More

    ಕರೊನಾ ತಡೆಗೆ ಜಾಗೃತಿ

    ಕೊಕಟನೂರ: ಗ್ರಾಮದ ರೇಣುಕಾ ಸಕ್ಕರೆ ಕಾರ್ಖಾನೆ ವತಿಯಿಂದ ಕರೊನಾ ವೈರಸ್ ಹರಡುವಿಕೆ ತಡೆಗಟ್ಟಲು ಜಾಗೃತಿ ಮೂಡಿಸಲಾಯಿತು. ಕಾರ್ಖಾನೆಯ ಎಲ್ಲ ಕಾರ್ಮಿಕರಿಗೆ ರೋಗ ಹರಡದಂತೆ ಪಾಲಿಸಬೇಕಾದ ನಿಯಮಗಳನ್ನು ಕೊಕಟನೂರ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚಂದ್ರಕಾಂತ ಧೂಳಶೆಟ್ಟಿ ವಿವರಿಸಿದರು.

    ಬಳಿಕ ಅಥಣಿ ತಹಸೀಲ್ದಾರ್ ಕಚೇರಿ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸಿಬ್ಬಂದಿ, ಸ್ಥಳೀಯ ಜನಪ್ರತಿನಿಧಿ ಹಾಗೂ ಕಾರ್ಮಿಕರಿಗೆ 800 ಲೀಟರ್ ಸ್ಯಾನಿಟೈಸರ್ ಹಾಗೂ ಒಂದು ಸಾವಿರ ಮಾಸ್ಕ್‌ಗಳನ್ನು ವಿತರಿಸಲಾಯಿತು.

    ದಬಧಬಹಟ್ಟಿ, ಕಟಗೇರಿ ಮತ್ತು ಬುರ್ಲಟ್ಟಿ ಗ್ರಾಮಗಳ ಬೀದಿ, ಮನೆಗಳ ಗೋಡೆಗಳಿಗೆ ಸ್ವಚ್ಛತಾ ಔಷಧ ಸಿಂಪಡಿಸಲಾಯಿತು. ಕಾರ್ಖಾನೆ ಪ್ರಧಾನ ವ್ಯವಸ್ಥಾಪಕ ಸಂಜೀವ ತೇರದಾಳ, ಹಿರಿಯ ವ್ಯವಸ್ಥಾಪಕ ರಾಜಕುಮಾರ ಅಡಹಳ್ಳಿ, ವಿನೋದ ಜಾಧವ, ಜಿಪಂ ಮಾಜಿ ಸದಸ್ಯ ಅಪ್ಪಾಸಾಬ ಅವತಾಡೆ, ವಿ.ಕೆ. ಗುರುಸಿದ್ಧನವರ, ಗ್ರಾಪಂ ಅಧ್ಯಕ್ಷ ರಾಜಕುಮಾರ ಪೂಜಾರಿ, ಪಿಡಿಒ ರಾಜು ಬಳೋಜ, ಸಂತೋಷ ಅವತಾಡೆ, ಸಿದ್ಧುಬಾ ಶಿಂದೆ ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts