More

    ಚೀನಾದ ಶಾಂಘೈನಲ್ಲಿ ಕರೊನಾ ಸೋಂಕು ಉಲ್ಬಣ; ದೆಹಲಿಯಲ್ಲಿ ಕೇಸ್ ಹೆಚ್ಚಳ

    ಬೀಜಿಂಗ್: ಕರೊನಾ ಸಾಂಕ್ರಾಮಿಕತೆಯ ಹೆಚ್ಚಳದಿಂದ ತತ್ತರಿಸುತ್ತಿರುವ ಚೀನಾದ ಆರ್ಥಿಕ ಕೇಂದ್ರ ಶಾಂಘೈಯಲ್ಲಿ ಗುರುವಾರ 27,000ಕ್ಕೂ ಅಧಿಕ ಹೊಸ ಕೇಸ್ ವರದಿಯಾಗಿದ್ದು ಇದು ದಾಖಲೆಯ ದೈನಿಕ ಪ್ರಕರಣವಾಗಿದೆ.

    ಸೋಂಕು ನಿಯಂತ್ರಣಕ್ಕೆ ತುರ್ತು ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ ಎಂದು ಅಧ್ಯಕ್ಷ ಷಿ ಜಿನ್​ಪಿಂಗ್ ಪ್ರತಿಪಾದಿಸಿದ ಮರುದಿನವೇ ಪಾಸಿಟಿವ್ ಸಂಖ್ಯೆಯಲ್ಲಿ ಭಾರಿ ಏರಿಕೆ ಆಗಿರುವುದು ಕಳವಳಕ್ಕೆ ಕಾರಣವಾಗಿದೆ. ನಿರ್ಭಂದ ಕ್ರಮಗಳನ್ನು ಇನ್ನಷ್ಟು ನಗರಗಳಿಗೆ ವಿಸ್ತರಿಸುವ ಸಾಧ್ಯತೆಯಿದೆ. ಶಾಂಘೈಯಲ್ಲಿ ಕಟ್ಟುನಿಟ್ಟಿನ ಲಾಕ್​ಡೌನ್ ವಿಧಿಸಲಾಗಿದ್ದು ಈ ವಾರವಷ್ಟೇ ಕೆಲವು ಪ್ರದೇಶಗಳಲ್ಲಿ ನಿರ್ಬಂಧಗಳನ್ನು ಸಡಿಲಿಸಲಾಗಿದೆ. ಒಮಿಕ್ರಾನ್ ಪ್ರಭೇದದಿಂದಾಗಿ ಸೋಂಕು ಅಬ್ಬರಿಸುತ್ತಿರುವುದರಿಂದ ಸಾರಿಗೆ ಮತ್ತು ಸರಬರಾಜು ಸರಪಣಿ ಅಸ್ತವ್ಯಸ್ತಗೊಂಡಿದ್ದು ಆರ್ಥಿಕ ಪರಿಸ್ಥಿತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹಣಕಾಸಿನ ಸಮಸ್ಯೆಯಿಂದ ಚೇತರಿಸಿಕೊಳ್ಳಲು ಚೀನದ ಕೇಂದ್ರೀಯ ಬ್ಯಾಂಕ್ ಪ್ಯಾಕೇಜ್ ಪ್ರಕಟಿಸಬಹುದೆಂಬ ನಿರೀಕ್ಷೆ ವ್ಯಾಪಕವಾಗಿದೆ.

    ಭಾರತದಲ್ಲಿ ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆ ಸ್ಥಾವರಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಮಾಡಿರುವ ವ್ಯತಿರಿಕ್ತ ಟಿಪ್ಪಣಿಯ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಈ ಲಸಿಕೆಯ ಎರಡು ಹಾಗೂ ಮೂರನೇ ಹಂತದ ಪರೀಕ್ಷೆಗಳನ್ನು ಸ್ಥಗಿತಗೊಳಿಸಲಾಗಿದೆ. ಅಮೆರಿಕದ ಆಹಾರ ಹಾಗೂ ಔಷಧಿ ಆಡಳಿತ ಪರೀಕ್ಷೆ ಸ್ಥಗಿತಕ್ಕೆ ಆದೇಶಿಸಿದೆ.

    ಭಾರತದಲ್ಲಿ ಹೆಚ್ಚಿದ ಸಕ್ರಿಯ ಪ್ರಕರಣ: ಭಾರತದಲ್ಲಿ ಗುರುವಾರ ಬೆಳಗ್ಗೆ ವರೆಗಿನ 24 ಗಂಟೆ ಅವಧಿಯಲ್ಲಿ ಕರೊನಾ ಸೋಂಕಿನ 1,007 ಹೊಸ ಪ್ರಕರಣಗಳು ದೃಢಪಟ್ಟಿವೆ. ಒಬ್ಬ ರೋಗಿ ಮೃತಪಟ್ಟಿದ್ದಾರೆ. ದೇಶದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 11,508ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

    ಹಲವೆಡೆ ಕೋವಿಡ್ ಕೇಸ್ ಅಧಿಕ: ದೆಹಲಿಯಲ್ಲಿ 325 ಹೊಸ ಪ್ರಕರಣ ಕಂಡುಬಂದಿದ್ದು, 40 ದಿನಗಳಲ್ಲಿ ಗರಿಷ್ಠದ್ದಾಗಿದೆ. ಮುಂಬೈ, ನೋಯ್ಡಾ ಮತ್ತು ಗುರುಗ್ರಾಮ ಸಹಿತ ದೇಶದ ಹಲವು ಪ್ರಮುಖ ನಗರಗಳಲ್ಲಿ ಸೋಂಕಿನ ಪ್ರಕರಣಗಳಲ್ಲಿ ಏರಿಕೆಯಾಗಿದೆ. 4ನೇ ಅಲೆಯ ಆತಂಕ ಎದುರಾಗಿದೆ. ದೆಹಲಿಯ ಖಾಸಗಿ ಶಾಲೆಯೊಂದರ ಶಿಕ್ಷಕ ಹಾಗೂ ವಿದ್ಯಾರ್ಥಿ ಪಾಸಿಟಿವ್ ಆದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ಮಕ್ಕಳನ್ನು ಮನೆಗೆ ಕಳಿಸಲಾಗಿದೆ. ಉತ್ತರ ಪ್ರದೇಶದ ಗೌತಮಬುದ್ಧ ನಗರದಲ್ಲಿ 15 ಮಕ್ಕಳ ಸಹಿತ 44 ಜನರಲ್ಲಿ ಸೋಂಕು ದೃಢಪಟ್ಟಿದೆ.  

    ಮಹಿಳಾ ಸಹೋದ್ಯೋಗಿಗಳ ಜತೆ ಅಸಭ್ಯ ವರ್ತನೆ; ಕಾಲೇಜು ಆವರಣದಲ್ಲೇ ಉಪನ್ಯಾಸಕನಿಗೆ ಧರ್ಮದೇಟು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts