More

    ಗುಡ್​ ನ್ಯೂಸ್​ : ಲಸಿಕೆ ಪಡೆಯಲು 18 ಮೇಲ್ಪಟ್ಟವರಿಗೆ ವಾಕ್​-ಇನ್ ಸೌಲಭ್ಯ

    ನವದೆಹಲಿ : ಕರೊನಾ ಲಸಿಕೆ ಡೋಸ್​ಗಳು ವ್ಯರ್ಥವಾಗುವುದನ್ನು ತಡೆಯಲು ಮತ್ತು ತಂತ್ರಜ್ನಾನ ಬಳಕೆಯ ಸೌಲಭ್ಯವಿಲ್ಲದವರಿಗೆ ಅನುಕೂಲವಾಗಲು ಸರ್ಕಾರಿ ಲಸಿಕಾ ಕೇಂದ್ರಗಳಿಗೆ ವಾಕ್​-ಇನ್​ ಅವಕಾಶ ನೀಡುವ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ಈ ಮೂಲಕ ಕೋವಿನ್​ ಪೋರ್ಟಲ್​ನಲ್ಲಿ ನೋಂದಣಿಯಾಗಿರುವವರಿಗೆ ಮಾತ್ರ ಲಸಿಕೆ ನೀಡಬೇಕೆಂಬ ಆದೇಶವನ್ನು ಸಡಿಲಗೊಳಿಸಿದೆ.

    ಇಂಟರ್​ನೆಟ್​ ಅಥವಾ ಸ್ಮಾರ್ಟ್​ ಫೋನ್​ಗಳ ಸೌಲಭ್ಯವಿಲ್ಲದ 18-44 ವರ್ಷ ವಯೋಮಾನದ ಜನರು ಸರ್ಕಾರಿ ಕರೊನಾ ಲಸಿಕಾ ಕೇಂದ್ರಗಳಿಗೆ ಭೇಟಿ ನೀಡಿ ಕೋವಿನ್​ ಪೋರ್ಟಲ್​​ನಲ್ಲಿ ನೋಂದಣಿ ಮಾಡಿಸಿ, ಲಸಿಕೆಗೆ ಅಪಾಯಿಂಟ್​ಮೆಂಟ್​ ಪಡೆಯಬಹುದು. ಜೊತೆಗೆ, ಲಸಿಕೆಯ ವೇಸ್ಟೇಜ್​ಅನ್ನು ಕಡಿಮೆ ಮಾಡಲು ಸ್ಥಳದಲ್ಲೇ ನೋಂದಣಿ ಮಾಡಿಸಿ ತಕ್ಷಣ ಲಸಿಕೆ ಪಡೆಯಲೂ ಈ ವಯೋಮಾನದ ಕೆಲವರಿಗೆ ಸೀಮಿತ ಅವಕಾಶ ನೀಡಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.

    ಇದನ್ನೂ ಓದಿ: ರಾಜ್ಯದಲ್ಲಿ 300ಕ್ಕೂ ಹೆಚ್ಚು ಬ್ಲ್ಯಾಕ್ ಫಂಗಸ್ ಪ್ರಕರಣ; ಕರೊನಾ ಗುಣಮುಖರಿಗೆ ಇಎನ್​ಟಿ ತಪಾಸಣೆಗೆ ಸೂಚನೆ

    ಇಂದು ಮಧ್ಯಾಹ್ನ ಜಾರಿಗೊಳಿಸಿರುವ ಸೂಚನೆಗಳಲ್ಲಿ, ಲಸಿಕಾ ಕೇಂದ್ರಗಳಲ್ಲಿ ಕೋವಿನ್​ ನೋಂದಣಿಗೆ ಅವಕಾಶ ಮಾಡಿಕೊಟ್ಟಿರುವ ಕೇಂದ್ರ ಸರ್ಕಾರ, ಈ ಬಗ್ಗೆ ಅಂತಿಮ ನಿರ್ಧಾರವನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಯಾ ಸರ್ಕಾರಗಳ ಮೇಲೇ ಬಿಟ್ಟಿದೆ. ರಾಜ್ಯ ಸರ್ಕಾರಗಳು ಈ ರೀತಿ ಅವಕಾಶವನ್ನು ಕಲ್ಪಿಸಲು ನಿರ್ಧರಿಸಿದಲ್ಲಿ, ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಮಾತ್ರ ವಾಕ್​ಇನ್​ಗೆ ಅವಕಾಶ ನೀಡಬಹುದು, ಖಾಸಗಿ ಆಸ್ಪತ್ರೆಗಳಲ್ಲಿ ಅಲ್ಲ ಎಂದೂ ಕೇಂದ್ರ ಹೇಳಿದೆ.

    ಇದೇ ತೆರನ ವಾಕ್​ಇನ್ ನೋಂದಣಿ ಅವಕಾಶವು ಈಗಾಗಲೇ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಲಭ್ಯವಿದೆ. ಹೆಚ್ಚು ಜನಸಂದಣಿ ಉಂಟಾಗುವುದನ್ನು ತಪ್ಪಿಸಲು ಈ ಅವಕಾಶವನ್ನು 18-44 ವರ್ಷದವರಿಗೆ ಈವರೆಗೆ ನೀಡಿರಲಿಲ್ಲ. ಆದರೆ, ನೋಂದಣಿ ಮಾಡಿರುವವರು ಲಸಿಕೆ ಪಡೆಯಲು ಬಾರದ ಪಕ್ಷದಲ್ಲಿ ಲಸಿಕೆಯ ಡೋಸ್​ಗಳು ವ್ಯರ್ಥವಾಗುವುದನ್ನು ತಪ್ಪಿಸಲು, ಇನ್ನು ಮುಂದೆ ಎಲ್ಲಾ ವಯಸ್ಕರಿಗೂ ಅಲ್ಪ ಪ್ರಮಾಣದಲ್ಲಿ ವಾಕ್​ಇನ್​ಗಳಿಗೆ ಅವಕಾಶ ನೀಡಬೇಕೆಂದು ಸರ್ಕಾರ ಹೇಳಿದೆ. (ಏಜೆನ್ಸೀಸ್)

    ಮಾಂಸ ಕಡಿಯುವ ಕತ್ತಿಯಿಂದ ಅಣ್ಣ ಅತ್ತಿಗೆಯನ್ನು ಕೊಚ್ಚಿದ; ಪುಟ್ಟ ಕಂದಮ್ಮನನ್ನೂ ಬಿಡಲಿಲ್ಲ…

    ಕರೊನಾ ಕಾಲದಲ್ಲಿ ಮನೆಗಳಲ್ಲೇ ಗಟ್ಟಿಮೇಳ ! ತುಮಕೂರು ಜಿಲ್ಲೆಯಲ್ಲಿ 2 ದಿನಗಳಲ್ಲಿ 500 ಮದುವೆ !

    VIDEO | ಕರೊನಾದಿಂದ ಗುಣಮುಖರಾದ ವೃದ್ಧೆಯ ಲವಲವಿಕೆ ನೋಡಿ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts