ಕರ್ನಾಟಕಕ್ಕೆ ಬರುವುದು ಅಂದ್ರೆ ನನಗೆ ತುಂಬಾ ಇಷ್ಟ: ರಾಷ್ಟ್ರಪತಿ

ramanatha kovinda
Published on

ಚಾಮರಾಜನಗರ: ನಗರ ಹೊರವಲಯದ ಯಡಬೆಟ್ಟದಲ್ಲಿ ಬಳಿ ನಿರ್ಮಿಸಿರುವ 450 ಹಾಸಿಗೆಯ ಸರ್ಕಾರಿ ಆಸ್ಪತ್ರೆಯನ್ನ ಗುರುವಾರ ಉದ್ಘಾಟಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಕನ್ನಡದಲ್ಲೇ ಭಾಷಣ ಆರಂಭಿಸಿದರು. ನನಗೆ ಕರ್ನಾಟಕಕ್ಕೆ ಬರುವುದು ಅಂದ್ರೆ ತುಂಬಾ ಇಷ್ಟ. ನಿಮ್ಮ ಜತೆ ಇರುವುದು ಮತ್ತಷ್ಟು ಸಂತೋಷ ಎಂದು ರಾಷ್ಟ್ರಪತಿ ಹೇಳಿತ್ತಿದ್ದಂತೆ ನೆರೆದಿದ್ದ ಜನರು ಚಪ್ಪಾಳೆಯ ಸುರಿಮಳೆಗೈದರು.

ದಸರಾ ಹಬ್ಬದಂದು ಆಸ್ಪತ್ರೆ ಉದ್ಘಾಟನೆಯಾಗಿರುವುದು ಒಳ್ಳೆಯದು. ಚಾಮರಾಜನಗರದಲ್ಲಿ‌ ಮೆಡಿಕಲ್ ಕಾಲೇಜ್ ಆರಂಭವಾಗಿರುವುದು ಖುಷಿಯ ವಿಚಾರ. ಆಯುಶ್ಮಾನ್ ಆರೋಗ್ಯ ಕರ್ನಾಟಕದಲ್ಲಿ ಸಿಮ್ಸ್ ಮೂರನೇ‌ ರ್ಯಾಂಕ್ ಗಳಿಸಿರುವುದು‌ ಖುಷಿಯ‌ ವಿಚಾರ. ದೇಶದ ಪ್ರತಿಯೊಂದು ಮೂಲೆಗೂ ಆರೋಗ್ಯ ಸೇವೆ ವಿಸ್ತರಿಸುವುದು ಅತ್ಯಂತ ಅವಶ್ಯಕತೆ ಆಗಿದೆ. ಕರೊನಾ ಸಂದರ್ಭದಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿ ಕರೊನಾ‌ ವಾರಿಯರ್ಸ್ ಆಗಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ನಮ್ಮ ದೇಶದ ಹೆಮ್ಮೆಯನ್ನ ಹೆಚ್ವಿಸಿದ್ದಾರೆ. ದೇಶದ ಅಭಿವೃದ್ಧಿಯಲ್ಲಿ ಆರೋಗ್ಯ ಮತ್ತು ಶಿಕ್ಷಣ ಎರಡೂ ಕ್ಷೇತ್ರ ಭದ್ರ ಬುನಾದಿಯಲ್ಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net