More

    ಮತ್ತೆ ಒಂಬತ್ತು ಜನರಿಗೆ ಕೋವಿಡ್ ದೃಢ

    ವಿಜಯವಾಣಿ ಸುದ್ದಿಜಾಲ ಗದಗ

    ಜಿಲ್ಲೆಯಲ್ಲಿ ಮಂಗಳವಾರ 9 ಜನರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಇದರಿಂದ ಸೋಂಕಿತರ ಸಂಖ್ಯೆ 330ಕ್ಕೆ ಏರಿಕೆಯಾಗಿದೆ.

    ಗಜೇಂದ್ರಗಡ ಪಟ್ಟಣದ ಕುಷ್ಟಗಿ ರಸ್ತೆಯ ಸಿದ್ದ ಬಡಾವಣೆ ನಿವಾಸಿ 25 ವರ್ಷದ ಪುರುಷನಿಗೆ ಕೆಮ್ಮು, ಜ್ವರ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿದೆ.

    ಅಂತರ ಜಿಲ್ಲಾ ಪ್ರಯಾಣದ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯ ಕನವಳ್ಳಿ ಗ್ರಾಮದ ನಿವಾಸಿ 48 ವರ್ಷದ ಮಹಿಳೆಗೆ ಸೋಂಕು ತಗುಲಿದೆ.

    ಕೋವಿಡ್ ಸೋಂಕಿತ ಪಿ-35070 ಸಂಪರ್ಕದಿಂದ ಗದಗ-ಬೆಟಗೇರಿ ದಾಸರ ಓಣಿ ನಿವಾಸಿ 34 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

    ಗದಗ ತಾಲೂಕಿನ ಮಲ್ಲಸಮುದ್ರ ಗ್ರಾಮದ ನಿವಾಸಿ 65 ವರ್ಷದ ಮಹಿಳೆಗೆ ಕೆಮ್ಮು, ಜ್ವರ ಲಕ್ಷಣಗಳಿಂದಾಗಿ ಸೋಂಕು ತಗುಲಿದೆ.

    ಗದಗ-ಬೆಟಗೇರಿ ನಗರದ ದಾಸರ ಓಣಿ ನಿವಾಸಿ 63 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ಧಾರವಾಡ ಜಿಲ್ಲೆಯ ಸತ್ತೂರ ಪ್ರದೇಶದ ನಿವಾಸಿ 70 ವರ್ಷದ ಪುರುಷನಿಗೆ ಉಸಿರಾಟದ ತೊಂದರೆಯಿಂದ ಸೋಂಕು ಬಂದಿದೆ.

    ಗದಗ-ಬೆಟಗೇರಿ ನಗರದ ಅಂಬೇಡ್ಕರ ನಗರದ ನಿವಾಸಿ 38 ವರ್ಷದ ಮಹಿಳೆಗೆ ಕೆಮ್ಮು, ಜ್ವರದ ಲಕ್ಷಣಗಳಿಂದ ಸೋಂಕು ತಗುಲಿದೆ.

    ಗದಗ ನಗರದ ಅಬ್ಬಿಗೇರಿ ಕಾಂಪೌಂಡ್ ನಿವಾಸಿ 55 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದ್ದು, ಸೋಂಕಿನ ಪತ್ತೆ ಕಾರ್ಯ ನಡೆದಿದೆ.

    ಗದಗ-ಬೆಟಗೇರಿ ನಗರದ ವಾರ್ಡ್ ನಂ. 32 ಲೋಕೋಪಯೋಗಿ ಇಲಾಖೆ ಕಚೇರಿ ಹಿಂದುಗಡೆಯ ದಾಸರ ಓಣಿ ನಿವಾಸಿ 57 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರಿಗೆ ನಿಗದಿತ ಕೋವಿಡ್-19 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ತಿಳಿಸಿದ್ದಾರೆ.

    ಲಕ್ಷ್ಮೇಶ್ವರ ವ್ಯಾಪಾರಿಗೆ ಕರೊನಾ: ಲಕ್ಷ್ಮೇಶ್ವರ ಪಟ್ಟಣದ ಪ್ರಮುಖ ವ್ಯಾಪಾರಿ, ಈಶ್ವರ ನಗರದ ನಿವಾಸಿ 56 ವರ್ಷದ ಪುರುಷನಿಗೆ ಕರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮುಖ್ಯ ಬಜಾರ್​ನ 50 ಮೀಟರ್ ಸುತ್ತಲಿನ ಪ್ರದೇಶ ಮತ್ತು ಅವರ ನಿವಾಸದ ಸುತ್ತಲಿನ ಪ್ರದೇಶವನ್ನು ಮಂಗಳವಾರ ಸೀಲ್​ಡೌನ್ ಮಾಡಲಾಗಿದೆ.

    ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದರೂ ದಿನೇ ದಿನೆ ವ್ಯಾಪಾರ ವಹಿವಾಟು ಜೋರಾಗಿಯೇ ನಡೆದಿದೆ. ಸಾವಿರಾರು ಜನರು ಮುಂಜಾಗ್ರತೆ ಕ್ರಮ ವಹಿಸದೇ ಗುಂಪು ಗುಂಪಾಗಿ ಪ್ರತಿನಿತ್ಯ ಸೇರುತ್ತಿರುವುದು ಸಾಮಾನ್ಯವಾಗಿದೆ. ಮಂಗಳವಾರವೂ ಎಂದಿನಂತೆ ಪಟ್ಟಣದಲ್ಲಿ ವ್ಯಾಪಾರ-ವಹಿವಾಟು ಜೋರಾಗಿಯೇ ಸಾಗಿತ್ತು. ಬೆಳಗ್ಗೆ 10 ಗಂಟೆ ಸುಮಾರಿಗೆ ವ್ಯಾಪಾರಿಗೆ ಸೋಕು ಹರಡಿರುವ ಸುದ್ದಿ ಹರಡುತ್ತಿದ್ದಂತೆ ಜನತೆ ಮತ್ತು ವ್ಯಾಪಾರಸ್ಥರು ಆತಂಕಕ್ಕೀಡಾದರು. ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಸೂಚನೆ ಹಿನ್ನೆಲೆಯಲ್ಲಿ ಪುರಸಭೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸೋಂಕಿತನ ಎರಡೂ ಅಂಗಡಿಗಳ ಸುತ್ತಲಿನ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿಸಿ, ಸುತ್ತಲಿನ ಪ್ರದೇಶವನ್ನು ಸೀಲ್​ಡೌನ್ ಮಾಡಿಸಿದರು.

    ಸಮಯಕ್ಕೆ ಸಿಗುತ್ತಿಲ್ಲ ಉಪಾಹಾರ: ಕ್ವಾರಂಟೈನ್​ನಲ್ಲಿ ಇದ್ದವರಿಗೆ ಬೆಳಗ್ಗೆ 11 ಗಂಟೆಯಾದರೂ ಉಪಾಹಾರ ನೀಡದ ಕಾರಣ ಸಣ್ಣಪುಟ್ಟ ಮಕ್ಕಳಿಗೆ ತೊಂದರೆಯಾಯಿತು ಎಂದು ಮುಂಡರಗಿ ಪಟ್ಟಣದ ಅಲ್ಪಸಂಖ್ಯಾತರ ವಸತಿ ನಿಲಯದ ಕ್ವಾರಂಟೈನ್​ನಲ್ಲಿರುವ ಕೊಟ್ರಯ್ಯ ಅಬ್ಬಿಗೇರಿಮಠ ಆರೋಪಿಸಿದ್ದಾರೆ.

    ಸೋಮವಾರ ತಡರಾತ್ರಿ ಬಸ್ ಮೂಲಕ ಪಟ್ಟಣಕ್ಕೆ ಆಗಮಿಸಿ ಕ್ವಾರಂಟೈನ್​ನಲ್ಲಿರುವ ಅವರು, ‘ನಾವೇ ಹೊರಗಡೆ ಹೋಗಿ ತಿಂಡಿ ತರಲೂ ಅವಕಾಶ ಕೊಟ್ಟಿಲ್ಲ. ಮಕ್ಕಳು ಹಸಿವಿನಿಂದ ಒದ್ದಾಡಿದರು’ ಎಂದು ಸಮಸ್ಯೆ ಹೇಳಿಕೊಂಡಿದ್ದಾರೆ.

    ಈ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿದ ಆರೋಗ್ಯ ಇಲಾಖೆ ಪ್ರಭಾರಿ ವೈದ್ಯಾಧಿಕಾರಿ ಡಾ. ಸಂತೋಷ ಪಾಟೀಲ, ‘ಬೆಳಗ್ಗೆ 9ಕ್ಕೆ ಉಪಾಹಾರ ತಯಾರಿಸಲಾಗಿದೆ. ಬ್ರೆಡ್, ಬಿಸ್ಕತ್ ಸಹ ನೀಡಲಾಗಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts