More

    ಕೊರೊನಾ ವೈರಸ್​ ಜೀವಿತಾವಧಿ ಕುರಿತು ಹೊಸ ಅಧ್ಯಯನದಿಂದ ಆಘಾತಕಾರಿ ಮಾಹಿತಿ ಬಹಿರಂಗ

    ನವದೆಹಲಿ: ಚೀನಾದಲ್ಲಿ ಮೃತ್ಯಕೂಪ ನಿರ್ಮಿಸಿರುವ ಮಾರಕ ಕೊರೊನಾ ವೈರಸ್​ ಭೂಮೇಲ್ಮೈನಲ್ಲಿ ಸುಮಾರು 9 ದಿನಗಳವರೆಗೂ ಸಾಂಕ್ರಮಿಕವಾಗಿ ಉಳಿದುಕೊಳ್ಳಲಿವೆ ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದ್ದು, ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.

    ಸರಾಸರಿ ನಾಲ್ಕರಿಂದ ಐದು ದಿನಗಳವರೆಗೆ ಕೊರೊನಾ ವೈರಸ್​ ಬದುಕಿರಲಿವೆ ಎಂದು ಜರ್ನಲ್​ ಆಫ್​ ಆಸ್ಪಿಟಲ್​ ಇನ್ಫೆಕ್ಶನ್​ನಲ್ಲಿ ಪ್ರಕಟವಾಗಿದೆ. ಕಡಿಮೆ ಉಷ್ಣಾಂಶ ಮತ್ತು ಹೆಚ್ಚು ವಾಯು ಆರ್ದ್ರತೆಯಲ್ಲಿ ವೈರಸ್​ ಜೀವಿತಾವಧಿ ಮತ್ತಷ್ಟು ಹೆಚ್ಚಲಿದೆ ಎಂದು ಜರ್ಮನಿಯ ಗ್ರೀಫ್​ಸ್ವಾಲ್ಡ್​ ಯೂನಿವರ್ಸಿಟಿ ಆಸ್ಪತ್ರೆಯ ಪ್ರೊಫೆಸರ್​ ಗುಂಟರ್​ ಕಂಫ್​ ವಿವರಿಸಿದ್ದಾರೆ.

    ಕೊರೊನಾ ವೈರಸ್​ ಮೇಲೆ ನಡೆದ ಸುಮಾರು 22 ಅಧ್ಯಯನದ ಬಳಿಕ ಈ ತೀರ್ಮಾನಕ್ಕೆ ಬರಲಾಗಿದೆ. ಅಧ್ಯಯನದಲ್ಲಿ ಹೆಚ್ಚಾಗಿ ಸಾರ್ಸ್​ ಕೊರೊನಾವೈರಸ್​ ಮತ್ತು ಮೆರ್ಸ್​ ಕೊರೊನಾ ವೈರಸ್​ ಮೇಲೆ ಗಮನ ವಹಿಸಲಾಗಿದೆ. ವಿವಿಧ ಕೊರೊನಾ ವೈರಸ್​ ಅನ್ನು ವಿಶ್ಲೇಷಿಸಲಾಯಿತು. ಆದರೆ, ಎಲ್ಲ ಫಲಿತಾಂಶವು ಕೂಡ ಒಂದೇ ರೀತಿಯಾಗಿದೆ ಎಂದು ಜರ್ಮನಿಯ ರುಹ್ರ್​ ಯೂನಿವರ್ಸಿಟಿ ಬೊಚುಮ್​ ಪ್ರೊಫೆಸರ್​ ಐಕ್​ ಸ್ಟೇನ್​ಮನ್​ ತಿಳಿಸಿದ್ದಾರೆ.

    ಈವರೆಗೂ ಕೊರೊನಾ ವೈರಸ್​ಗೆ ನಿರ್ಧಿಷ್ಟವಾದ ಚಿಕಿತ್ಸಾ ವಿಧಾನವನ್ನು ಕಂಡುಹಿಡಿದಿಲ್ಲ. ಆದರೆ, ಸೋಂಕಿನಿಂದ ರಕ್ಷಿಸಿಕೊಳ್ಳಲು ಮುಂಜಾಗ್ರತ ಕ್ರಮಗಳಿಗೆ ಎಲ್ಲೆಡೆ ಒತ್ತು ನೀಡಲಾಗುತ್ತಿದೆ. ಕೈಗಳ ಮೂಲಕ ಪದೇಪದೆ ವಸ್ತುಗಳ ಮೇಲ್ಭಾಗವನ್ನು ಸ್ಪರ್ಶಿಸುವುದರಿಂದ ಸೋಂಕು ತಗಲುತ್ತಿದೆ ಎಂದು ಗುಂಟರ್​ ಕಂಫ್​ ಎಚ್ಚರಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts