More

    ಕರೊನಾ ನಡುವೆ ವರುಣಾಘಾತ

    ಬೆಳಗಾವಿ: ನಾಲ್ಕೈದು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ, ಗುರುವಾರವೂ ಸಹ ತನ್ನ ಅಬ್ಬರ ಮುಂದುವರಿಸಿತ್ತು. ಮಳೆಯಿಂದಾಗಿ ನಗರದ ವಿವಿಧ ಬಡವಾಣೆಗಳಲ್ಲಿ ಹಳೇ ಕಟ್ಟಡಗಳು ಹಾಗೂ ಮನೆಗಳು ಹಾನಿಗೊಂಡಿವೆ. ಮರಗಳು ನೆಲಕ್ಕುರುಳಿದ ಪರಿಣಾಮ ಪ್ರಮುಖ ರಸ್ತೆಗಳು ಬಂದ್ ಆಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು.

    ಖಡೇಬಜಾರ್, ಮಾರುತಿ ಗಲ್ಲಿ, ಗಣಪತಿ ಗಲ್ಲಿ, ಬೋಗಾರ ವೇಸ್, ಬಸವೇಶ್ವರ ವೃತ್ತ, ಆರ್‌ಪಿಡಿ ವೃತ್ತ, ಕಾಲೇಜು ರಸ್ತೆ, ಜಿಲ್ಲಾಸ್ಪತ್ರೆ ರಸ್ತೆ, ಕ್ಲಬ್ ರಸ್ತೆ, ಹಳೇ ಪಿಬಿ ರಸ್ತೆ, ಕೋಟೆ ಕೆರೆ ರಸ್ತೆ, ಎಪಿಎಂಸಿ ರಸ್ತೆ ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ಗ್ರಾಹಕರಿಲ್ಲದೆ ವ್ಯಾಪಾರ ವಹಿವಾಟು ಸ್ಥಗಿತ ಗೊಂಡಿತ್ತು. ತಳ್ಳುಗಾಡಿಗಳ ವ್ಯಾಪಾರಿಗಳು ಕಟ್ಟಡಗಳ ಆಸರೆ ಪಡೆದಿದ್ದರು.

    ರಸ್ತೆಗಳಲ್ಲಿ ಗುಂಡಿ: ಅನಗೋಳ, ಕಪಿಲೇಶ್ವರ ದೇವಸ್ಥಾನ, ರೈಲ್ವೆ ನಿಲ್ದಾಣ, ಹಳೇ ಪಿಬಿ ರಸ್ತೆ, ಚನ್ನಮ್ಮ ನಗರ, ರಾಮತೀರ್ಥ ನಗರ, ಮಹಾಂತೇಶ ನಗರ, ಉದ್ಯಮಭಾಗ, ಆಟೋ ನಗರ, ಸಿಟಿ ಬಸ್ ನಿಲ್ದಾಣ ಮತ್ತಿತರ ಪ್ರದೇಶಗಳ ರಸ್ತೆಗಳು ಮಳೆಯಿಂದಾಗಿ ಹಾನಿಗೊಂಡಿವೆ. ಅಲ್ಲದೆ, ಗುಂಡಿಗಳಲ್ಲಿ ಮಳೆ, ಚರಂಡಿ ನೀರು ಸಂಗ್ರಹಗೊಂಡ ಕಾರಣ ಸವಾರರು ಪರದಾಡಿದರು. ಗುತ್ತಿಗೆದಾರರು ಹಾಗೂ ಅಧಿಕಾರಿಗಳು ನಿರ್ಲಕ್ಷೃಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

    ಪರದಾಡಿದ ಜನ: ನಗರದ ಕೆಲ ಪ್ರದೇಶ ಗಳಲ್ಲಿ ಮಳೆಯಿಂದಾಗಿ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಲಿದೆ.ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ಕೊಳಚೆ ನೀರು ನುಗ್ಗಿ ಜನ ಪರದಾಡುವಂತಾಯಿತು. ಬಳ್ಳಾರಿ ನಾಲಾ ತುಂಬಿ ಹರಿಯುತ್ತಿರುವುದರಿಂದ ಬಿ.ಎಸ್.ಯಡಿಯೂರಪ್ಪ ಮಾರ್ಗದ ಒಂದು ಭಾಗದ ರಸ್ತೆ ಬಂದ್ ಆಗಿದೆ.

    ಬಸವನ ಕುಡಚಿ ಗ್ರಾಮದ ಬಳಿ ಬೆಳಗಾವಿ-ಬಾಗಲಕೋಟೆ ರಾಜ್ಯ ಹೆದ್ದಾರಿಯ ಮೇಲೆಯೇ ನೀರು ಹರಿಯುತ್ತಿದೆ. ದಿನಪೂರ್ತಿ ಮಳೆ ಇದ್ದ ಹಿನ್ನೆಲೆಯಲ್ಲಿ
    ಹಾಗೂ ಕರೊನಾ ಸೋಂಕು ತಗಲುವ ಭೀತಿಯಿಂದ ನಗರದ ನಿವಾಸಿಗಳು ಮನೆಯಿಂದ ಹೊರ ಬರಲು ಹಿಂದೇಟು ಹಾಕಿದರು.

    ಮಳೆಯಿಂದ ಜನರಿಗೆ ಸಮಸ್ಯೆಯಾಗಂದತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮಳೆ ನೀರು ಸರಾಗವಾಗಿ ಹರಿಯಲು ಚರಂಡಿ, ನಾಲಾಗಳನ್ನು ಸ್ವಚ್ಛಗೊಳಿಸಲಾಗಿದೆ. ಮರಾಠಾ ಬಡಾವಣೆಯಲ್ಲಿ ಮಳೆ ನೀರು ನಿಂತು ಸಮಸ್ಯೆಯಾಗಿದೆ. ಸಮಸ್ಯೆ ಪರಿಹರಿಸಲು ಕ್ರಮ ವಹಿಸಲಾಗಿದೆ. ನಾನಾವಾಡಿಯಲ್ಲಿನ ಖಾಲಿ ಪ್ರದೇಶಗಳಲ್ಲಿನ ನೀರು ಏಕಾಏಕಿ ಬರುತ್ತಿರುವುದರಿಂದ ನಗರದಲ್ಲಿ ಸಮಸ್ಯೆ ಉಂಟಾಗಿದೆ.
    | ಕೆ.ಎಚ್. ಜಗದೀಶ ಪಾಲಿಕೆ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts