More

    ಕರೊನಾ ಸವಾಲು ಇನ್ನೂ ಮುಗಿದಿಲ್ಲ; ಅತಿಹೆಚ್ಚು ಸಕ್ರಿಯ ಪ್ರಕರಣಗಳಿರುವ ಐದು ರಾಜ್ಯಗಳಿವು

    ನವದೆಹಲಿ: ಜಗತ್ತಿನಲ್ಲಿ ಕರೊನಾ ಪರಿಸ್ಥಿತಿ ಸುಧಾರಿಸುತ್ತಿರುವ ಕುರುಹುಗಳು ಕಂಡುಬರುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿಕೆ ನೀಡಿದ ಬೆನ್ನಲ್ಲೇ ಭಾರತದಲ್ಲಿ ಇನ್ನೂ ಪ್ರತಿದಿನ 20,000 ಕರೊನಾ ಕೇಸುಗಳು ವರದಿಯಾಗುತ್ತಿವೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಇಂದು ದೇಶದ ಕರೊನಾ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡಿದ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿಗಳು ದೇಶದ ಐದು ರಾಜ್ಯಗಳು ಅತಿಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿವೆ ಎಂದಿದ್ದಾರೆ.

    ದೇಶದ ಅರ್ಧದಷ್ಟು ಕರೊನಾ ಪ್ರಕರಣಗಳನ್ನು ಕೇರಳ ರಾಜ್ಯವೇ ಹೊಂದಿದ್ದರೆ, ಎರಡನೇ ಸ್ಥಾನದಲ್ಲಿರುವುದು ಮಹಾರಾಷ್ಟ್ರ. ಕರ್ನಾಟಕ ಐದನೇ ಸ್ಥಾನದಲ್ಲಿದೆ. ಹಾಲಿ ಕೇರಳದಲ್ಲಿ 1,22,996 ಸಕ್ರಿಯ ಪ್ರಕರಣಗಳು, ಮಹಾರಾಷ್ಟ್ರದಲ್ಲಿ 36,767, ತಮಿಳುನಾಡಿನಲ್ಲಿ 16,637, ಮಿಜೋರಾಂನಲ್ಲಿ 16,075 ಮತ್ತು ಕರ್ನಾಟಕದಲ್ಲಿ 11,848 ಸಕ್ರಿಯ ಪ್ರಕರಣಗಳಿವೆ ಎನ್ನಲಾಗಿದೆ.

    ಇದನ್ನೂ ಓದಿ: ಕರ್ನಾಟಕಕ್ಕೆ ಬರುವುದು ಅಂದ್ರೆ ನನಗೆ ತುಂಬಾ ಇಷ್ಟ: ರಾಷ್ಟ್ರಪತಿ

    ದೇಶದಲ್ಲಿ ಪ್ರತಿನಿತ್ಯ ಇನ್ನೂ 20,000 ಪ್ರಕರಣಗಳು ವರದಿಯಾಗುತ್ತಿವೆ. ಎರಡನೇ ಅಲೆಯ ನಂತರ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿದಿದ್ದರೂ, ಹಾಲಿ ದೇಶದಲ್ಲಿ ಸುಮಾರು 2,44,198 ಸಕ್ರಿಯ ಪ್ರಕರಣಗಳಿವೆ. ಇದು ಸಮುದಾಯದ ಒಳಗೇ ಸೋಂಕಿನ ಹರಡುವಿಕೆ ಹೆಚ್ಚಾಗಿದೆ ಎಂದು ತೋರಿಸುತ್ತದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

    ದೇಶದಲ್ಲಿ ಒಟ್ಟಾರೆ ಚೇತರಿಕೆ ದರವು ಶೇಕಡ 97.95ರಷ್ಟಿದೆ. ಒಟ್ಟು 57.87 ಕೋಟಿ ಪರೀಕ್ಷೆಗಳನ್ನು ಈವರೆಗೆ ನಡೆಸಲಾಗಿದೆ. ದೇಶಾದ್ಯಂತ 28 ಜಿಲ್ಲೆಗಳಲ್ಲಿ ಶೇಕಡ 5 ರಿಂದ 10 ರಷ್ಟು ಪಾಸಿಟಿವಿಟಿ ದರ ಇದ್ದು, ಕರೊನಾದ ಸವಾಲು ಇನ್ನೂ ಮುಗಿದಿಲ್ಲ ಎಂದು ಸರ್ಕಾರ ಹೇಳಿದೆ. (ಏಜೆನ್ಸೀಸ್)

    ಪಿಎಂ ಮೋದಿಗೆ ಅಂಚೆ ಕಾಗದ ಬರೆದ ಸಿಎಂ ಬಸವರಾಜ ಬೊಮ್ಮಾಯಿ!

    VIDEO| ಪ್ರತಿಭಟನಕಾರರ ಮೇಲೆ ವಾಹನ ಹರಿದುಹೋದ ಸ್ಪಷ್ಟ ಚಿತ್ರಣ! ನ್ಯಾಯ ಒದಗಿಸಿ ಎಂದ ಬಿಜೆಪಿ ಸಂಸದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts