ನಾವು ರಾಜೀನಾಮೆ ಕೇಳಿಲ್ಲ, ಆದ್ರೆ ಈಶ್ವರಪ್ಪ ಬಂಧನ ಆಗ್ಬೇಕು; ಸಂತೋಷ್ ಸಹೋದರ

KSE 6 Jan 20
Published on

ಬೆಳಗಾವಿ: ನಾವು ರಾಜೀನಾಮೆ ಕೇಳಿಲ್ಲ, ಅದು ಸರ್ಕಾರಕ್ಕೆ ಬಿಟ್ಟಿದ್ದು. ಪ್ರಕರಣದ ಕುರಿತು ಎಫ್ಐಆರ್ ದಾಖಲಾಗಿದ್ದು, ಈಶ್ವರಪ್ಪ ಬಂಧನ ಆಗಬೇಕು ಎಂದು ಸಂತೋಷ್ ಸಹೋದರ ಆಗ್ರಹಿಸಿದ್ದಾರೆ.

ಕೆ.ಎಸ್.ಈಶ್ವರಪ್ಪ ಬಂಧನ ಆಗಬೇಕು ಎಂದು ಸಂತೋಷ್ ಸಹೋದರ ಪ್ರಶಾಂತ್ ಪಾಟೀಲ್ ಆಗ್ರಹ ಮಾಡಿದ್ದಾರೆ. ಬೆಳಗಾವಿ ತಾಲೂಕಿನ ಬಡಸ ಕೆ.ಹೆಚ್. ಗ್ರಾಮದಲ್ಲಿ ಮಾತನಾಡಿದ ಅವರು, ನನ್ನ ತಮ್ಮ ಮಾಡಿದ ಕಾಮಗಾರಿಯ ಬಿಲ್ 4 ಕೋಟಿ 12 ಲಕ್ಷ ರೂಪಾಯಿ ಪಾವತಿ ಮಾಡಬೇಕು.

ನನ್ನ ತಮ್ಮನ ಪತ್ನಿಗೆ ಸರ್ಕಾರಿ ನೌಕರಿ ಕೊಡಿಸಬೇಕು, ಸೂಕ್ತ ಪರಿಹಾರ ಕೊಡಬೇಕು ಎಂದರು. ಎಫ್ಐಆರ್ ದಾಖಲಾದ ಪ್ರಕಾರ ಎ1, ಎ2, ಎ3 ಆರೋಪಿಗಳ ಬಂಧನ ಆಗಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net