More

    ಕರೊನಾ ಪಾಸಿಟಿವಿಟಿ ರೇಟ್ ಏರಿಕೆ

    ಕಾರವಾರ: ಜಿಲ್ಲೆಯ ಕೋವಿಡ್ ಹರಡುವಿಕೆ ದರ (ಪಾಸಿಟಿವಿಟಿ ರೇಟ್) ಶೇ. 5.17ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಸಾವಿರ ದಾಟಿದೆ.

    ಜಿಲ್ಲೆಯ ಶಿರಸಿ ಹಾಗೂ ಕಾರವಾರ ಪ್ರಯೋಗಾಲಯಗಳಲ್ಲಿ ದಿನಕ್ಕೆ ಸರಾಸರಿ 5 ಸಾವಿರ ಜನರ ಗಂಟಲ ದ್ರವದ ಮಾದರಿ ಪರೀಕ್ಷೆ ಮಾಡಲಾಗುತ್ತಿದೆ. ವಾರದ ಹಿಂದೆ ಶೇ. 1ಕ್ಕಿಂತ ಕಡಿಮೆ ಇದ್ದ ಪಾಸಿಟಿವಿಟಿ ರೇಟ್ ಈಗ ಶೇ. 5ಕ್ಕಿಂತ ಹೆಚ್ಚು ಏರಿದೆ.

    ಹೊನ್ನಾವರದ ಪ್ರಭಾತ ನಗರ ಸರ್ಕಾರಿ ಹೈಸ್ಕೂಲ್, ಕಾಲೇಜ್​ನಲ್ಲಿ 14 ಮಕ್ಕಳಿಗೆ ಕೋವಿಡ್ ಖಚಿತವಾಗಿರುವುದರಿಂದ ಡಿ. 20ರವರೆಗೆ ತರಗತಿಗಳನ್ನು ಮುಚ್ಚಲಾಗಿದೆ. ಜಿಲ್ಲೆಯಲ್ಲಿ ಸದ್ಯ 18 ವರ್ಷದೊಳಗಿನ 54 ವಿದ್ಯಾರ್ಥಿಗಳಲ್ಲಿ, 18 ವರ್ಷ ಮೇಲ್ಪಟ್ಟ 112 ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ತಗುಲಿದೆ.

    278 ಜನರಿಗೆ ಸೋಂಕು: ಶುಕ್ರವಾರದ ಜಿಲ್ಲಾ ಹೆಲ್ತ್ ಬುಲೆಟಿನ್​ನಂತೆ ಜಿಲ್ಲೆಯ 278 ಜನರಿಗೆ ಹೊಸದಾಗಿ ಕರೊನಾ ಖಚಿತವಾಗಿದೆ. 30 ಜನ ಗುಣವಾಗಿದ್ದಾರೆ. ಕಾರವಾರದಲ್ಲಿ-85, ಅಂಕೋಲಾ-41 ಕುಮಟಾ-27, ಹೊನ್ನಾವರ-50, ಭಟ್ಕಳ-11, ಶಿರಸಿ-19, ಸಿದ್ದಾಪುರ-15, ಯಲ್ಲಾಪುರ-10, ಮುಂಡಗೋಡ-16, ಜೊಯಿಡಾದಲ್ಲಿ-4 ಪ್ರಕರಣಗಳು ಖಚಿತವಾಗಿವೆ. 1096 ಸಕ್ರಿಯ ಪ್ರಕರಣಗಳಿವೆ. 78 ಜನ ಆಸ್ಪತ್ರೆಗಳಲ್ಲಿದ್ದಾರೆ.

    ಲಸಿಕೆ ಪಡೆದ 766 ಜನರಿಗೆ ಜ್ವರ: ಒಟ್ಟು ಸಕ್ರಿಯ ಪ್ರಕರಣಗಳ ಪೈಕಿ ಕೋವಿಡ್ ಲಸಿಕೆ ಪಡೆದ 766 ಜನರಿಗೆ, ಲಸಿಕೆ ಪಡೆಯದ 82 ಜನರಿಗೆ ಕರೊನಾ ಸೋಂಕು ತಗುಲಿದೆ. ಒಟ್ಟು ಸೋಂಕಿತರಲ್ಲಿ 702 ಜನ ಎರಡು ಡೋಸ್ ಪಡೆದವರು. 57 ಜನ ಮೊದಲ ಡೋಸ್ ಮಾತ್ರ ಪಡೆದವರು, 7 ಜನ ಮೂರು ಡೋಸ್ ಪಡೆದವರಾಗಿದ್ದಾರೆ.

    ವೈದ್ಯರ ಸಹಾಯವಾಣಿ: ಕೋವಿಡ್​ಗೆ ಸಂಬಂಧಿಸಿದಂತೆ ತಹಸೀಲ್ದಾರ್ ಕಚೇರಿಯಿಂದ 24*7 ಸಹಾಯವಾಣಿ ಆರಂಭಿಸಲಾಗಿದೆ ಎಂದು ಕಾರವಾರ ತಹಸೀಲ್ದಾರ್ ನಿಶ್ಚಲ ನರೋನಾ ತಿಳಿಸಿದ್ದಾರೆ. ಕೋವಿಡ್ ಸಂಬಂಧಿ ಮಾಹಿತಿಗಾಗಿ ದೂರವಾಣಿ: 08382- 223350, ಮೊಬೈಲ್: 8147745176ಗೆ ಸಂರ್ಪಸಬಹುದು. ಆರೋಗ್ಯ ಸಂಬಂಧಿ ಮಾಹಿತಿಗಾಗಿ ಡಾ. ಪ್ರೀತಿ- 9901835516, ಡಾ. ಸುಚೇತಾ- 9197688380, ಡಾ. ನಾಗೇಶ- 6361576550 ಅವರನ್ನು ಸಂರ್ಪಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts