More

    ಕೋವಿಡ್​-19 ಸಾವಿಗೆ ಕರೊನಾ ವೈರಾಣು ಕಾರಣ ಅಲ್ಲವಂತೆ!

    ನವದೆಹಲಿ: ದೇಶದೆಲ್ಲಡೆ ಕರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. ಅಂತೆಯೇ ಸೋಂಕಿನಿಂದಾಗಿ ಸಾಯುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಆದರೆ, ವಾಸ್ತವದಲ್ಲಿ ಸೋಂಕಿತರ ಸಾವಿಗೂ ಕರೊನಾ ವೈರಾಣುಗೂ ಯಾವುದೇ ಸಂಬಂಧವಿಲ್ಲ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.
    ನೇಚರ್​ ಎಂಬ ಜರ್ನಲ್​ನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ ಮಾನವದೇಹದಲ್ಲಿನ ರೋಗನಿರೋಧಕ ಶಕ್ತಿಯೇ ಕರೊನಾ ಸಾವು ಹೆಚ್ಚಾಗಲು ಕಾರಣ ಎಂದು ಹೇಳಲಾಗಿದೆ.

    ಕರೊನಾ ವೈರಾಣುವಿನ ವಿರುದ್ಧ ಹೋರಾಡಲು ಮನುಷ್ಯನ ದೇಹದಲ್ಲಿರುವ ರೋಗನಿರೋಧಕ ಶಕ್ತಿಗಳು ಹೆಚ್ಚು ಕ್ರಿಯಾಶೀಲವಾಗುತ್ತವೆ. ಇದರಿಂದ ಆಂಗಾಂಗಗಳಿಗೆ ಭಾರಿ ಹಾನಿಯಾಗಿ ವ್ಯಕ್ತಿ ಸಾಯುತ್ತಾನೆ. ಸೋಂಕಿಗೆ ಒಳಗಾಗಿ ಗಂಭೀರಸ್ಥಿತಿಯಲ್ಲಿದ್ದವರ ಅಧ್ಯಯನದಿಂದ ಈ ಅಂಶ ಸಾಬೀತಾಗಿರುವುದಾಗಿ ತಜ್ಞರು ಹೇಳಿದ್ದಾರೆ.

    ಇದನ್ನೂ ಓದಿ: ಗಾಂಧಿ ಕುಟುಂಬದ 3 ಟ್ರಸ್ಟ್​ಗಳ ತನಿಖೆಗೆ ಸಮನ್ವಯ ಸಮಿತಿ ರಚನೆ

    ಬ್ರಿಟನ್​ನ ಎಡಿನ್​ಬರೊ ವಿಶ್ವವಿದ್ಯಾಲಯದ ತಜ್ಞರು ಈ ಅಧ್ಯಯನ ನಡೆಸಿದ್ದಾರೆ. ವೈರಾಣು ಮತ್ತು ಉರಿಯೂತದ ನಡುವೆ ನಗಣ್ಯ ಎನ್ನಬಹುದಾದ ಸಂಬಂಧ ಇರುವುದು ಅಧ್ಯಯನದಲ್ಲಿ ಕಂಡಬಂದಿತು ಎನ್ನಲಾಗಿದೆ.

    ಕೊವಿಡ್​-19 ಸೋಂಕಿನಿಂದ ಮೃತಪಟ್ಟವರ ದೇಹದಲ್ಲಿನ ಉರಿಯೂತ ಮತ್ತು ಗಾಯವೂ ಒಳಗೊಂಡಂತೆ ಮರಣೋತ್ತರ ಪರೀಕ್ಷೆಯ ಮೂಲಕ ಕರೊನಾ ಸೋಂಕಿನ ಲಕ್ಷಣಗಳನ್ನು ಅರಿತುಕೊಳ್ಳಲು ತಜ್ಞರು ಪ್ರಯತ್ನಿಸಿದ್ದಾರೆ.

    ತಜ್ಞರು ಮತ್ತು ವಿಜ್ಞಾನಿಗಳು ಕರೊನಾ ಸೋಂಕಿಗೆ ಲಸಿಕೆ ಪತ್ತೆ ಮಾಡಲು ರಾತ್ರಿ-ಹಗಲು ಎನ್ನದೆ ಶ್ರಮಿಸುತ್ತಿದ್ದಾರೆ. ಈಗಾಗಲೆ 200ಕ್ಕೂ ಹೆಚ್ಚು ಲಸಿಕೆಗಳು ತಯಾರಾಗಿದ್ದು, ವಿವಿಧ ಹಂತದ ಪ್ರಯೋಗಗಳಿಗೆ ಒಳಪಟ್ಟಿವೆ. ವರ್ಷಾಂತ್ಯದ ವೇಳೆಗೆ ಮೊದಲ ಲಸಿಕೆ ಬಳಕೆಗೆ ದೊರೆಯುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಬ್ರಿಟನ್​ ತಜ್ಞರ ಅಧ್ಯಯನ ಹೆಚ್ಚನ ಮಹತ್ವ ಪಡೆದುಕೊಳ್ಳುತ್ತದೆ.

    ಎಲ್ಲಾ ಯುವಕರಿಗೂ ಉದ್ಯೋಗ- ಹೊಸದೊಂದು ಯೋಜನೆ ಶುರು ಮಾಡಿದೆ ಲಂಡನ್‌ ಸರ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts