More

    ಆತಂಕ ಬಿಟ್ಟು ಓದಿನತ್ತ ಗಮನ ಕೊಡಿ

    ಚಿಕ್ಕಮಗಳೂರು: ಯಾವುದೇ ಹೊಸ ವೈರಸ್ ಬಂದಾಗ ಕೆಲ ದಿನಗಳ ಕಾಲ ಮನುಷ್ಯನಲ್ಲಿ ಭಯ ಇರುವುದು ಸಹಜ. ಆದರೆ ಲಸಿಕೆ ಪ್ರಯೋಗಾರ್ಥ ಹಂತದಲ್ಲಿರುವುದರಿಂದ ಯಾರೂ ಆತಂಕಪಡಬೇಕಿಲ್ಲ ಎಂದು ಜಿಪಂ ಉಪಾಧ್ಯಕ್ಷ ಬಿ.ಜೆ.ಸೋಮಶೇಖರ್ ಹೇಳಿದರು.

    ಗ್ರಾಪಂ ಸದಸ್ಯರೊಂದಿಗೆ ಬುಧವಾರ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಕರೊನಾ ಮುಂಜಾಗ್ರತಾ ಕ್ರಮ ಪರಿಶೀಲಿಸಿ ಮಾತನಾಡಿದರು.

    ಇತ್ತೀಚೆಗೆ ಕರೊನಾ ಸೋಂಕು ಹರಡುವಿಕೆ ಪ್ರಮಾಣ ಇಳಿಮುಖವಾಗುತ್ತಿದೆ. ಜತೆಗೆ ಬದುಕು ಕಟ್ಟಿಕೊಳ್ಳುವುದೂ ಅನಿವಾರ್ಯ. ರೈತರು, ಕೈಗಾರಿಕೋದ್ಯಮಿಗಳು, ಕೂಲಿ ಕಾರ್ವಿುಕರು, ಸಾಮಾನ್ಯ ಜನರು ದಿನನಿತ್ಯದ ಕೆಲಸದಲ್ಲಿ ತೊಡಗಿ ಆತಂಕರಹಿತ ಜೀವನ ಸಾಗಿಸಬೇಕು. ಸ್ವಚ್ಛತೆಗೆ ಆದ್ಯತೆ, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಇತ್ಯಾದಿ ಕ್ರಮಗಳ ಬಗ್ಗೆ ನಿರ್ಲಕ್ಷ್ಯ ತೋರಬಾರದು. ವಿದ್ಯಾರ್ಥಿಗಳು ಕೂಡ ಓದಿಗೆ ಹೆಚ್ಚು ಪ್ರಾಮುಖ್ಯತೆ ಕೊಟ್ಟು ಸರ್ಕಾರದ ಮಾರ್ಗಸೂಚಿ ಪಾಲಿಸಬೇಕು ಎಂದರು.

    ಶಾಲೆಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಕುರುವಂಗಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣವಿದೆ. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಶಿಕ್ಷಕರಿಂದ ಆಗಬೇಕು. ಸಮಸ್ಯೆ ಇದ್ದವರು ನೇರವಾಗಿ ಪ್ರಶ್ನಿಸಿ ಉತ್ತರ ಪಡೆದು ಭವಿಷ್ಯ ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು.

    ಕುರುವಂಗಿ ಸಮುದಾಯ ಭವನಕ್ಕೆ 1.25 ಲಕ್ಷ ರೂ. ಅನುದಾನ ನೀಡಲಾಗಿದೆ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ 4 ಬೋರ್​ವೆಲ್ ಕೊರೆಸಲಾಗಿದೆ. ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ನಬಾರ್ಡ್​ನಿಂದ 4.5 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಕೆರೆ ಏರಿ ಅಗಲೀಕರಣ, ಚರಂಡಿ, ನರಿಗುಡ್ಡೇನಹಳ್ಳಿಯಿಂದ ನೆಟ್ಟೆಕೆರೆಹಳ್ಳಿ ಮೂಲಕ ಶಂಕರದೇವರಮಠದವರೆಗೆ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದರು.

    ಬಸವನಹಳ್ಳಿ ಸರ್ಕಾರಿ ಬಾಲಿಕಾ ಪ್ರೌಢಶಾಲೆ, ಕುರುವಂಗಿ ಪ್ರೌಢಶಾಲೆ, ಬೀಕನಹಳ್ಳಿ ಮುರಾರ್ಜಿ ವಸತಿ ಶಾಲೆಗಳಿಗೆ ಭೇಟಿ ನೀಡಿದರು. ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಉಪ ಪ್ರಾಚಾರ್ಯು ಚಂದ್ರಮ್ಮ, ಗ್ರಾಪಂ ಸದಸ್ಯರಾದ ಮೋಹನ್, ಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts