More

    ಮಹಾರಾಷ್ಟ್ರದಲ್ಲಿ 8 ಲಕ್ಷ ದಾಟಿದ ಕೋವಿಡ್​ ಕೇಸ್​; ಕರ್ನಾಟಕಕ್ಕೆ ನಾಲ್ಕನೇ ಸ್ಥಾನ

    ಮುಂಬೈ: ಮಹಾರಾಷ್ಟ್ರದಲ್ಲಿ ಕೋವಿಡ್​ ಸೋಂಕಿತರ ಸಂಖ್ಯೆ 8 ಲಕ್ಷ ದಾಟಿದೆ. ಆ ಮೂಲಕ ಅತಿ ಸೋಂಕಿತರು ಹಾಗೂ ಅತಿ ಸಕ್ರಿಯ ಪ್ರಕರಣಗಳಿರುವ ರಾಜ್ಯ ಎನಿಸಿದೆ.

    ಮಂಗಳವಾರ 15,765 ಹೊಸ ಕರೊನಾ ಸೋಂಕಿತರ ಪತ್ತೆಯಾಗುವುದರೊಂದಿಗೆ ರಾಜ್ಯದ ಒಟ್ಟು ರೋಗಿಗಳ ಸಂಖ್ಯೆ 8,08,306 ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,98,523 ಆಗಿದ್ದು, ದೇಶದಲ್ಲಿಯೇ ಅತಿ ಸಕ್ರಿಯ ಪ್ರಕರಣಗಳನ್ನು ಹೊಂದಿದ ರಾಜ್ಯ ಎನಿಸಿದೆ.

    ಇದನ್ನೂ ಓದಿ; ಮತ್ತೆ ನೂರು ವಿಶೇಷ ರೈಲುಗಳ ಸಂಚಾರ; ರಾಜ್ಯಗಳೊಂದಿಗೆ ಚರ್ಚಿಸಿ ಆರಂಭ 

    ಸದ್ಯ ಚೇತರಿಕೆ ಪ್ರಮಾಣ ಶೇ.72.23 ಆಗಿದ್ದು, ಈವರೆಗೆ 5,84,537 ಜನರು ಗುಣವಾಗಿದ್ದಾರೆ. ಕೋವಿಡ್​ನಿಂದ ಒಟ್ಟು 24,903 ಜನರು ಮೃತಪಟ್ಟಿದ್ದಾರೆ.
    ಆಂಧ್ರದಲ್ಲಿ ಕೋವಿಡ್​ ರೋಗಿಗಳ ಸಂಖ್ಯೆ 4,34,771 ಆಗಿದ್ದರೆ, ತಮಿಳುನಾಡಿನಲ್ಲಿ 4,28,041 ಕರೊನಾ ಸೋಂಕಿತರಿದ್ದು, ನಂತರದ ಸ್ಥಾನದಲ್ಲಿವೆ. ಕರ್ನಾಟಕ 3.51 ಲಕ್ಷ ಪ್ರಕರಣಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

    ಈ ನಡುವೆ, ಮಹಾರಾಷ್ಟ್ರದಲ್ಲಿ ಅನ್​ಲಾಕ್​ 4 ಅನ್ವಯ ಹಲವು ನಿರ್ಬಂಧಗಳನ್ನು ಸಡಿಲಿಸಲಾಗಿದೆ. ಅಂತರ ಜಿಲ್ಲಾ ಪ್ರಯಾಣಕ್ಕೆ ವಿಶೇಷ ರೈಲುಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಬುಧವಾರದಿಂದ ಈ ರೈಲುಗಳಿಗೆ ಟಿಕೆಟ್​ ಬುಕಿಂಗ್​ ಮಾಡಬಹುದು. ಆದರೆ, ಲೋಕಲ್​ ರೈಲುಗಳಿಗೆ ಇನ್ನೂ ಅವಕಾಶ ಕಲ್ಪಿಸಲಾಗಿಲ್ಲ.

    ಸೆಲ್​ಗಳಲ್ಲಿ ಸೆರೆವಾಸ, ನಗ್ನರಾಗಿಸಿ ಸೋಂಕು ನಿವಾರಕ ಸಿಂಪಡಣೆ; ಚೀನಾ ಉಯ್ಘರ್​ ಮುಸ್ಲಿಮರ ಸ್ಥಿತಿಯಿದು….!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts