More

    ನಾರಾಯಣ ನೇತ್ರಾಲಯದಲ್ಲಿ ಕರೊನಾ ಪತ್ತೆ ಪ್ರಯೋಗಾಲಯ

    ಬೆಂಗಳೂರು: ನಗರದ ನಾರಾಯಣ ನೇತ್ರಾಲಯದಲ್ಲಿ ಕರೊನಾ ಸೋಂಕು ಪತ್ತೆ ಪ್ರಯೋಗಾಲಯ ಪ್ರಾರಂಭಿಸಲು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ (ಐಸಿಎಂಆರ್) ಅನುಮತಿ ದೊರೆತಿದೆ.

    ಇದನ್ನೂ ಓದಿ: ಲಗ್ನ ನೆಚ್ಚಿಕೊಂಡವರ ಬದುಕಿಗೆ ವಿಘ್ನ: ಬಾಣಸಿಗರು, ಡೆಕೋರೇಟರ್ಸ್, ಜವಳಿ ವ್ಯಾಪಾರಿಗಳು ಕಕ್ಕಾಬಿಕ್ಕಿ

    ಈಗಾಗಲೇ ನ್ಯಾಷನಲ್ ಅಕ್ರಿಡೇಷನ್ ಬೋರ್ಡ್ ಫಾರ್ ಟೆಸ್ಟಿಂಗ್ ಆಂಡ್ ಕ್ಯಾಲಿಬರೇಷನ್ ಲ್ಯಾಬೊರೇಟರೀಸ್​ನಿಂದ ಮಾನ್ಯತೆ ಹೊಂದಿರುವ ನ್ಯಾರಾಯಣ ನೇತ್ರಾಲಯ ಇದೀಗ ಕರೊನಾ ಪರೀಕ್ಷೆ ಪ್ರಯೋಗಾಲಯ ಹೊಂದಿ ರುವ ದೇಶದ ಮೊದಲ ನೇತ್ರಾಲಯವಾಗಲಿದೆ.

    ಇದನ್ನೂ ಓದಿ:  ಸಾವರ್ಕರ್ ಹೆಸರಿನ ವಿವಾದ: ಮೇಲ್ಸೇತುವೆ ಉದ್ಘಾಟನೆಯೇ ಮುಂದೂಡಿಕೆ!

    ಕರೊನಾ ವೈರಸ್ ಹಿನ್ನೆಲೆಯಲ್ಲಿ ಸೋಂಕು ಹರಡುವಿಕೆ ತಡೆಗಟ್ಟಲು ಹಾಗೂ ಸೋಂಕು ಪತ್ತೆ ಹಚ್ಚಲು ಪ್ರಯೋಗಾಲಯ ಪ್ರಾರಂಭಿಸಲು ಐಸಿಎಂಆರ್ ಅನುಮತಿ ನೀಡಿದೆ. ಆಸ್ಪತ್ರೆಯಲ್ಲಿ ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಇನ್ನೊಂದು ವಾರದಲ್ಲಿ ಕಾರ್ಯಾರಂಭಗೊಳ್ಳಲಿದೆ ಎಂದು ಆಸ್ಪತ್ರೆ ಅಧ್ಯಕ್ಷ ಡಾ. ಭುಜಂಗ ಶೆಟ್ಟಿ ತಿಳಿಸಿದ್ದಾರೆ. ನಿತ್ಯ ನೂರು ಮಂದಿಗೆ ಕರೊನಾ ಸೋಂಕು ಪತ್ತೆ ಪರೀಕ್ಷೆ ನಡೆಸಬಹುದು. ಸರ್ಕಾರ ನಿಗದಿಪಡಿಸಿರುವಂತೆ 4,500 ರೂ.ಗೆ ಪರೀಕ್ಷೆ ನಡೆಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

    ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ವಂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts