More

    ಹಾಟ್​ಸ್ಪಾಟ್​ ಭಿಲ್ವಾರಾದಲ್ಲಿ ಕರೊನಾ ಮಣಿಸಿದ್ದು ಹೇಗೆ ಗೊತ್ತಾ?: ಇತರ ರಾಜ್ಯಗಳಿಗೂ ಮಾದರಿಯಾದ ಸ್ಥಳೀಯಾಡಳಿತ

    ಕರೊನಾ ಸೋಂಕು ತಡೆಗಟ್ಟುವಲ್ಲಿ ರಾಜಸ್ಥಾನದ ಭಿಲ್ವಾರಾ ಇತರ ರಾಜ್ಯಗಳಿಗೂ ಮಾದರಿ ಎಂದು ಕೇಂದ್ರ ಸರ್ಕಾರವೇ ಶ್ಲಾಘಿಸಿದೆ.

    ದೇಶದ ಮೊದಲ ಕೊರೊನಾ ಹಾಟ್​ಸ್ಪಾಟ್​ ಎಂದು ಭಿಲ್ವಾರಾ ಕುಖ್ಯಾತಿಗೆ ಒಳಗಾಗಿತ್ತು. ಮಾರ್ಚ್​ 19ರಂದು ಇಲ್ಲಿನ 27 ಜನರಲ್ಲಿ ಕರೊನಾ ಸೋಂಕು ಪತ್ತೆಯಾಗಿತ್ತು. ಆ ಬಳಿಕ ಕ್ಷಿಪ್ರವಾಗಿ ಕಾರ್ಯಾಚರಣೆಗಳಿದ ಜಿಲ್ಲಾಡಳಿತ ಸೋಂಕು ವ್ಯಾಪಿಸುವುದನ್ನು ತಡೆಗಟ್ಟುವಲ್ಲಿ ಇತರ ಪ್ರದೇಶಗಳಿಗೆ ಮಾದರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ವಿಶೇಷವೆಂದರೆ, ಭಿಲ್ವಾರದಲ್ಲಿ 28 ಲಕ್ಷ ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಇವರಲ್ಲಿ 2,816 ಜನರ ರಕ್ತ ಹಾಗೂ ಗಮಟಲು ದ್ರವದ ಮಾದರಿಯನ್ನು ಪ್ರಯೋಗಾಲಕ್ಕೆ ಕಳುಹಿಸಲಾಗಿದ್ದು, ಈವರೆಗೆ 27 ಜನರಲ್ಲಿ ಸೋಂಕು ಪತ್ತೆಯಾಗಿದ್ದು, 2 ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ. ಹಾಗಿದ್ದರೆ, ಇಲ್ಲಿ ಸೋಂಕು ಹಬ್ಬದಿರಲು ಕಾರಣ ಸ್ಥಳೀಯಾಡಳಿತ ಕೈಗೊಂಡ ಮುಂಜಾಗೃತಾ ಕ್ರಮಗಳು.
    * ಭಿಲ್ವಾರಾ ನಗರದಲ್ಲಿ ಕಫ್ರ್ಯೂ ವಿಧಿಸಲಾಗಿದೆ.
    * ಮೊದಲ ಹಂತದಲ್ಲಿ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು
    * ನಗರದ ಗಡಿ ರಸ್ತೆಗಳನ್ನು ಬಂದ್​ ಮಾಡಲಾಯಿತು
    * ನೆರೆಯ ಜಿಲ್ಲೆಯ ರಸ್ತೆಗಳನ್ನು ಕೂಡ ಬಂದ್​ ಮಾಡಲಾಯಿತು.
    * ರೈಲ್ವೆ ಹಾಗೂ ರಸ್ತೆ ಸಾರಿಗೆ ಸ್ಥಗಿತ
    * ಖಾಸಗಿ ವಾಹನಗಳ ಓಡಾಟಕ್ಕೂ ನಿರ್ಬಂಧ
    * ಸೋಂಕು ಹೆಚ್ಚಾಗಿರುವ ಪ್ರದೇಶಗಳನ್ನು ಸಂಚಾರ ನಿರ್ಬಂಧಿತ ಪ್ರದೇಶಗಳೆಂದು ಘೋಷಣೆ
    * ಆರು ಪ್ರದೇಶಗಳನ್ನು ಗುರುತಿಸಿ ವಿಶೇಷ ಪಡೆಗಳಿಂದ ನಿರಂತರ ತಪಾಸಣೆ ಮಾಡಲಾಯಿತು.
    * 1547 ಕೋನೆಗಳನ್ನು ಹೊಂದಿದ ಒಟ್ಟು 27 ಹೋಟೆಲ್​ಗಳನ್ನು ಕ್ವಾರಂಟೈನ್​ ತಾಣಗಳಾಗಿ ಮಾರ್ಪಡಿಸಲಾಯಿತು. 22 ಸಂಸ್ಥೆಗಳು, ಹಾಸ್ಟೆಲ್​ಗಳಲ್ಲಿನ ಒಟ್ಟು 11,659 ಹಾಸಿಗೆಗಳನ್ನುಶಂಕಿತರು ಹಾಗೂ ಸೋಂಕಿತರಿಗಾಗಿ ಮೀಸಲಿರಿಸಲಾಗಿತ್ತು.

    ಎಲ್ಲಕ್ಕೂ ಮುಖ್ಯವಾಗಿ ಸೋಂಕು ಹೆಚ್ಚಿದ್ದ ಪ್ರದೇಶಗಳಲ್ಲಿ ನಿತ್ಯವೂ ರಾಸಾಯನಿಕ ಸಿಂಪಡಿಸಿ ಸೋಂಕು ಇತರೆಡೆ ಹರಡುವುದನ್ನು ತಡೆಯಲಾಯಿತು.

    ಸೋಂಕು ಸಾಮುದಾಯಿಕವಾಗಿ ವ್ಯಾಪಿಸುವುದನ್ನು ತಡೆಯಲು ಕಫ್ಯೂವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಯಿತು. ಇತರೆಡೆಗಳಿಮದ ಸೋಮಕು ಬಾರದಿರಲು ಗಡಿಯನ್ನು ಬಂದ್​ ಮಾಡಲಾಯಿತು. ರಸ್ತೆಗಳಲ್ಲಿ ಯಾವುದೇ ವಾಹನ ಸಂಚಾರ ಇಲ್ಲದಂತೆ ನೋಡಿಕೊಳ್ಳಲಾಯಿತು ಎಂದು ಭಿಲ್ವಾರಾ ಜಿಲ್ಲಾಧಿಕಾರಿ ವಿವರಿಸುತ್ತಾರೆ.

    ನಂತರದ ಹಂತದಲ್ಲಿ 2000 ತಂಡಗಳನ್ನು ರಚಿಸಿ ಬೃಹತ್​ ಪ್ರಮಾಣದಲ್ಲಿ ತಪಾಸಣೆ ನಡೆಸಲಾಯಿತು. ಇದನ್ನು ತ್ವರಿತವಾಗಿ ನಡೆಸಿದ್ದರಿಂದ ಕರೊನಾ ನಿಯಂತ್ರಣಕ್ಕೆ ಬಂತು ಎನ್ನುತ್ತಾರೆ ಜಿಲ್ಲಾಧಿಕಾರಿಗಳು. (ಏಜೆನ್ಸೀಸ್​)

    ರೋಗಿಗಾಗಿ ಮನಮಿಡಿದು 540ಕಿ.ಮೀ ಪ್ರಯಾಣ ಮಾಡಿದ ವೈದ್ಯ: ಜಾಲತಾಣದಲ್ಲಿ ಭಾರಿ ಶ್ಲಾಘನೆ

    VIDEO|ದಟ್ಟ ಅರಣ್ಯದ ಮಧ್ಯೆ ಹಾದು ಹೋಗಿರುವ ರಸ್ತೆಯನ್ನು ಆನೆಗಳ ಹಿಂಡು ಹೇಗೆ ದಾಟುತ್ತದೆ ವಿಡಿಯೋ ನೋಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts