More

    ಮೂಡಿಗೆರೆಯಲ್ಲಿ ಕರೊನಾ ಮಾರ್ಗಸೂಚಿ ಉಲ್ಲಂಘನೆ

    ಮೂಡಿಗೆರೆ: ಸರ್ಕಾರದ ಮಾರ್ಗಸೂಚಿ ಉಲ್ಲಂಘನೆ ಹೆಚ್ಚುತ್ತಿದ್ದು, ತಾಲೂಕಿನಲ್ಲಿ ಕರೊನಾ ಸೋಂಕು ವ್ಯಾಪಿಸುವ ಭೀತಿ ಹೆಚ್ಚಾಗಿದೆ. ಜತೆಗೆ ಆರೋಗ್ಯ ಇಲಾಖೆ ಕೂಡ ನಿರ್ಲಕ್ಷ್ಯ ಮಾಡುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

    ಕರೊನಾ ಸೋಂಕು ದೃಢಪಟ್ಟವರನ್ನು ಹೋಮ್ ಐಸೋಲೇಷನ್​ನಲ್ಲಿರಿಸಿ ಅವರು ವಾಸಿಸುವ ಪ್ರದೇಶನ್ನು ಕಂಟೇನ್ಮೆಂಟ್ ವಲಯ ಎಂದು ಘೊಷಿಸದ ಕಾರಣ ಸೋಂಕಿತರು ಪಟ್ಟಣದಲ್ಲಿ ಎಲ್ಲೆಂದರಲ್ಲಿ ಓಡಾಡುತ್ತಿದ್ದಾರೆ. ಅಲ್ಲದೆ ವಾರದ ಸಂತೆಗೂ ಬರುತ್ತಿದ್ದು, ಆತಂಕ ಮತ್ತಷ್ಟು ಹೆಚ್ಚಾಗಿದೆ.

    ಕಳೆದ ಏಪ್ರಿಲ್​ನಲ್ಲಿ ಪಟ್ಟಣದಲ್ಲಿ ಮೊದಲ ಕರೊನಾ ಸೋಂಕು ಪ್ರಕರಣ ಬೆಳಕಿಗೆ ಬಂದಾಗ ಜಿಲ್ಲಾಡಳಿತ ಸೋಂಕಿತರ ಮನೆ 100 ಮೀ ವ್ಯಾಪ್ತಿಯನ್ನು ಕಂಟೇನ್ಮೆಂಟ್ ವಲಯವೆಂದು ಹಾಗೂ ಸುತ್ತಲಿನ 1 ಕಿ.ಮೀ ವ್ಯಾಪ್ತಿಯನ್ನು ಬಫರ್ ವಲಯವೆಂದು ಘೊಷಿಸಿ ಪ್ರಾಥಮಿಕ ಮತ್ತು ದ್ವಿತೀಯ ಸಂರ್ಪತರನ್ನು ಕಡ್ಡಾಯ ಹೋಮ್ ಕ್ವಾರಂಟೈನ್​ಗೆ ಒಳಪಡಿಸಲಾಗುತ್ತಿತ್ತು. ನಂತರ ಸೋಂಕು ಹೆಚ್ಚಾಗುತ್ತಿದ್ದಂತೆ ಸೋಂಕಿತರ ಅಕ್ಕಪಕ್ಕದ ಒಂದೆರಡು ಮನೆ ಸೇರಿಸಿ ಕಂಟೇನ್ಮೆಂಟ್ ವಲಯವೆಂದು ಘೊಷಿಸಿ ಬ್ಯಾನರ್ ಹಾಕಿ, ಬ್ಯಾರಿಕೇಡ್ ಅಳವಡಿಸಿ ಕಟ್ಟುನಿಟ್ಟು ನಿಯಮ ಪಾಲಿಸಲಾಗುತ್ತಿತ್ತು. ಆದರೆ ಈ ನಿಯಮಗಳನ್ನು ಈಗ ಪಾಲನೆ ಮಾಡುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ. ಕರೊನಾ ಸೋಂಕಿತರು ಸಾರ್ವಜನಿಕವಾಗಿ ಓಡಾಡಿದರೆ ಅವರ ಮೇಲೆ ಕೇಸ್ ದಾಖಲಿಸಬಹುದು. ಇದರ ಅರಿವೇ ಇಲ್ಲದೆ ಸೋಂಕಿತರು ಸುತ್ತಾಡುತ್ತಿದ್ದಾರೆ. ಇನ್ನಾದರೂ ಎಚ್ಚೆತ್ತುಕೊಂಡು ತಮ್ಮ ಆರೋಗ್ಯದ ಜತೆ ಸಾಮಾಜಿಕ ಜವಾಬ್ದಾರಿಯನ್ನೂ ಅರಿತು ಕರೊನಾ ನಿಯಮ ಪಾಲಿಸಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts