More

    ಭಾರತೀಯ ಸೇನೆಗೂ ನುಗ್ಗಿದ ಕರೊನಾ: ವೈದ್ಯರು, ನರ್ಸ್ ಸೇರಿ ಎಂಟು ಸಿಬ್ಬಂದಿಯಲ್ಲಿ ವೈರಸ್ ಪತ್ತೆ; ಒಬ್ಬ ಯೋಧ ಗುಣಮುಖ

    ನವದೆಹಲಿ: ಭಾರತೀಯ ಸೇನೆಯ ಎಂಟು ಸಿಬ್ಬಂದಿಯಲ್ಲಿ ಕರೊನಾ ವೈರಸ್ ಇರುವುದು ದೃಢಪಟ್ಟಿದೆ.

    ಇಬ್ಬರು ವೈದ್ಯರು, ಒಬ್ಬ ನರ್ಸಿಂಗ್ ಸಹಾಯಕ ಸೇರಿ ಒಟ್ಟು ಎಂಟು ಸಿಬ್ಬಂದಿಗೆ ಸೋಂಕು ಹರಡಿದ್ದು ಅದರಲ್ಲಿ ನಾಲ್ವರು ಚಿಕಿತ್ಸೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ.

    ಕೆಲ ದಿನಗಳ ಹಿಂದೆ ಸೋಂಕು ಕಾಣಿಸಿಕೊಂಡಿದ್ದ ಲಡಾಖ್‌ನ ಯೋಧ ಸಂಪೂರ್ಣ ಗುಣಮುಖನಾಗಿದ್ದು ಕರ್ತವ್ಯಕ್ಕೆ ಹಾಜರಾಗಿದ್ದಾನೆ. ಸೋಂಕಿತರು ಅಥವಾ ಶಂಕಿತರ ಸಂಪರ್ಕಕ್ಕೆ ಬಾರದಂತಹ ಯೋಧರನ್ನು ಕರ್ತವ್ಯಕ್ಕೆ ಹಾಜರಾಗಲು ಅನುವು ಮಾಡಿಕೊಡಲಾಗಿದೆ.

    ಏಪ್ರಿಲ್ 17, 18ರಂದು ಎರಡು ವಿಶೇಷ ರೈಲುಗಳಲ್ಲಿ ಬೆಂಗಳೂರು, ಬೆಳಗಾವಿ ಮತ್ತು ಸಿಕಂದರಾಬಾದ್‌ನಲ್ಲಿ ತರಬೇತಿ ಮುಗಿಸಿರುವ ಯೋಧರು ಬರಲಿದ್ದು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಾಣೆ ಹೇಳಿದ್ದಾರೆ.

    ಭಾರತೀಯ ಸೇನೆ ದೇಶದಲ್ಲಿ ಕರೊನಾ ತಡೆಗೆ ಪ್ರಯತ್ನಿಸುವುದರ ಜತೆ ವಿದೇಶಗಳಿಗೆ ಔಷಧಗಳನ್ನು ತಲುಪಿಸುವ ಕೆಲಸವನ್ನು ಮಾಡುತ್ತಿದೆ. ಆದರೆ ಪಾಕಿಸ್ತಾನದವರು ಗಡಿ ಭಾಗದಲ್ಲಿ ಉಗ್ರರನ್ನು ಪ್ರೇರೇಪಿಸಿ ದಾಳಿ ನಡೆಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. (ಏಜೆನ್ಸೀಸ್​)

    ಮೊಸಳೆ ದವಡೆಗೆ ಸಿಲುಕಿದ್ದ ಮಗನನ್ನು ರಕ್ಷಿಸಲು ಕಾದಾಟಕ್ಕಿಳಿದ ತಾಯಿಗೆ ಹಿರಿಯರ ಅನುಭವದ ಮಾತು ವರವಾಯ್ತು!

    ಸದ್ಯಕ್ಕೆ ದೇಶದಲ್ಲಿ ಶೇ. 40ರಷ್ಟು ತಗ್ಗಿದೆ ಕರೊನಾ ತೀವ್ರತೆ; ಆದರೆ ಮೇ ತಿಂಗಳ ಮೊದಲ ವಾರ ಹೆಚ್ಚಬಹುದು ಹಾವಳಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts