್ಶನ ನೀಡಿದ್ದಾರೆ. ಲಸಿಕೆಯಿಂದ ಅಲರ್ಜಿ ಉಂಟಾದರೆ ನಿಭಾಯಿಸುವ ದೃಷ್ಟಿಯಿಂದ, ಎಲ್ಲ ಲಸಿಕಾ ಕೇಂದ್ರಗಳೂ ಲಸಿಕೆ ಸ್ವೀಕರಿಸುವ ಪ್ರತಿಯೊಬ್ಬರ ಮೇಲೂ 15 ರಿಂದ 30 ನಿಮಿಷಗಳ ಕಾಲ ನಿಗಾ ವಹಿಸಬೇಕು ಎಂದೂ ಸಲಹೆ ಇತ್ತಿದ್ದಾರೆ.

    “ನಮ್ಮ ಮಾರ್ಗಸೂಚಿಗಳು ಅಮೆರಿಕದ ನಿಯಂತ್ರಣ ಮಂಡಳಿಗಳ ಶಿಫಾರಸುಗಳನ್ನು ಆಧರಿಸಿದ್ದು, ಅಲರ್ಜಿಯ ಇತಿಹಾಸ ಹೊಂದಿರುವ ವ್ಯಕ್ತಿಗಳಿಗೆ ಲಸಿಕೆಯ ಎರಡೂ ಡೋಸ್ ಗಳನ್ನು ಸುರಕ್ಷಿತವಾಗಿ ಹೇಗೆ ನೀಡುವುದು ಎಂಬುದರ ಬಗ್ಗೆ ವೈದ್ಯ ಸಮುದಾಯಕ್ಕೆ ಸ್ಪಷ್ಟ ಕ್ರಮಗಳನ್ನು ಸೂಚಿಸಿವೆ” ಎಂದು ಸಂಶೋಧನೆಯಲ್ಲಿ ಭಾಗವಹಿಸಿದ್ದ ಮೆಸಾಚುಸೆಟ್ಸ್ ಜನರಲ್ ಹಾಸ್ಪಿಟಲ್​ನ ಅಲರ್ಜಿ ವಿಭಾಗದ ಕ್ಲಿನಿಕಲ್ ಡೈರೆಕ್ಟರ್ ಡಾ. ಅಲೀನಾ ಬ್ಯಾನರ್ಜಿ ಹೇಳಿದ್ದಾರೆ.

    ಇದನ್ನೂ ಓದಿ: ಪ್ರಿಯಕರನಿಂದ ಮಗಳನ್ನೇ ರೇಪ್​ ಮಾಡಿಸಿದ ತಾಯಿ! 15 ವರ್ಷಕ್ಕೇ ಮಗುವಿಗೆ ಜನ್ಮ ನೀಡಿದ ಮಗಳು!

    ಒಂದು ಸಮಾಧಾನದ ವಿಚಾರವೆಂದರೆ, ತಜ್ಞರ ಪ್ರಕಾರ ಲಸಿಕೆಗಳಿಂದ ಅಲರ್ಜಿ ಪ್ರತಿಕ್ರಿಯೆಗಳು ಉಂಟಾಗುವುದು ವಿರಳ – 10 ಲಕ್ಷ ಜನರಲ್ಲಿ 1.3ರಷ್ಟು ಪ್ರಮಾಣ ಮಾತ್ರ. ಫೈಜರ್-ಬಯೋಎನ್​ಟೆಕ್ ಮತ್ತು ಮಾಡರ್ನ ತಯಾರಿಸಿದ ಎಂಆರ್​ಎನ್ಎ ಕೋವಿಡ್ ಲಸಿಕೆಗಳ ವಿಷಯದಲ್ಲೂ ಇದೇ ರೀತಿ ಕಡಿಮೆ ಪ್ರಮಾಣದಲ್ಲಿ ಅಲರ್ಜಿ ಕಾಣಿಸಿಕೊಳ್ಳಬಹುದು ಎಂಬುದು ಅವರ ಅನಿಸಿಕೆ. ಹೀಗಾಗಿ ಆಹಾರ, ಮಾತ್ರೆ, ಲಾಟೆಕ್ಸ್ ಮುಂತಾದವುಗಳಿಗೆ ಗಂಭೀರ ಅಲರ್ಜಿ ಹೊಂದಿರುವ ರೋಗಿಗಳೂ ಸುರಕ್ಷಿತವಾಗಿ ಕೋವಿಡ್ ಲಸಿಕೆ ಪಡೆಯಬಹುದು ಎನ್ನುತ್ತಾರೆ ಈ ತಜ್ಞರು.

    ಈ ಹಿಂದೆ ಅಮೆರಿಕದ ಎಫ್​ಡಿಎ, ಕರೊನಾ ವೈರಾಣುವಿನ ಆನುವಂಶಿಕ ಸಾಮಗ್ರಿಯನ್ನು ಆಧರಿಸಿ ತಯಾರಿಸಿರುವ ಎಂಆರ್​ಎನ್ಎ ಲಸಿಕೆಗಳನ್ನು ಲಸಿಕೆಯ ಯಾವುದೇ ಘಟಕಾಂಶಕ್ಕೆ ಗಂಭೀರ ಅಲರ್ಜಿ ಪ್ರತಿಕ್ರಿಯೆ ಹೊಂದಿರುವ ಜನರಿಗೆ ನೀಡಬಾರದು ಎಂದು ಶಿಫಾರಸು ಮಾಡಿತ್ತು. ಲಸಿಕೆ ಪಡೆದವರೆಲ್ಲರನ್ನೂ ಲಸಿಕೆ ನೀಡಿದ ನಂತರ 15 ನಿಮಿಷಗಳ ಕಾಲ ಅಲರ್ಜಿಯ ಪ್ರತಿಕ್ರಿಯೆಗಳನ್ನು ಗುರುತಿಸಿ, ಆರೈಕೆ ಮಾಡಬಲ್ಲ ಸಿಬ್ಬಂದಿಯ ಮೇಲ್ವಿಚಾರಣೆಯಲ್ಲಿರಿಸಬೇಕು ಎಂದು ಸಹ ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆಂಷನ್ ಸಲಹೆ ನೀಡಿತ್ತು.

    ಮಗನ ಹೆಂಡತಿಗೆ ಮಾವ ಹೀಗಾ ಮಾಡೋದು?! ತನಿಖೆಯಲ್ಲಿ ಬಯಲಾಯಿತು ಮಾವನ ನಿಜ ಬಣ್ಣ

    2021ರಲ್ಲಿ ಭೂಮಿಯನ್ನ ಡ್ರ್ಯಾಗನ್​ ವಶಪಡಿಸಿಕೊಳ್ಳತ್ತೆ! ಭೀಕರವಾಗಿರುತ್ತೆ ಈ ವರ್ಷ ಎಂದ ಬಲ್ಗೇರಿಯನ್ ನಿಗೂಢ ಮಹಿಳೆ ಬಾಬಾ ವಂಗಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts