More

    ಹುಬ್ಬಳ್ಳಿಯಲ್ಲಿ ‘ಗಣೇಶ’ನಿಂದ ಕರೊನಾ ಸಂಹಾರ!

    ಗಣೇಶ ಚತುರ್ಥಿಗೆ ಇನ್ನು ಎರಡು ತಿಂಗಳು ಮಾತ್ರ ಬಾಕಿ ಇದೆ. ಆಗಸ್ಟ್ 22ಕ್ಕೆ ನಡೆಯುವ ಗಣೇಶ ಚತುರ್ಥಿಗಾಗಿ ರಾಜ್ಯದೆಲ್ಲೆಡೆ ಗಣೇಶನ ಮಣ್ಣಿನ ವಿಗ್ರಹಗಳನ್ನು ತಯಾರು ಮಾಡುವ ಕೆಲಸಕ್ಕೆ ಕಲಾವಿದರು ಈಗಾಗಲೇ ಶುರುವಿಟ್ಟುಕೊಂಡಿದ್ದಾರೆ. ಪ್ರತಿ ವರ್ಷವೂ ಆಯಾ ಸಂದರ್ಭದಲ್ಲಿನ ಪ್ರಚಲಿತ ವಿಷಯಕ್ಕೆ ಸಂಬಂಧಿಸಿದಂತೆ ಗಣಪತಿಯ ಮೂರ್ತಿಗಳನ್ನು ರಚಿಸುವುದು ಕಲಾವಿದರು ಅನೂಚಾನವಾಗಿ ನಡೆಸಿಕೊಂಡು ಬಂದಿರುವ ಪದ್ಧತಿ. ಅದೇ ರೀತಿ ಈಗ ಕರೊನಾ ಹಾವಳಿ ಹೆಚ್ಚಾಗಿರುವುದರಿಂದ ಆ ವಿಷಯವೂ ಗಣೇಶ ಹಬ್ಬದ ‘ಥೀಮ್’ ಆಗಿ ಕೆಲವೆಡೆ ರೂಪುಗೊಳ್ಳುತ್ತಿದೆ.

    ಹುಬ್ಬಳ್ಳಿಯ ಸಚಿನ್ ಕಂಬಾರ ಎಂಬ ಕಲಾವಿದ ಇಂಥದೊಂದು ಗಣೇಶನ ಮೂರ್ತಿಯನ್ನು ರಚಿಸಿ ಗಮನ ಸೆಳೆಯುತ್ತಿದ್ದಾರೆ. ಕರೊನಾದ ಮೇಲೆ ಹತ್ತಿ ನಿಂತಿರುವ ಗಣೇಶ, ಅದನ್ನು ತನ್ನ ಕೈಯಲ್ಲಿರುವ ಭರ್ಜಿಯಿಂದ ಸಂಹರಿಸುತ್ತಿರುವ ರೂಪಕವನ್ನು ಕಲಾವಿದ ಸಚಿನ್ ರಚಿಸುತ್ತಿದ್ದಾರೆ. ಇನ್ನೆರಡು ತಿಂಗಳಲ್ಲಿ ಆರಂಭವಾಗುವ ಗಣೇಶನ ಹಬ್ಬದ ಹೊತ್ತಿಗೆ ಕರೊನಾ ಹಾವಳಿ ಇಳಿಮುಖವಾದರೆ, ಈ ‘ಕರೊನಾ ಸಂಹಾರಿ ಗಣೇಶ’ನ ಮೂರ್ತಿಯೇ ಹುಬ್ಬಳ್ಳಿಯ ಗಣೇಶೋತ್ಸವದಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗುವ ನಿರೀಕ್ಷೆ ಇದೆ.

    40 ವರ್ಷದ ಬಳಿಕ ಗ್ರಹಣ ದಿನದಂದು ಕಾವೇರಿ ನದಿಯಲ್ಲಿ ಡಿಕೆಶಿ ಮಾಡಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts