More

    ಕರೊನಾ ಎಫೆಕ್ಟ್​- ತ್ಯಾಜ್ಯ ಸಂಗ್ರಹಣೆಗೆ ಪ್ರತ್ಯೇಕ ಏಜೆನ್ಸಿ 8 ವಲಯಕ್ಕೆ 4 ಏಜೆನ್ಸಿ ನೇಮಕ

    ಬೆಂಗಳೂರು: ಕರೊನಾ ಶಂಕಿತರು ಹೋಮ್ ಕ್ವಾರಂಟೈನ್​ನಲ್ಲಿರುವ ಮನೆಗಳ ತ್ಯಾಜ್ಯ ಸಂಗ್ರಹಿಸಿ, ವಿಲೇವಾರಿ ಮಾಡಲು ಪಾಲಿಕೆ ಪ್ರತ್ಯೇಕ ಏಜೆನ್ಸಿಗಳನ್ನು ನಿಯೋಜಿಸಿದೆ. ಸೋಂಕಿತರು ಬಳಸುವ ವಸ್ತುಗಳನ್ನು ಆರೋಗ್ಯವಂತರು ಮುಟ್ಟಿದರೆ ಅವರಿಗೆ ಸೋಂಕು ತಗುಲುವ ಸಾಧ್ಯತೆ ಹಿನ್ನೆಲೆಯಲ್ಲಿ ಮಾ.30 ರಂದು ಹೈಕೋರ್ಟ್ ಪೌರಕಾರ್ವಿುಕರ ಸುರಕ್ಷತೆ ದೃಷ್ಟಿಯಿಂದ ಸೋಂಕು ಶಂಕಿತರ ಮನೆಗಳ ತ್ಯಾಜ್ಯ ಸಂಗ್ರಹಿಸಲು ಪ್ರತ್ಯೇಕ ವ್ಯವಸ್ಥೆ ಮಾಡುವಂತೆ ಆದೇಶ ನೀಡಿತ್ತು.

    ನಗರದ ಎಲ್ಲ ಕ್ವಾರೆಂಟೈನ್ ಮನೆಗಳು, ಆಸ್ಪತ್ರೆಗಳು ಮತ್ತು ಕ್ಲಿನಿಕ್​ಗಳಲ್ಲಿ ಉತ್ಪಾದನೆಯಾಗುವ ಬಯೋ ಮೆಡಿಕಲ್ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿಗೆ 4 ಏಜೆನ್ಸಿಗಳನ್ನು ನೇಮಕ ಮಾಡಿ ಪಾಲಿಕೆ ಜಂಟಿ ಆಯುಕ್ತ ಸರ್ಫರಾಜ ಖಾನ್ ಆದೇಶ ಹೊರಡಿಸಿದ್ದಾರೆ.

    ಪಶ್ಚಿಮ ಮತ್ತು ರಾಜರಾಜೇಶ್ವರಿ ನಗರ ವಲಯಕ್ಕೆ ಮೆಡಿಕೇರ್ ಏಜೆನ್ಸಿ, ದಕ್ಷಿಣ ಮತ್ತು ಬೊಮ್ಮನಹಳ್ಳಿ ವಲಯಕ್ಕೆ ಮರಡಿ ಏಜೆನ್ಸಿ, ಪೂರ್ವ ಮತ್ತು ಮಹದೇವಪುರ ವಲಯಕ್ಕೆ ಅನಿ ಆಟೋ ಕ್ಲೇವ್ ಏಜೆನ್ಸಿ ಹಾಗೂ ದಾಸರಹಳ್ಳಿ ಮತ್ತು ಯಲಹಂಕ ವಲಯದಲ್ಲಿ ಪ್ರಜ್ವಲ್ ಬಯೋ ಮೆಡಿಕಲ್ ವೇಸ್ಟ್ ಮ್ಯಾನೇಜ್​ವೆುಂಟ್ ಏಜೆನ್ಸಿಗಳನ್ನು ನೇಮಕ ಮಾಡಲಾಗಿದೆ.

    ಉಚಿತ ಊಟ ಇನ್ನು ಇಂದಿರಾ ಕ್ಯಾಂಟೀನ್​ನಲ್ಲಿ ಸಿಗಲ್ಲ- ಅಂಥದ್ದೇನಾಯಿತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts