More

    ಜೈಲು ಸಿಬ್ಬಂದಿಗೆ ಕರೊನಾ ಪಾಸಿಟಿವ್​.. ಇದು ಪಾದರಾಯನಪುರ ವರಪ್ರಸಾದ ?

    | ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
    ರಾಮನಗರ ಕಾರಾಗೃಹದ ಸಿಬ್ಬಂದಿಯೊಬ್ಬರಿಗೆ ಕರೊನಾ ಪರೀಕ್ಷೆಯಲ್ಲಿ ಮೂರು ಬಾರಿ ನೆಗೆಟಿವ್​ ಬಂದಿದ್ದ ವರದಿ ನಾಲ್ಕನೇ ಬಾರಿ ಪಾಸಿಟಿವ್​ ಬಂದಿದೆ. ಇದು ಪಾದರಾಯನಪುರ ಗಲಭೆಕೋರರ ಪ್ರಸಾದ… ಅವರಿಂದಲೇ ನಮ್ಮ ತಾಲೂಕಿಗೂ ಕರೊನಾ ವಕ್ಕರಿಸಿದೆ… ಮತ್ತಿನ್ಯಾರಿಗೆಲ್ಲ ಬರಲಿದೆಯೋ ಎಂಬ ಆತಂಕ ಸ್ಥಳೀಯರಲ್ಲಿ ದಟ್ಟವಾಗಿದೆ.

    ನಮ್ಮ ತಾಲೂಕಿನಲ್ಲಿ ಕರೊನಾ ಸೋಂಕಿಲ್ಲ ಎಂದು ಬೀಗುತ್ತಿದ್ದ ಬೊಂಬೆನಾಡಿನಲ್ಲಿ ಗುರುವಾರ ಕೋವಿಡ್​19 ಖಾತೆ ತೆರೆದಿದೆ. ಕೋಡಂಬಳ್ಳಿ ಸಮೀಪದ ಶಾನುಭೋಗನಹಳ್ಳಿಯ 29 ವರ್ಷದ ಯುವಕನಿಗೆ ಸೋಂಕು ದೃಢಪಟ್ಟಿದೆ. ಜೈಲು ಸಿಬ್ಬಂದಿಯಾಗಿರುವ ಈ ಯುವಕ ಎರಡು ದಿನದ ಹಿಂದಷ್ಟೇ ಸ್ನೇಹಿತರೊಂದಿಗೆ ಬರ್ತ್ ಡೇ ಪಾರ್ಟಿ ಮಾಡಿದ್ದು, ಇದೀಗ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ.

    ಇದನ್ನೂ ಓದಿರಿ ಕರೊನಾಗೆ ಪತ್ನಿ ಬಲಿ, ಐಸೋಲೇಶನ್​ನಲ್ಲಿ ಪತಿ

    ಪಾದರಾಯನಪುರ ವರಪ್ರಸಾದ ?: ಸೋಂಕಿತ ಯುವಕ ರಾಮನಗರ ಕಾರಾಗೃಹದ ಪೇದೆ. ಪಾದರಾಯನಪುರ ಗಲಭೆಕೋರರನ್ನು ಕಾರಾಗೃಹದಲ್ಲಿ ಇಟ್ಟಿದ್ದ ವೇಳೆ ಕರ್ತವ್ಯ ನಿರ್ವಹಿಸಿದ್ದ ಇವರನ್ನು ಈ ಹಿಂದೆ ಕ್ವಾರಂಟೈನ್​ನಲ್ಲಿ ಇಡಲಾಗಿತ್ತು. ಮೇ 24ರಂದು ಕ್ವಾರಂಟೈನ್ ಅವಧಿ ಮುಕ್ತಾಯವಾಗಿದ್ದು, ಮೂರು ಬಾರಿ ಇವರ ರಕ್ತ ಮತ್ತು ಗಂಟಲು ದ್ರವ ಪರೀಕ್ಷೆ ನಡೆಸಿದಾಗಲೂ ವರದಿ ನೆಗೆಟಿವ್ ಬಂದಿತ್ತು.

    ಬೇರೆ ಕಡೆ ಕರ್ತವ್ಯಕ್ಕೆ ಹೋಗುವ ಸಲುವಾಗಿ ನಾಲ್ಕನೇ ಬಾರಿ ನಡೆಸಿದ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಪಾದರಾಯನಪುರ ಪ್ರಕರಣ ನಡೆದ ತಿಂಗಳ ನಂತರ ಸೋಂಕು ಕಂಡು ಬಂದಿರುವುದು ಆಘಾತ, ಕುತೂಹಲ ಮೂಡಿಸಿದೆ.

    ಇದನ್ನೂ ಓದಿರಿ ಇನ್ಮುಂದೆ ನರೇಗಾದಡಿ ಸಿಗಲಿದೆ 150 ದಿನ ಕೆಲಸ.. ಕೂಲಿದರ ಹೆಚ್ಚಳ ಸಾಧ್ಯತೆ

    ಬಿಇ ಪದವೀಧರ: ಸೋಂಕಿತ ಯುವಕನು ಎಸ್ಎಸ್ಎಲ್​ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಗ್ರಾಮಕ್ಕೆ ಕೀರ್ತಿ ತಂದಿದ್ದರು. ಇಂಜಿನಿಯರಿಂಗ್​ ಓದಿರುವ ಈ ಯುವಕ ಕಾರಾಗೃಹ ಪೇದೆ ಕೆಲಸ ಆಯ್ಕೆ ಮಾಡಿಕೊಂಡಿದ್ದರು. ತಂದೆ ಜತೆ ವಾಸವಿದ್ದ ಯುವಕ, ಬಿಡುವಿನ ವೇಳೆ ಸ್ನೇಹಿತರೊಂದಿಗೆ ಇರುತ್ತಿದ್ದ. ಕ್ವಾರಂಟೈನ್ ಅವಧಿ ಮುಗಿದ ಬಳಿಕ ಕರೊನಾ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಎಂದಿನಂತೆ ಗ್ರಾಮದ ಸ್ನೇಹಿತರ ಜತೆ ಕಾಲ ಕಳೆದಿದ್ದರು. ಇದೀಗ ವರದಿ ಪಾಸಿಟಿವ್ ಬಂದಿದ್ದು, ಸ್ನೇಹಿತರೂ ಆತಂಕಕ್ಕೆ ಒಳಗಾಗಿದ್ದಾರೆ‌.

    ಇದನ್ನೂ ಓದಿರಿ ಪಾದರಾಯನಪುರ ಕಾರ್ಪೊರೇಟರ್​ ಸಂಪರ್ಕದ ಪಾಲಿಕೆ ಅಧಿಕಾರಿಗಳಿಗೂ ಕರೊನಾ ಸೋಂಕು ದೃಢ

    26 ಮಂದಿ ಕ್ವಾರಂಟೈನ್: ಪೇದೆಗೆ ಕರೊನಾ ಸೋಂಕು ದೃಢ ಪಡುತ್ತಿದ್ದಂತೆ ಗ್ರಾಮಕ್ಕೆ ತೆರಳಿದ ತಹಸೀಲ್ದಾರ್ ಬಿ.ಕೆ. ಸುದರ್ಶನ್, ತಾಲೂಕು ಆರೋಗ್ಯಾಧಿಕಾರಿ ಡಾ. ಟಿ.ಎಚ್. ರಾಜು ಮತ್ತು ಕೋಡಂಬಳ್ಳಿ ಗ್ರಾಪಂ ಸಿಬ್ಬಂದಿ ಯುವಕನ ಜತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ತಂದೆ ಸೇರಿ 26 ಮಂದಿಯನ್ನು ಹೊನ್ನಾನಾಯ್ಕನಹಳ್ಳಿಯ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಿದರು.

    ಸೋಂಕಿತ ಯುವಕ ಮೊನ್ನೆಯಷ್ಟೇ ಸ್ನೇಹಿತರೊಂದಿಗೆ ಹುಟ್ಟುಹಬ್ಬ ಪಾರ್ಟಿ ಮಾಡಿಕೊಂಡಿದ್ದು, ಇದೀಗ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ. ಸದ್ಯ ಯುವಕನ ಮನೆ ಸುತ್ತ ಸೀಲ್​ಡೌನ್ ಮಾಡಲಾಗಿದ್ದು, ಪಕ್ಕದಲ್ಲಿರುವ ಕೋಡಂಬಳ್ಳಿಯ ಅಂಗಡಿಗಳನ್ನು ಮುಚ್ಚಿಸಲಾಗಿದೆ.

    ಇದನ್ನೂ ಓದಿರಿ VIDEO | ಸೀಲ್​ಡೌನ್ ವೇಳೆ ದಾಂಧಲೆ ನಡೆಸಿದ ಪಾದರಾಯನಪುರ ಪುಂಡರಿಗೆ ರೆಡ್ ಕಾರ್ಪೆಟ್ ಸ್ವಾಗತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts