More

    ಕರೊನಾ ಪಾಸಿಟಿವ್​ ಬರುತ್ತಿದ್ದಂತೆ ಮನೆ ತೊರೆದ ಮಹಿಳೆ ನಾಲೆಗೆ ಹಾರಿ ಪ್ರಾಣಬಿಟ್ಟಳು!

    ಮಂಡ್ಯ: ಮಾಹಾಮಾರಿ ಕರೊನಾ ಸೋಂಕು ಸೃಷ್ಟಿಸುತ್ತಿರುವ ಅವಾಂತರ ಅಷ್ಟಿಷ್ಟಲ್ಲ. ಸೋಂಕು ತಗುಲಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಮನೆಬಿಟ್ಟು ಹೋದ ಗೃಹಿಣಿ ಮರುದಿನ ಶವವಾಗಿ ವಿಸಿ ನಾಲೆಯಲ್ಲಿ ಪತ್ತೆಯಾಗಿದ್ದಾರೆ.

    ನಾಗಮಂಗಲ ಪಟ್ಟಣದ ಟಿಬಿ ಬಡಾವಣೆ ಮುಳುಕಟ್ಟೆ ರಸ್ತೆ ನಿವಾಸಿ ಪದ್ಮಾವತಿ ಆ.4ರಂದು(ಮಂಗಳವಾರ) ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು. 5ರಂದು ಬಂದ ವರದಿಯಲ್ಲಿ ಅವರಿಗೆ ಕರೊನಾ ಸೋಂಕು ದೃಢಪಟ್ಟಿತ್ತು. ಈ ಸುದ್ದಿ ತಿಳಿದು ಆಘಾತಕ್ಕೊಳಗಾದ ಪದ್ಮಾವತಿ, ಆ ದಿನವೇ ಮನೆಬಿಟ್ಟು ಹೋಗಿದ್ದರು. ಮರುದಿನ ಸಂಜೆ ಅಂದರೆ ಗುರುವಾರ ಶವವಾಗಿ ಪತ್ತೆಯಾಗಿದ್ದಾರೆ.

    ಇದನ್ನೂ ಓದಿರಿ ದೇವಸ್ಥಾನದ ನಿಧಿ ದೋಚಲು ಬಂದವ ಸ್ಥಳದಲ್ಲೇ ದುರ್ಮರಣ, ಮೂವರ ಸ್ಥಿತಿ ಗಂಭೀರ

    ‘ತನಗೆ ಕರೊನಾ ಸೋಂಕು ಇರುವ ಸುದ್ದಿ ತಿಳಿಯುತ್ತಿದ್ದಂತೆ ದುಃಖಿತಳಾಗಿ ಮನೆಯಿಂದ ಹೊರ ಹೋಗಿದ್ದ 38 ವರ್ಷದ ಪದ್ಮಾವತಿ, ಪಾಂಡವಪುರ ತಾಲೂಕಿನ ದರಸಗುಪ್ಪೆ ಸಮೀಪದ ಬಸವನಗುಡಿ ಸಮೀಪದ ವಿಸಿ ನಾಲೆ ನೀರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ನಾಲೆಯಲ್ಲಿ ಮೃತಳ ಶವ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಮಿಮ್ಸ್ ಆಸ್ಪತ್ರೆಯ ಶವಗಾರಕ್ಕೆ ಮೃತದೇಹ ರವಾನಿಸಲಾಗಿದೆ.

    ಪದ್ಮಾವತಿ, ಗಾಯತ್ರಿ ಫೈನಾನ್ಸ್​ನಲ್ಲಿ ಪಿಗ್ಮಿ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದರು. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪದ್ಮಾವತಿ ವಾಸವಿದ್ದ ಮನೆಯನ್ನು ಸೀಲ್​ಡೌನ್ ಮಾಡಲಾಗಿದೆ.

    ಜುಟ್ಟನಹಳ್ಳಿ ಮಾರಮ್ಮನ ಹುಂಡಿ ಹಣ ಕದ್ದ ಪೂಜಾರಿಯನ್ನು ಅಟ್ಟಾಡಿಸಿದ ಬಸವ, ದೇವರ ಹಣ ವಾಪಸ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts