More

    ಕರೊನಾ ಸೋಂಕಿತರ ಪತ್ತೆಗೆ ನಿಯೋಜಿತಗೊಂಡ ಶಿಕ್ಷಕರಿಗಿಲ್ಲ ಸುರಕ್ಷತಾ ಕಿಟ್, ಆನ್‌ಲೈನ್ ಮಾಹಿತಿಗೆ ನೆಟ್‌ವರ್ಕ್ ಸಮಸ್ಯೆ

    ಕಂಪ್ಲಿ: ಕರೊನಾ ಸೋಂಕಿತ ಸಂಪರ್ಕಿತರ ಪತ್ತೆಗೆ ನೋಡಲ್ ಅಧಿಕಾರಿ ಸಿಆರ್‌ಪಿ ನೇತೃತ್ವದಲ್ಲಿ ಶಿಕ್ಷಕರ ಒಳಗೊಂಡ ಕಾಂಟ್ಯಾಕ್ಟ್ ಟ್ರೇಸಿಂಗ್ ಸಮಿತಿ ರಚಿಸಲಾಗಿದೆ. ಆದರೆ, ಸುರಕ್ಷತಾ ಕಿಟ್ ವಿತರಿಸದಿರುವುದು ಹಾಗೂ ಆನ್‌ಲೈನ್‌ನಲ್ಲಿ ಮಾಹಿತಿ ಅಪ್‌ಲೋಡ್‌ಗೆ ನೆಟ್‌ವರ್ಕ್ ಸಮಸ್ಯೆ ಎದುರಾಗಿದೆ.

    ಬ್ಲಾಕ್ ಹಂತದ ಸಮಿತಿ ಕರೊನಾ ಸೋಂಕಿತ ಸಂಪರ್ಕಿತರ ಪಟ್ಟಿ ನೀಡಲಿದೆ. ಅದರಂತೆ ಪ್ರಥಮ, ದ್ವಿತೀಯ ಸಂಪರ್ಕಿತರ ನಿವಾಸಗಳಿಗೆ ತೆರಳಿ ಗುರುತು ಹಚ್ಚಿ ದೃಢಪಡಿಸಬೇಕು. ನಾಲ್ಕು ಗಂಟೆಯಲ್ಲಿ ಮಾಹಿತಿ ಸಂಗ್ರಹಿಸಿ, ಸ್ಥಳದಲ್ಲಿಯೇ ಆನ್‌ಲೈನ್ ಮೂಲಕ ಮಾಹಿತಿ ಭರ್ತಿ ಮಾಡಬೇಕು. ಇದಕ್ಕೆ ನೆಟ್ ಸೌಲಭ್ಯ ಬೇಕು. ಆದರೆ, ನೆಟ್‌ವರ್ಕ್ ಸಮಸ್ಯೆ ಕಾಡುತ್ತಿದೆ. ಅಲ್ಲದೆ ಶಿಕ್ಷಕರು ದಿನದ 24 ತಾಸು ಸದಾ ಎಚ್ಚರಿಕೆಯಿಂದ ಇರಬೇಕು.

    ಆನ್‌ಲೈನ್ ತರಬೇತಿ, ಸೂಚನೆಗಳನ್ನು ಕಾಲಕಾಲಕ್ಕೆ ಪಡೆದು ಸ್ಪಂದಿಸಬೇಕು. ಇದಕ್ಕೆಲ್ಲ ಆನ್‌ಲೈನ್ ಸಮಸ್ಯೆ ಕಾಡುತ್ತಿದೆ. ಮೇಲಾಗಿ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ನಿಭಾಯಿಸಬೇಕಾಗಿದ್ದ ಸಂಪರ್ಕಿತರ ಪತ್ತೆ ಕಾರ್ಯ ಶಿಕ್ಷಕರಿಗೆ ಒಪ್ಪಿಸಿದ್ದು ಎಷ್ಟು ಸರಿ?. ಅಲ್ಲದೆ ಸುರಕ್ಷತಾ ಕಿಟ್ ನೀಡಿಲ್ಲ. ನಮಗೆ ಕರೊನಾ ಸೋಂಕು ತಗುಲಿದಲ್ಲಿ ಮಕ್ಕಳ ಗತಿಯೇನು? ಎನ್ನುವ ಪ್ರಶ್ನೆ ಶಿಕ್ಷಕರನ್ನು ಕಾಡುತ್ತಿದೆ. ಸರ್ಕಾರ ಅಗತ್ಯ ಸುರಕ್ಷತಾ ಕಿಟ್, ನೆಟ್ ಪ್ರಾಬ್ಲಂ ನಿವಾರಿಸಬೇಕು. ಶಿಕ್ಷಕರನ್ನು ಕರೊನಾ ವಾರಿಯರ್ಸ್ ಎಂದು ಘೋಷಿಸಲು ಮುಂದಾಗಬೇಕು ಎಂದು ಟ್ರೇಸಿಂಗ್ ಸಮಿತಿ ಶಿಕ್ಷಕರ ಒತ್ತಾಯವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts