More

    ಕರೊನಾ ಸೋಂಕಿತರಲ್ಲಿ ಪುರುಷರೇ ಹೆಚ್ಚು

    ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
    ಉಡುಪಿ ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ಬಂದವರಲ್ಲಿ ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮಹಿಳೆಯರು ಹಾಗೂ ಮಕ್ಕಳು ಆನಂತರದ ಸ್ಥಾನ ಪಡೆದುಕೊಂಡಿದ್ದಾರೆ.

    ಉಡುಪಿ ಜಿಲ್ಲೆ ಬೈಂದೂರು ರಾಜ್ಯದ ಅತೀ ಹಿಂದುಳಿದ ಕ್ಷೇತ್ರ ಎನ್ನುವ ಅಪವಾದದ ನಡುವೆಯೂ ಕರೊನಾ ಸೋಂಕಿತರು ಗುಣಮುಖರಾದ ಲಿಸ್ಟ್‌ನಲ್ಲಿ ಮೊದಲ ಸ್ಥಾನದಲ್ಲಿದೆ. ಅತೀ ಹೆಚ್ಚು ಪುರುಷರು, ಮಕ್ಕಳು, ಮಹಿಳೆ ಹಾಗೂ ಗರ್ಭಿಣಿಯರ ಸಂಖ್ಯೆಯಲ್ಲೂ ಬೈಂದೂರು ಫಸ್ಟ್. ಹೆಬ್ರಿ ತಾಲೂಕು ಸೋಂಕಿತರೆಲ್ಲರೂ ಆಸ್ಪತ್ರೆಯಿಂದ ಮರಳುವ ಮೂಲಕ ನೂರಕ್ಕೆ ನೂರು ಸಾಧನೆ ಮಾಡಿದೆ.

    ಅತೀ ಕಡಿಮೆ ಸೋಂಕು ಹೆಬ್ರಿ ತಾಲೂಕಿನಲ್ಲಿ. ಅಲ್ಲಿ ಒಟ್ಟು 33 ಜನರಿದ್ದು, ನಂತರದ ಸ್ಥಾನ ಕಾಪು ಪಡೆದುಕೊಂಡಿದೆ. ಇಲ್ಲಿ 101 ಮಂದಿಯಲ್ಲಿ ಪಾಸಿಟಿವ್ ಕಂಡುಬಂದಿತ್ತು.

    ಅತೀ ಹೆಚ್ಚು ಸೋಂಕಿತರನ್ನು ಕಂಡ ಬೈಂದೂರು ತಾಲೂಕಿನಲ್ಲಿ ಒಟ್ಟು 671 ಪ್ರಕರಣಗಳ ಪೈಕಿ ಎಲ್ಲರೂ ಸೋಂಕು ಮುಕ್ತರಾಗಿದ್ದಾರೆ. ಹೃದಯ, ಕಿಡ್ನಿ ಹಾಗೂ ಲಿವರ್ ಸಮಸ್ಯೆಯಿಂದ ಮುಂಬೈನಿಂದ ಬೈಂದೂರಿಗೆ ಬಂದ ಇಬ್ಬರು ಮನೆಯಲ್ಲಿ ಮೃತಪಟ್ಟಿದ್ದು, ಈ ಪೈಕಿ ಒಬ್ಬರು ಕುಂದಾಪುರ ತಾಲೂಕಿನವರು. ಇದುವರೆಗೆ ಪಾಸಿಟಿವ್ ಕಂಡುಬಂದ 1389 ಪ್ರಕರಣದಲ್ಲಿ ಎಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆಯಿಲ್ಲದೆ ಬಿಸಿ ನೀರು, ಪೌಷ್ಟಿಕ ಆಹಾರ ಸೇವನೆ, ವೈದ್ಯರ ಮಾನಸಿಕ ಧೈರ್ಯ, ಸಲಹೆ ಪಡೆದು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡು ಮನೆಗೆ ಮರಳಿದ್ದಾರೆ.

    ಬೇರೆ ತಾಲೂಕಿಗೆ ಹೋಲಿಸಿದರೆ ಮುಂಬೈಯಿಂದ ಬೈಂದೂರಿಗೆ ಕುಟುಂಬ ಸಮೇತ ಬಂದವರ ಸಂಖ್ಯೆ ಹೆಚ್ಚಿದ್ದು, ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಮೂಲಕ ಊರಿಗೆ ಮರಳಿದ್ದರಿಂದ ಪ್ರೈಮರಿ ಕಾಂಟ್ಯಾಕ್ಟ್ ನಿಂದಾಗಿ ಸೋಂಕಿತರ ಸಂಖ್ಯೆ ಹೆಚ್ಚಲು ಕಾರಣ. ಈಗಲೂ ಮುಂಬೈಯಿಂದ ದೊಡ್ಡ ಸಂಖ್ಯೆಯಲ್ಲಿ ಊರಿಗೆ ಬರುತ್ತಿದ್ದು, 14 ದಿನ ಹೋಮ್ ಕ್ವಾರಂಟೈನ್ ಸಮಯದಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವ ಮೂಲಕ ವೈರಸ್ ಹಬ್ಬದಂತೆ ನೋಡಿಕೊಳ್ಳಬೇಕು.
    -ಜಿ.ಜಗದೀಶ್ ಜಿಲ್ಲಾಧಿಕಾರಿ ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts