More

    ಕರೊನಾ ಜಾಗೃತಿ ಮೂಡಿಸಲು ಬಂದವರ ಮೇಲೆಯೇ ಹಲ್ಲೆ! ಬಿಹಾರದ ವೈದ್ಯರು, ಪೊಲೀಸರಿಗೆ ಗಾಯ

    ಚಂಪಾರನ್‌ (ಬಿಹಾರ್‌): ಕರೊನಾ ಸೋಂಕಿತರ ಸೇವೆಯಲ್ಲಿ ತೊಡಗಿರುವ ಆರೋಗ್ಯ ಸಿಬ್ಬಂದಿಯ ಮೇಲೆ ಹಲ್ಲೆ ನಡೆಯುತ್ತಿರುವ ಅಮಾನವೀಯ ಘಟನೆಗಳು ಅಲ್ಲಲ್ಲಿ ವರದಿಯಾಗುತ್ತಲೇ ಇವೆ. ಇನ್ನೊಂದೆಡೆ, ಮಹಾಮಾರಿ ಕರೊನಾ ವೈರಸ್‌ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಲು ವೈದ್ಯಕೀಯ ಹಾಗೂ ಪೊಲೀಸ್‌ ಸಿಬ್ಬಂದಿ ಹಗಲು ರಾತ್ರಿ ಶ್ರಮಿಸುತ್ತಿದ್ದರೆ, ಅವರ ಮೇಲೆಯೇ ತೀವ್ರವಾಗಿ ಹಲ್ಲೆ ನಡೆಸಿರುವ ಘಟನೆ ಬಿಹಾರದ ಪೂರ್ವ ಚಂಪಾರನ್‌ನಲ್ಲಿ ನಡೆದಿದೆ.

    ಈ ಸಿಬ್ಬಂದಿ ಗ್ರಾಮಕ್ಕೆ ತೆರಳುತ್ತಿದ್ದಂತೆಯೇ ಗ್ರಾಮಸ್ಥರು ತಡೆದು ಹಲ್ಲೆ ನಡೆಸಿದ್ದಾರೆ. ಈ ಹಲ್ಲೆಯಲ್ಲಿ ಹಲವಾರು ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

    ಬಿಹಾರದಲ್ಲಿ ಜನರು ಲಾಕ್‌ಡೌನ್‌ ಆದೇಶವನ್ನು ಉಲ್ಲಂಘಿಸಿ ಬೇಕಾಬಿಟ್ಟೆಯಾಗಿ ಓಡಾಡುತ್ತಿರುವ ಕಾರಣದಿಂದ ಈಗಾಗಲೇ ರಾಜ್ಯದಲ್ಲಿ 70 ಸಾವು ಸಂಭವಿಸಿದೆ. ಸೋಂಕಿತರ ಸಂಖ್ಯೆಯೂ ದಿನದಿಂದ ದಿನಕ್ಕೆ ಶರವೇಗದಲ್ಲಿ ಬೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಬುದ್ಧಿಮಾತನ್ನು ಹೇಳುವ ಮೂಲಕ, ಜೀವವನ್ನು ಕಾಪಾಡಿಕೊಳ್ಳುವ ಬಗ್ಗೆ ತಿಳಿಸಲು ಪೊಲೀಸ್‌ ಮತ್ತು ವೈದ್ಯಕೀಯ ಸಿಬ್ಬಂದಿ ತೆರಳಿದ್ದರು.

    ‘ಜನರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುತ್ತಿಲ್ಲ. ಗ್ರಾಮದಲ್ಲಿ ಲಾಕ್‌ಡೌನ್ ಮಾರ್ಗಸೂಚಿಗಳನ್ನೂ ಅನುಸರಿಸುತ್ತಿಲ್ಲ ಎಂಬ ದೂರುಗಳು ನಮಗೆ ಬಂದಿದ್ದವು. ಈ ಕಾರಣದಿಂದಾಗಿ, ವೈದ್ಯಕೀಯ ತಂಡದೊಂದಿಗೆ ಪೊಲೀಸ್ ತಂಡವು ಅಲ್ಲಿಗೆ ಹೋಗಿ ಸೋಂಕು ಮತ್ತು ಅದು ಉಂಟುಮಾಡುವ ಅಪಾಯಗಳ ಬಗ್ಗೆ ಅರಿವು ಮೂಡಿಸಲು ತೆರಳಿದ್ದೆವು. ಆದರೆ ಏಕಾಏಕಿ ಗ್ರಾಮಸ್ಥರು ನಮ್ಮ ಮೇಲೆ ಹಲ್ಲೆ ನಡೆಸಿದರು’ ಎಂದು ಪೊಲೀಸ್ ಅಧಿಕಾರಿ ಧೀರೇಂದ್ರ ಮಿಶ್ರಾ ನೋವಿನಿಂದ ನುಡಿದರು.

    ಹಲ್ಲೆಯ ಹೊರತಾಗಿಯೂ ನಮ್ಮ ತಂಡ ಸಂಯಮ ತೋರಿಸಿ ಅಲ್ಲಿಂದ ಮರಳಿತು. ಪರಿಸ್ಥಿತಿ ವಿಕೋಪಕ್ಕೆ ಹೋಗಲು ಬಿಡಲಿಲ್ಲ. ಗಾಯವಾದರೂ ಪ್ರತಿದಾಳಿ ಮಾಡದೇ ಬಂದೆವು ಎಂದು ಮಿಶ್ರಾ ಹೇಳಿದರು.
    ಏಜೆನ್ಸೀಸ್‌

    ಪಾಕ್‌ ಪ್ರಜೆಗಳನ್ನು ಸುರಕ್ಷಿತವಾಗಿ ಮರಳಿಸಲು ಭಾರತದ ಸಿದ್ಧತೆ: ಪಾಕಿಸ್ತಾನದ ದುಷ್ಟಬುದ್ಧಿಯ ನಡುವೆಯೂ ಭಾರತದ ಕಳಕಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts