More

    ಸತತ 2ನೇ ದಿನವೂ 400ರ ಗಡಿದಾಟಿದ ಕರೊನಾ

    ತುಮಕೂರು: ಜಿಲ್ಲೆಯಲ್ಲಿ ಸತತ ಎರಡನೇ ದಿನವೂ ಕರೊನಾ ಸೋಂಕಿತರ ಸಂಖ್ಯೆ 400ರ ಗಡಿದಾಟಿದ್ದು, ಬುಧವಾರ 435 ಜನರಿಗೆ ಸೋಂಕು ದೃಢವಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 13434ಕ್ಕೇರಿದೆ.
    ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 49, ಗುಬ್ಬಿ 29, ಕೊರಟಗೆರೆ 13, ಕುಣಿಗಲ್ 24, ಮಧುಗಿರಿ 37, ಪಾವಗಡ 43, ಶಿರಾ 48, ತಿಪಟೂರು 45, ತುಮಕೂರು 127 ಹಾಗೂ ತುರುವೇಕೆರೆ ತಾಲೂಕಿನಲ್ಲಿ 20 ಒಟ್ಟು 435ಜನರಿಗೆ ಸೋಂಕು ದೃಢವಾಗಿದೆ.

    ಸೋಂಕಿನಿಂದ ಗುಣಮುಖರಾಗಿ 356 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ 10826 ಜನರು ಗುಣಮುಖರಾದಂತಾಗಿದೆ, ವಿವಿಧ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ 2037 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಧವಾರ ಕರೊನಾ 6 ಜನರನ್ನು ಬಲಿತೆಗೆದುಕೊಂಡಿದ್ದು, ವಿವಿಧ ಆಸ್ಪತ್ರೆಗಳ ತುರ್ತು ನಿಗಾಘಟಕಗಳಲ್ಲಿ 117 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

    ಬಹುತೇಕ ಬಡವರು ಖಾಸಗಿ ಆಸ್ಪತ್ರೆಯಲ್ಲಿ ದುಭಾರಿ ಚಿಕಿತ್ಸೆ ಪಡೆಯಲಾಗದೆ ದೇವರ ಮೇಲೆ ಭಾರಹಾಕಿ ಕೈಚೆಲ್ಲಿದ್ದಾರೆ. ಜಿಲ್ಲೆಯಲ್ಲಿ 1.23ಲಕ್ಷ ಜನರಿಗೆ ಪರೀಕ್ಷೆ ನಡೆಸಲಾಗಿದ್ದು, 1.05ಲಕ್ಷ ಜನರ ವರದಿ ನೆಗೆಟಿವ್ ಬಂದಿರುವುದು ಸಮಾಧಾನವಿದೆ, ಬುಧವಾರದ ಪ್ರಕರಣಗಳಲ್ಲಿ 269 ಪುರುಷರು, 166 ಮಹಿಳೆಯರು ಹಾಗೂ 4 ಮಕ್ಕಳಿದ್ದಾರೆ. ಮಧುಗಿರಿಯಲ್ಲಿ ಒಬ್ಬರು, ಪಾವಗಡ 2, ಶಿರಾ 1 ಹಾಗೂ ತುಮಕೂರು ನಗರದಲ್ಲಿ ಇಬ್ಬರು ಒಟ್ಟು ಆರು ಜನರು ಮೃತರಾಗಿದ್ದಾರೆ.

    ಕಾಂಗ್ರೆಸ್ ಮುಖಂಡ ಸೋಂಕಿಗೆ ಬಲಿ: ಕಾಂಗ್ರೆಸ್ ಮುಖಂಡ ತು.ಬಿ.ಮಲ್ಲೇಶ್(69) ಕರೊನಾ ಸೋಂಕಿನಿಂದ ಬುಧವಾರ ಮೃತಪಟ್ಟಿದ್ದಾರೆ. ನಗರದ ಚಿಕ್ಕಪೇಟೆಯ ಹರಿಸಿಂಗರಬೀದಿಯ ತು.ಬಿ.ಮಲ್ಲೇಶ್ ಜಲಾನಯನ ಅಭಿವೃದ್ಧಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ನಂತರ ಜಿಲ್ಲಾ ಕಾಂಗ್ರೆಸ್‌ನ ಪರಿಶಿಷ್ಟ ಪಂಗಡಗಳ ಜಿಲ್ಲಾಧ್ಯಕ್ಷರಾಗಿದ್ದರು. ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತರಿಗೆ ಪತ್ನಿ, ಪುತ್ರ ಇದ್ದಾರೆ. ಅಂತ್ಯಕ್ರಿಯೆ ತುಮಕೂರಿನ ಗಾರ್ಡನ್ ರಸ್ತೆಯಲ್ಲಿರುವ ಚಿತಾಗಾರದಲ್ಲಿ ಕರೊನಾ ಮಾರ್ಗಸೂಚಿಯಂತೆ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts