More

    ರಮಜಾನ್‌ಗೆ ಲಾಕ್‌ಡೌನ್ ಕರಿನೆರಳು, ಮುಸ್ಲಿಮರ ಪವಿತ್ರ ತಿಂಗಳು ಆರಂಭ

    -ಅನ್ಸಾರ್ ಇನೋಳಿ

    ಮುಸ್ಲಿಮರ ಪವಿತ್ರ ತಿಂಗಳಾಗಿರುವ ರಮಜಾನ್ ಮುಂದಿನ ವಾರದಿಂದ ಆರಂಭಗೊಳ್ಳಲಿದೆ, ಆದರೆ ಈ ವರ್ಷ ಆಚರಣೆ ಮೇಲೆ ಕರೊನಾ ಕರಿನೆರಳು ಬಿದ್ದಿದೆ.

    ಈ ತಿಂಗಳಿಡೀ ಪ್ರಾತಃಕಾಲದಿಂದ ಮುಸ್ಸಂಜೆವರೆಗೆ ಅಂದರೆ 14 ಗಂಟೆ ವ್ರತದಲ್ಲಿರುತ್ತಾರೆ. ನೀರು ಸಹಿತ ಯಾವುದೇ ಆಹಾರವನ್ನೂ ಸೇವಿಸದೆ ದೇವನ ಆರಾಧನೆಯಲ್ಲಿ ನಿರತರಾಗಿರುತ್ತಾರೆ. ಈ ಕಾರಣಕ್ಕೆ ಇದನ್ನು ಪಾಪ ವಿಮೋಚನೆಯ ತಿಂಗಳು ಎಂದೂ ಕರೆಯಲಾಗುತ್ತದೆ. ಕಳೆದ ವರ್ಷದಂತೆ ಈ ವರ್ಷವೂ ಬೇಸಿಗೆಯಲ್ಲೇ ರಮಜಾನ್ ಬಂದಿದ್ದು, ಇದು ಇನ್ನಷ್ಟು ವರ್ಷ ಮುಂದುವರಿಯಲಿದೆ. ಬಿಸಿಲಿನ ತಾಪಮಾನ ಜೋರಾಗಿರುವ ಕಾರಣ ಹಸಿವಿಗಿಂತಲೂ ದಾಹ ಜೋರಾಗಿರುತ್ತದೆ.

    ಕೆಲಸವಿಲ್ಲ, ಬೆಲೆಯೂ ಏರಿಕೆ
    ರಮಜಾನ್ ದಾನದ ತಿಂಗಳು. ಶ್ರೀಮಂತರು, ಮಧ್ಯಮ ವರ್ಗ ಸೇರಿ ಎಲ್ಲರೂ ದಾನದಲ್ಲಿ ನಿರತರಾಗಿರುತ್ತಾರೆ. ಈ ತಿಂಗಳಲ್ಲಿ ಯಾರೊಬ್ಬರೂ ಹಸಿವೆಯಲ್ಲಿರಬಾರದೆನ್ನುವ ಕಾರಣಕ್ಕೆ ಬಡ ಕುಟುಂಬಗಳನ್ನು ಹುಡುಕಿ ಆಹಾರ ನೀಡುತ್ತಾರೆ. ಈ ವರ್ಷ ಲಾಕ್‌ಡೌನ್‌ನಿಂದಾಗಿ ಮಧ್ಯಮ ವರ್ಗದವರು ಕೆಲಸವಿಲ್ಲದೆ ಮನೆಯಲ್ಲೇ ಇದ್ದಾರೆ.
    ಧಾರ್ಮಿಕ ಕರ್ಮಗಳೆಲ್ಲವೂ ನಷ್ಟ !

    ರಮಜಾನ್ ತಿಂಗಳಲ್ಲಿ ಉಪವಾಸಿಗರು ಹೆಚ್ಚಿನ ಸಮಯ ಮಸೀದಿಯಲ್ಲೇ ಕಳೆಯುವುದು ಸಾಮಾನ್ಯ. ಅಲ್ಲದೆ ಈ ತಿಂಗಳಲ್ಲಿ ರಾತ್ರಿ ವಿಶೇಷ ನಮಾಝ್, ಆರಾಧನೆಗಳು ಇರುತ್ತವೆ. ಒಂಟಿ ನಮಾಝ್‌ಗಿಂತ ಸಾಮಾಜಿಕ ನಮಾಝ್‌ಗೆ ಹೆಚ್ಚಿನ ಫಲ ಇದೆ ಎನ್ನುವುದು ನಂಬಿಕೆ. ಆದರೆ ಈ ಬಾರಿ ಇದೆಲ್ಲವೂ ಕಷ್ಟ. ಜತೆಗೆ ಸಾಮೂಹಿಕ ಇಫ್ತಾರ್ ಕೂಟಗಳಿಗೂ ಬ್ರೇಕ್ ಬೀಳಲಿದೆ. ಇದರಿಂದಾಗಿ ರಮಜಾನ್, ಈದುಲ್ ಫಿತ್ರ್ ಸಂಭ್ರಮ ಕಳೆಗುಂದಲಿದೆ.

    ಸರ್ಕಾರದ ಅದೇಶ ಪಾಲಿಸಿ: ಕರೊನಾ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಲಾಕ್‌ಡೌನ್ ಮೂಲಕ ಹಲವು ಕ್ರಮಗಳನ್ನು ಕೈಗೊಂಡಿದೆ. ರಮಜಾನ್‌ನಲ್ಲೂ ಯಾವ ನಿಯಮ ಪಾಲಿಸಬೇಕು ಎನ್ನುವುದನ್ನು ತಿಳಿಸಿದೆ. ಅದರಂತೆ ಪ್ರತಿಯೊಬ್ಬರೂ ಸರ್ಕಾರದ ನಿಯಮಕ್ಕೆ ಬದ್ಧರಾಗಿ ರಮಜಾನ್ ತಿಂಗಳಲ್ಲಿ ಮನೆಯಲ್ಲೇ ಇದ್ದು ನಮಾಝ್, ಧಾರ್ಮಿಕ ವಿಧಿಗಳನ್ನು ಪಾಲಿಸಬೇಕು ಎಂದು ದ.ಕ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಕರೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts