More

    ಸೋಂಕಿತರು ನೇರ ಆರೈಕೆ ಕೇಂದ್ರಕ್ಕೆ ಹೋಗಬಹುದು; ನೋಂದಣಿ ಅಗತ್ಯವಿಲ್ಲ

    ಬೆಂಗಳೂರು: ನಗರದಲ್ಲಿ ಅಲ್ಪ ಮತ್ತು ಮಧ್ಯಮ ಪ್ರಮಾಣದ ಸೋಂಕಿತರ ಚಿಕಿತ್ಸೆಗೆ ಆರಂಭಿಸಲಾದ 11 ಕೋವಿಡ್ ಕೇಂದ್ರಗಳಿಗೆ ಹಾಸಿಗೆ ಕಾಯ್ದಿರಿಸುವ ಪ್ರಕ್ರಿಯೆ ಇಲ್ಲದೆ, ನೇರವಾಗಿ ಸೋಂಕಿತರು ಹೋಗಿ ದಾಖಲಾಗಲು ಪಾಲಿಕೆ ಅವಕಾಶ ನೀಡಿದೆ.

    ಕೋವಿಡ್ ಆರೈಕೆ ಕೇಂದ್ರಗಳನ್ನು ಸೆಂಟ್ರಲ್ ಹಾಸ್ಪಿಟಲ್ ಬೆಡ್ ಮ್ಯಾನೇಜ್ಮೆಂಟದದ ಸಿಸ್ಟಮ್ ಪೋರ್ಟಲ್‌ನಲ್ಲಿ ಅಳವಡಿಸಿದ್ದು, ಹಾಸಿಗೆಯನ್ನು ಆನ್‌ಲೈನ್ ಮೂಲಕ ಕಾಯ್ದಿರಿಸಿ ನಂತರ ಕೇಂದ್ರಕ್ಕೆ ಬಂದು ದಾಖಲಾಗಬಹುದು. ಆದರೆ, ಈಗ ಸ್ವಲ್ಪ ಸಡಿಲಕೆ ಮಾಡಿದ್ದು, ಯಾವುದೇ ಹಾಸಿಗೆ ಕಾಯ್ದಿರಿಸುವ ಪ್ರಕ್ರಿಯೆ ಇಲ್ಲದೆ ನೇರವಾಗಿ ಹೋಗಬಹುದು.

    ಈ 11 ಆರೈಕೆ ಕೇಂದ್ರಗಳಲ್ಲಿ ಒಟ್ಟು 1,635 ಹಾಸಿಗೆಗಳ ವ್ಯವಸ್ಥೆಯಿದ್ದು, ಸೋಂಕಿತರಿಗೆ ಏಕಕಾಲದಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ. ನೇರವಾಗಿ ಬರುವವರಿಗೆ ಆರೈಕೆ ಕೇಂದ್ರದಲ್ಲಿನ ಟ್ರಯಾಜ್ ಸೆಂಟರ್ ಮೂಲಕ ವೈದ್ಯರು ತಪಾಸಣೆ ಮಾಡಲಿದ್ದಾರೆ.

    ಇದನ್ನೂ ಓದಿ; ರಾಜ್ಯದಲ್ಲಿ ಇವತ್ತೊಂದೇ ದಿನ 517 ಮಂದಿ ಕರೊನಾಗೆ ಬಲಿ; ಕರ್ನಾಟಕದಲ್ಲಿ ಇದುವರೆಗೆ 20 ಸಾವಿರಕ್ಕೂ ಅಧಿಕ ‘ಕೋವಿಡ್ ಡೆತ್’

    ಕೋವಿಡ್ ಸೋಂಕಿತರು ಕೇಂದ್ರ ಕಛೇರಿಯ ಕೋವಿಡ್ ಆರೈಕೆ ಕೇಂದ್ರ ಸಹಾಯವಾಣಿ ಸಂಖ್ಯೆ 080-22493200 ಅಥವಾ 080-22493201ಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ. ಜತೆಗೆ, 11 ಆರೈಕೆ ಕೇಂದ್ರಗಳಲ್ಲಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಪ್ರತಿ ಕೇಂದ್ರಕ್ಕೂ ಸಂಪರ್ಕ ಸಂಖ್ಯೆಯ ವ್ಯವಸ್ಥೆ ಮಾಡಲಾಗಿದ್ದು, ದಿನದ 24 ಗಂಟೆಯೂ ಕಾರ್ಯನಿವರ್ಹಿಸಲಿವೆ.

    ಬಾಕ್ಸ್
    ಕೋವಿಡ್ ಆರೈಕೆ ಕೇಂದ್ರಗಳ ಮಾಹಿತಿ:
    ಆರೈಕೆ ಕೇಂದ್ರ ವಲಯ ಹಾಸಿಗೆ ಆಕ್ಸಿಜನ್ ಒಟ್ಟು ಸಂಪರ್ಕ
    ಜ್ಞಾನಭಾರತಿ ಆರ್.ಆರ್. ನಗರ 269 101 370 9480685070
    ಜಿಕೆವಿಕೆ ಯಲಹಂಕ 355 25 380 9482949019
    ಸರ್ಕಾರಿ ಹಾಸ್ಟೆಲ್ ಯಲಹಂಕ 45 5 50 9482548218
    ಕಾರ್ಮಿಕ ಭವನ ದಾಸರಹಳ್ಳಿ 97 10 107 7204869787
    ಸರ್ಕಾರಿ ಕಾಲೇಜು ಪೂರ್ವ 87 88 175 08029618005
    ರೈತರ ಭವನ ಪೂರ್ವ 34 26 60 9481277493
    ನವ್ಯಶ್ರೀ ಹೋಟೆಲ್ ಮಹದೇವಪುರ 99 13 112 9483900459
    ಹೆಚ್‌ಎಎಲ್ ಮಹದೇವಪುರ 118 60 178 9380519485
    ಆಯುರ್ವೇದ ಕಾಲೇಜು- ಪಶ್ಚಿಮ 20 55 75 8861102643
    ಆಡುಗೋಡಿ ದಕ್ಷಿಣ 35 43 78 7411892393
    ವಿಂಟೇಜ್ ಹೋಟೆಲ್- ಬೊಮ್ಮನಹಳ್ಳಿ 6 44 50 7892408186

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts