More

    ದ.ಕ. 350, ಉಡುಪಿ 227 ಪಾಸಿಟಿವ್

    ಮಂಗಳೂರು/ಉಡುಪಿ: ದ.ಕ. ಜಿಲ್ಲೆಯಲ್ಲಿ ಗುರುವಾರ 9 ಸಾವು ಸಹಿತ 350 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 182 ಲಕ್ಷಣ ಸಹಿತ, 168 ಲಕ್ಷಣ ರಹಿತರು ಸೇರಿದ್ದಾರೆ. 154 ಮಂದಿ ಮಂಗಳೂರಿನವರು, 56 ಬಂಟ್ವಾಳ, 26 ಪುತ್ತೂರು, ಸುಳ್ಯ 13, ಬೆಳ್ತಂಗಡಿ 48, ಇತರ ಜಿಲ್ಲೆ 53 ಮಂದಿ. ಒಟ್ಟು ಕರೊನಾ ಪಾಸಿಟಿವ್ ಸಂಖ್ಯೆ ಜಿಲ್ಲೆಯಲ್ಲಿ 16,112ಕ್ಕೇರಿದ್ದು ಮೃತರ ಸಂಖ್ಯೆ 427ಕ್ಕೇರಿದೆ. ಗುರುವಾರ 170 ಮಂದಿ ರೋಗಮುಕ್ತರಾಗಿದ್ದು ಡಿಸ್‌ಚಾರ್ಜ್ ಆದವರ ಸಂಖ್ಯೆ 12,412ಕ್ಕೆ ತಲುಪಿದೆ. ಒಟ್ಟು 3,273 ಸಕ್ರಿಯ ಪ್ರಕರಣಗಳಿವೆ.

    ಉಡುಪಿ ಜಿಲ್ಲೆಯಲ್ಲಿ ಅನಾರೋಗ್ಯಕ್ಕೀಡಾಗಿ ಮೃತಪಟ್ಟ 4 ಮಂದಿ ಸಹಿತ 227 ಮಂದಿಗೆ ಗುರುವಾರ ಕರೊನಾ ಪಾಸಿಟಿವ್ ವರದಿಯಾಗಿದೆ. ಸಾವಿನ ಸಂಖ್ಯೆ 126ಕ್ಕೆ, ಒಟ್ಟು ಸೋಂಕಿತರ ಸಂಖ್ಯೆ 13562ಕ್ಕೆೆ ಏರಿಕೆಯಾಗಿದೆ. 560 ಮಂದಿಯ ಗಂಟಲ ದ್ರವ ಮಾದರಿಯನ್ನು ಕೋವಿಡ್ ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. ಇನ್ನೂ 317 ಮಂದಿಯ ವರದಿ ಬಾಕಿ ಇದೆ. 1897 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
    ಕಾಸರಗೋಡು ಜಿಲ್ಲೆಯ 140 ಮಂದಿ ಸೇರಿ ಕೇರಳದಲ್ಲಿ ಗುರುವಾರ 3349 ಮಂದಿಗೆ ಕೋವಿಡ್ ದೃಢಪಟ್ಟಿದ್ದು, 12 ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯ 127 ಮಂದಿ ಸೇರಿದಂತೆ 1657 ಮಂದಿ ಗುಣಮುಖರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts