More

    ಕರೊನಾ ಹಾವಳಿ, ತಿಳಿವಳಿಕೆ ಇರಲಿ, ಅಧಿಕಾರಿಗಳಿಗೆ ಬಳ್ಳಾರಿ ಜಿಪಂ ಸಿಇಒ ನಿತೀಶ್ ಸೂಚನೆ

    ಹೂವಿನಹಡಗಲಿ: ತಾಲೂಕಿನ ಮೈಲಾರ ಗ್ರಾಮಕ್ಕೆ ಗುರುವಾರ ಸಂಜೆ ಜಿಪಂ ಸಿಇಒ ಕೆ.ನಿತೀಶ್ ಭೇಟಿ ನೀಡಿ, ಮೈಲಾರಲಿಂಗೇಶ್ವರ ಜಾತ್ರೆ ಸಿದ್ಧತೆ ಪರಿಶೀಲಿಸಿದರು. ಕಾರ್ಣಿಕದ ಸ್ಥಳ ಡೆಂಕನ ಮರಡಿಯಲ್ಲಿ ಕುಡಿವ ನೀರು, ಶೌಚಗೃಹ, ಬೀದಿ ದೀಪಗಳ ವ್ಯವಸ್ಥೆ ವೀಕ್ಷಿಸಿದ ಸಿಇಒ, ಸುರಕ್ಷತೆಯ ದೃಷ್ಟಿಯಿಂದ ಜಾತ್ರಾ ಸ್ಥಳದಲ್ಲಿ ಹಾದುಹೋಗಿರುವ ವಿದ್ಯುತ್ ತಂತಿಗಳನ್ನು ಕೂಡಲೇ ಸ್ಥಳಾಂತರ ಮಾಡಬೇಕು. ವಿದ್ಯುತ್ ಸಮಸ್ಯೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

    ಮೈಲಾರ ಜಾತ್ರೆಗೆ ನಾಡಿನ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.ರಾಜ್ಯದಲ್ಲಿ ಕರೊನಾ ಹಾವಳಿ ಇದ್ದು ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ಕರೊನಾ ವೈರಸ್ ಬಗ್ಗೆ ಸಂಪೂರ್ಣ ಮಾಹಿತಿ ಇರುವ ತಜ್ಞ ವೈದ್ಯರನ್ನು ನೇಮಿಸಬೇಕು. ಆರೋಗ್ಯ ಸಿಬ್ಬಂದಿಗೆ ವೈರಸ್ ಬಗ್ಗೆ ಮಾಹಿತಿ ನೀಡಬೇಕೆಂದು ಸೂಚಿಸಿದರು.

    ತಾಪಂ ಇಒ ಯು.ಎಚ್.ಸೋಮಶೇಖರ್ ಮಾತನಾಡಿ, ಕುಡಿವ ನೀರು, ಬೀದಿ ದೀಪಗಳ ನಿರ್ವಹಣೆ , ನೈರ್ಮಲ್ಯ ಹಾಗೂ ಸ್ವಚ್ಛತಾ ಕಾರ್ಯ ಮುಗಿದಿದೆ. 160 ತಾತ್ಕಾಲಿಕ ಶೌಚಗೃಹ, ನಿರ್ವಹಣೆಗೆ ಸಿಬ್ಬಂದಿ ನೇಮಿಸಲಾಗಿದೆ. ಶುದ್ಧ ಕುಡಿವ ನೀರಿಗಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ತಹಸೀಲ್ದಾರ್ ಕೆ.ರಾಘವೇಂದ್ರರಾವ್, ಜಿಪಂ ಎಇಇ ಜಯರಾಂ ನಾಯ್ಕ, ಕಿರಣ್ ಕುಮಾರ್, ಪಿಡಿಒ ರವೀಂದ್ರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts