More

    ಸಾಗರ ಮಹಿಳೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲು

    ಉಡುಪಿ: ಶಂಕಿತ ನೋವೆಲ್ ಕರೊನಾ ವೈರಸ್(ಕೋವಿಡ್-19) ಸೋಂಕಿಗೆ ಒಳಗಾಗಿದ್ದಾರೆ ಎನ್ನಲಾದ ಮಹಿಳೆಯನ್ನು ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸಾಗರ ಮೂಲದ 68 ವರ್ಷದ ಮಹಿಳೆ ಫೆಬ್ರವರಿ ಕೊನೇ ವಾರದಲ್ಲಿ ಮೆಕ್ಕಾ ಯಾತ್ರೆಗೆ ತೆರಳಿದ್ದು, ಈ ಸಂದರ್ಭ ಕೆಮ್ಮು, ಜ್ವರ, ಉಸಿರಾಟ ಸಮಸ್ಯೆ ಕಾಣಿಸಿಕೊಂಡಿತ್ತು. ಸೌದಿಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಸ್ವಲ್ಪ ಗುಣಮುಖರಾದ ಬಳಿಕ ಬೆಂಗಳೂರಿಗೆ ಆಗಮಿಸಿದ್ದರು. ಈಗ ಮತ್ತೆ ಅನಾರೋಗ್ಯ ಕಾಡಿದ್ದರಿಂದ ಮಣಿಪಾಲ ಆಸ್ಪತ್ರೆಗೆ ಸೇರಿಸಲಾಗಿದೆ.

    ಆಸ್ಪತ್ರೆಯಿಂದ ಶಂಕಿತ ರೋಗಿಯ ಗಂಟಲು ದ್ರವ, ರಕ್ತದ ಮಾದರಿ ಸಂಗ್ರಹಿಸಿ, ಸೋಂಕು ಪರೀಕ್ಷೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ರೋಗಿಯನ್ನು ಆಸ್ಪತ್ರೆಯಲ್ಲಿರುವ ಪ್ರತ್ಯೇಕ ಕೊಠಡಿಯಲ್ಲಿರಿಸಿ ನಿಗಾ ವಹಿಸಲಾಗುತ್ತಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರಿನಿಂದ ವೈದ್ಯಕೀಯ ವರದಿ ಬಂದ ಬಳಿಕ ಸೋಂಕಿನ ಬಗ್ಗೆ ತಿಳಿಯಲಿದೆ.

    ಆಸ್ಪತ್ರೆಯಲ್ಲಿ ಶಂಕಿತ ರೋಗಿಗಳ ಚಿಕಿತ್ಸೆಗಾಗಿ ಆರೋಗ್ಯ ಇಲಾಖೆ ಸೂಚನೆಯಂತೆ 20 ಐಸೋಲೇಶನ್ ವಾರ್ಡ್‌ಗಳನ್ನು ಸಿದ್ಧಪಡಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts