More

    ಹಣ್ಣು, ತರಕಾರಿ ಸಾಗಿಸುತ್ತಿದ್ದ ಚಾಲಕನಿಗೂ ಕರೊನಾ, ರಾತ್ರೋರಾತ್ರಿ ಸೀಲ್​ಡೌನ್​!

    ಗುಂಡ್ಲುಪೇಟೆ: ಚಾಮರಾಜನಗರವು ನಿನ್ನೆ ಬೆಳಗ್ಗೆ ಕರೊನಾ ಮುಕ್ತ ಜಿಲ್ಲೆ ಎಂಬ ಪಟ್ಟಕ್ಕೇರಿತ್ತು. ಇದರ ಬೆನ್ನಲ್ಲೇ ಮತ್ತೆ ತಲ್ಲಣ ಮೂಡಿದ್ದು, ಗುಂಡ್ಲುಪೇಟೆ ಪಟ್ಟಣದ ಲಾರಿ ಚಾಲಕನೊಬ್ಬನಲ್ಲಿ ಕರೊನಾ ಸೋಂಕು ಪತ್ತೆಯಾಗಿದ್ದು, ಹಸಿರು ವಲಯ ಎನಿಸಿಕೊಂಡಿದ್ದ ಪ್ರದೇಶದಲ್ಲೀಗ ಆತಂಕದ ಕಾರ್ಮೋಡ ಕವಿದಿದೆ.

    ಗುಂಡ್ಲುಪೇಟೆ ಪಟ್ಟಣದ ಮಹದೇವಪ್ರಸಾದ್ ಬಡಾವಣೆಯ 35 ವರ್ಷದ ಲಾರಿ ಚಾಲಕನೊಬ್ಬನಿಗೆ ಸೋಂಕು ದೃಢಪಟ್ಟಿದೆ. ಶುಕ್ರವಾರ ರಾತ್ರಿಯೇ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಹಾಗೂ ಎಸ್ಪಿ ಎಚ್​.ಡಿ. ಆನಂದಕುಮಾರ್ ನೇತೃತ್ವದಲ್ಲಿ ಮಹಾದೇವಪ್ರಸಾದ್ ನಗರವನ್ನು‌ ಸೀಲ್‌ಡೌನ್ ಮಾಡಲಾಗಿದೆ. ಸೋಂಕಿತನ ಟ್ರಾವೆಲ್​ ಹಿಸ್ಟರಿಯೂ ಬೆಚ್ಚಿ ಬೀಳಿಸುವಂತಿದೆ. ಇದನ್ನೂ ಓದಿರಿ ಜೈಲಿಂದ ಬಿಡುಗಡೆಯಾದ ರೌಡಿ ಕೊರಂಗು ಕೃಷ್ಣನನ್ನು ಕರೆದೊಯ್ಯಲು ಬಂದದ್ದು 70 ಕಾರುಗಳು!

    ಸೋಂಕಿತ ವ್ಯಕ್ತಿಯು ತಮಿಳುನಾಡಿಗೆ ಕಲ್ಲಂಗಡಿ ಹಾಗೂ ಇನ್ನಿತರ ಹಣ್ಣು, ತರಕಾರಿಯನ್ನು ಲಾರಿಯಲ್ಲಿ ಸಾಗಿಸುತ್ತಿದ್ದ. ಕಳೆದ 3 ದಿನಗಳಿಂದ ಜ್ವರ ಮತ್ತು ನೆಗಡಿಯಿಂದ ಬಳಲುತ್ತಿದ್ದ ಈತ ಗುಂಡ್ಲುಪೇಟೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ. ಈತನ ಹಿನ್ನೆಲೆ ಗಮನಿಸಿ ಕರೊನಾ ಪರೀಕ್ಷೆ ಮಾಡಿದಾಗ ಸೋಂಕು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

    ಹತ್ತನ್ನೆರಡು ದಿನಗಳ ಹಿಂದೆ ಜಿಲ್ಲೆಗೆ ಆಗಮಿಸಿದ್ದ ಮುಂಬೈ ಮೂಲದ ವಿದ್ಯಾರ್ಥಿಯೊಬ್ಬನಿಗೆ ಕರೊನಾ ದೃಢಪಟ್ಟಿದ್ದು. ಗುಣಮುಖನಾದ ಆತ ನಿನ್ನೆಯಷ್ಟೇ(ಶುಕ್ರವಾರ) ಬಿಡುಗಡೆಯಾಗಿದ್ದ. ಇದಾದ ಕೆಲವೇ ತಾಸುಗಳಲ್ಲಿ ಮತ್ತೊಂದು ಕರೊನಾ ಕೇಸ್ ಪತ್ತೆಯಾಗುವ ಮೂಲಕ ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿದೆ. ಸೋಂಕಿತ ಚಾಲಕನನ್ನು ಚಾಮರಾಜನಗರ ಕೋವಿಡ್ ಆಸ್ಪತ್ರೆಗೆ ರವಾನಿಸಲಾಗಿದೆ.

    ಇದನ್ನೂ ಓದಿರಿ ಮದುವೆ ಮನೆಯ ಅಡುಗೆ ಭಟ್ಟನಿಗೂ ಕರೊನಾ ಸೋಂಕು!

    ಮದುವೆ ಮನೆಯ ಅಡುಗೆ ಭಟ್ಟನಿಗೂ ಕರೊನಾ ಸೋಂಕು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts