More

    ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ನಾಳೆಯಿಂದ ಲಸಿಕಾ ಸೌಲಭ್ಯ

    ನವದೆಹಲಿ: ಕರೊನಾ ಲಸಿಕಾ ಅಭಿಯಾನದ ಎರಡನೇ ಹಂತವು ಆರಂಭವಾದಂತೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಿರಿಯ ರಾಜಕಾರಣಿಗಳು ಲಸಿಕೆ ಪಡೆಯುತ್ತಿದ್ದಾರೆ. ಲಸಿಕಾ ಕಾರ್ಯಕ್ರಮದ ವ್ಯಾಪ್ತಿ ವಿಸ್ತಾರವಾಗುತ್ತಿರುವಂತೆ, ಫಲಾನುಭವಿಗಳ ಗುಂಪಿಗೆ ಸೇರುವ ದೇಶದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರೂ ನಾಳೆಯಿಂದ ಲಸಿಕೆ ಪಡೆಯಲಿದ್ದಾರೆ.

    ಸುಪ್ರೀಂ ಕೋರ್ಟ್ ರೆಜಿಸ್ಟ್ರಿಯು ಕರೊನಾ ಲಸಿಕೆ ನೀಡುವುದಕ್ಕಾಗಿ ನವದೆಹಲಿಯಲ್ಲಿ ನ್ಯಾಯಾಲಯದ ಆವರಣದಲ್ಲೇ ಮಂಗಳವಾರದಿಂದ ಲಸಿಕಾ ಸೌಲಭ್ಯವನ್ನು ವ್ಯವಸ್ಥೆ ಮಾಡಿದೆ. ಸರ್ಕಾರದ ನಿಯಮದಂತೆ 60 ವರ್ಷ ಮೇಲ್ಪಟ್ಟವರು ಅಥವಾ ತೀವ್ರ ಖಾಯಿಲೆಗಳುಳ್ಳ 45 ವರ್ಷ ಮೇಲ್ಪಟ್ಟವರ ಗುಂಪಿಗೆ ಸೇರುವ ಹಾಲಿ ಮತ್ತು ನಿವೃತ್ತ ನ್ಯಾಯಮೂರ್ತಿಗಳಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ಇಲ್ಲಿ ಲಸಿಕೆ ನೀಡಲಾಗುವುದು ಎನ್ನಲಾಗಿದೆ.

    ಇದನ್ನೂ ಓದಿ: ‘ಮೋದಿ ಹೆಮ್ಮೆಯ ಚಾಯ್​ವಾಲಾ!’ ಪ್ರಧಾನಿಯನ್ನು ಹೊಗಳಿದ ಗುಲಾಮ್​ ನಬಿ ಆಜಾದ್

    ಇಲ್ಲಿ ಬಿಟ್ಟು ಬೇರೆ ಯಾವುದೇ ಸರ್ಕಾರದಿಂದ ಪಟ್ಟಿ ಮಾಡಲಾದ ಆಸ್ಪತ್ರೆಯಲ್ಲಿ ಸಹ ನ್ಯಾಯಾಧೀಶರು ಲಸಿಕೆ ಪಡೆಯಬಹುದಾಗಿದೆ. ಆದರೆ ಸಾಮಾನ್ಯ ಜನರಂತೆಯೇ ನ್ಯಾಯಾಧೀಶರಿಗೂ ಕೋವಾಕ್ಸಿನ್ ಅಥವಾ ಕೋವಿಶೀಲ್ಡ್​ ಲಸಿಕೆಗಳ ನಡುವೆ ಆಯ್ಕೆಯ ಸ್ವಾತಂತ್ರ್ಯ ಇರುವುದಿಲ್ಲ ಎನ್ನಲಾಗಿದೆ.

    ಪ್ರಧಾನಿ ನರೇಂದ್ರ ಮೋದಿ ಅವರೂ ಇಂದು ಕರೊನಾ ಲಸಿಕೆ ಪಡೆದುಕೊಂಡಿದ್ದು, ಅವರಿಗೆ ಮೇಡ್​ ಇನ್ ಇಂಡಿಯಾ ಲಸಿಕೆಯಾದ ಕೋವಾಕ್ಸಿನ್​ನ ಮೊದಲ ಡೋಸ್ ನೀಡಲಾಗಿದೆ. ಲಸಿಕೆ ಪಡೆದ ಪ್ರಧಾನಿ ಮೋದಿ ಅವರು, ಫಲಾನುಭವಿಗಳ ಗುಂಪಿಗೆ ಸೇರುವ ಎಲ್ಲರೂ ಲಸಿಕೆ ಪಡೆದು, ಭಾರತವನ್ನು ಕೋವಿಡ್​ಮುಕ್ತಗೊಳಿಸಬೇಕೆಂದು ಕರೆ ನೀಡಿದ್ದಾರೆ.(ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಕಂಗನಾ ವಿರುದ್ಧ ಬೇಲಬಲ್ ವಾರಂಟ್… ಮಾತೇ ಮುಳುವಾಯಿತೇ ?!

    ‘ಕ್ರಾಂತಿಕಾರಿ ಚಂದ್ರಶೇಖರ ಆಜಾದ್​ರ ಸಾವಿಗೆ ನೆಹರೂ ಕಾರಣ’ : ಬಿಜೆಪಿ ಶಾಸಕ

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts